ಬಂಟ್ವಾಳ (www.vknews.in) ; ಮಹಿಳೆಯೊಬ್ಬರು ಬಂಟ್ವಾಳ ತಾಲೂಕಿನ ಸಂಗಬೆಟ್ಟು ಸಮೀಪದ ಪುಚ್ಚಮೊಗರು ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಕ್ಕಿಪಾಡಿ ಗ್ರಾಮದ ಏರೋಡಿ ನಿವಾಸಿ ಜಾನ್ ಸಂತೋಷ್ ಡಿಸೋಜ ಅವರ ಪತ್ನಿ ವೀಟಾ ಮರಿನಾ ಡಿಸೋಜಾ (32) ಎಂಬುವವರೇ ಆತ್ಮಹತ್ಯೆಗೈದ ಮಹಿಳೆ.
ಶಿಕ್ಷಕಿ ವೃತ್ತಿ ಮಾಡಿಕೊಂಡಿದ್ದ ವೀಟಾ ಮರಿನಾ ಡಿಸೋಜಾ ಅವರು, ನಂತರ ವಿಮಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದರು. ಇವರು ಇತ್ತೀಚೆಗೆ ಹಣ ದುಪ್ಪಟ್ಟುಗೊಳಿಸುವ ಆಪ್ವೊಂದರಲ್ಲಿ 21 ಲಕ್ಷ ರೂ. ಮೊತ್ತದ ಹಣ ಕಳೆದುಕೊಂಡಿರುವ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರೊಂದನ್ನು ನೀಡಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.