ಯುಎಈ(ವಿಶ್ವಕನ್ನಡಿಗ ನ್ಯೂಸ್): ಜಿಸಿಸಿ ಗಲ್ಫ್ ಕಮಿಟಿ ಇದರ ವಾರ್ಷಿಕ ಮಹಾಸಭೆಯು ಕಳೆದ ಆದಿತ್ಯವಾರ ಸಂಜೆ ಯುಎಈ ಸಮಯ 9:30 ಕ್ಕೆ ಆನ್ಲೈನ್ ನಲ್ಲಿ ನಡೆಯಿತು.
ಕಮಿಟಿ ಅಧ್ಯಕ್ಷರಾದ ಅಶ್ರಫ್ ಜೀರ್ಮುಕ್ಕಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸಿದ್ದೀಕ್ ಅಮ್ಜದಿ ಉಸ್ತಾದ್ ಮೆತ್ತಡ್ಕ ರವರು ದುಆದ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಬಶೀರ್ ಗೂಡಂಗಡಿ ಇವರು ಉಧ್ಘಾಟಿಸಿ ಮಾತುಗಳನ್ನಾಡಿದರು. ವರದಿ ಮತ್ತು ಲೆಕ್ಕಪತ್ರಲನ್ನು ಕಾರ್ಯದರ್ಶಿ ನೌಷಾದ್ ದೊಡ್ಡಂಗಡಿಯವರು ವಾಚಿಸಿದರು.
ನಂತರ ನಡೆದ ಸಭೆಯಲ್ಲಿ 2024 -25 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಬಶೀರ್ ಗೂಡಂಗಡಿ ಸಲಹಾ ಸಮಿತಿ ಸದಸ್ಯರಾಗಿ ಹಸೈನಾರ್ ಗೂಡಂಗಡಿ, ಸಿದ್ದೀಕ್ ಅಮ್ಜದಿ ಮತ್ತಡ್ಕ. ಉಪಾಧ್ಯಕ್ಷರಾಗಿ ಇರ್ಷಾದ್ ತಳೂರು, ಪ್ರ.ಕಾರ್ಯದರ್ಶಿಯಾಗಿ ಶಫೀಕ್ ಮೇಲೆಬೈಲು, ಜೊತೆ ಕಾರ್ಯದರ್ಶಿಯಾಗಿ ನೌಷಾದ್ ದೊಡ್ಡಂಗಡಿ, ಕೋಶಾಧಿಕಾರಿಯಾಗಿ ಆಸಿಫ್ ಪಳ್ಳಿಕ್ಕಲ್, ಹಾಗೂ ಮೀಡಿಯಾ & ಹೆಲ್ಪ್ ವಿಂಗ್ ಕನ್ವಿನರ್ ಆಗಿ ರಶೀದ್ ಎಲಿಮಲೆ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಲೀಲ್ ಗೂಡಂಗಡಿ, ಶರೀಫ್ ಮೇಲೆಬೈಲು, ಇಸ್ಮಾಯೀಲ್ ಜೀರ್ಮುಕ್ಕಿ, ಹಾರಿಸ್ ಪಳ್ಳಿಕ್ಕಲ್, ಆಬಿದ್ ಜೀರ್ಮುಕ್ಕಿ, ಸಫ್ವಾನ್ ದೊಡ್ಡಂಗಡಿ, ಫಾಯಿಝ್ ಬಟ್ರಬೈಲ್ ಇವರುಗಳನ್ನು ಆರಿಸಲಾಯಿತು.
ನೌಷಾದ್ ದೊಡ್ಡಂಗಡಿ ಸ್ವಾಗತಿಸಿ ಶಫೀಕ್ ಮೇಲೆಬೈಲು ವಂಧಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.