ಮೈಸೂರು (www.vknews.in) ; ಡೀಲರ್ಗಳ ಬಳಿ ಆರ್ಥಿಕ ನೆರವಿನ ಆಯ್ಕೆಗಳು ಮತ್ತು ಸುಲಭತೆಯನ್ನು ಸುಧಾರಿಸಲು ಟಾಟಾ ಮೋಟಾಸ್ರ್ನ ಅಂಗಸಂಸ್ಥೆಗಳಾದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ (ಟಿಎಂಪಿವಿ) ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ (ಟಿಪಿಇಎಂ) ಕಂಪೆನಿಗಳು ಬಜಾಜ್ ಫಿನ್ಸರ್ವ್ ಲಿಮಿಟೆಡ್ನ ಅಂಗವಾಗಿರುವ ಬಜಾಜ್ ಫೈನಾನ್ಸ್ ಜೊತೆಗೆ ಕೈ ಜೋಡಿಸಿದೆ. ಭಾರತದ ಮುಂಚೂಣಿಯ ಮತ್ತು ವೈವಿಧ್ಯಮಯ ಹಣಕಾಸು ಸೇವೆಗಳ ಸಮೂಹ ಕಂಪೆನಿಗಳಲ್ಲಿ ಒಂದಾಗಿರುವ ಬಜಾಜ್ ಫೈನಾನ್ಸ್ ಈ ಮೂಲಕ ಪ್ಯಾಸೆಂಜರ್ ಮತ್ತು ಎಲೆಕ್ಟ್ರಿಕ್ ವಾಹನ ಡೀಲರ್ಗಳಿಗೆ ತನ್ನ ಸೇವೆಗಳನ್ನು ಇನ್ನಷ್ಟು ವಿಸ್ತರಿಸಿದೆ. ಈ ತಿಳಿವಳಿಕೆ ಒಪ್ಪಂದದಿಂದಾಗಿ ಟಿಎಂಪಿವಿ ಮತ್ತು ಟಿಪಿಇಎಂನ ಡೀಲರ್ಗಳಿಗೆ ಅತ್ಯಂತ ಕಡಿಮೆ ಅಡಮಾನದಲ್ಲಿ ಬಜಾಜ್ ಫೈನಾನ್ಸ್ ಆರ್ಥಿಕ ನೆರವು ಒದಗಿಸಲಿದೆ.
ಟಿಪಿಇಎಂನ ಚೀಫ್ ಫೈನಾನ್ಷಿಯಲ್ ಆಫೀಸರ್ ಮತ್ತು ಟಿಎಂಪಿವಿಯ ನಿರ್ದೇಶಕರಾದ ಧೀಮನ್ ಗುಪ್ತಾ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್ನ ಚೀಫ್ ಬಿಸಿನೆಸ್ ಆಫೀಸರ್ ಸಿದ್ಧಾರ್ಥ ಭಟ್ ಒಪ್ಪಂದಕ್ಕೆ ಸಹಿ ಮಾಡಿದರು.
ಸಹಯೋಗದ ಕುರಿತು ಮಾತನಾಡಿದ ಟಿಪಿಇಎಂನ ಚೀಫ್ ಫೈನಾನ್ಷಿಯಲ್ ಆಫೀಸರ್ ಮತ್ತು ಟಿಎಂಪಿವಿಯ ನಿರ್ದೇಶಕರಾದ ಧೀಮನ್ ಗುಪ್ತಾ ಅವರು “ನಮ್ಮ ಡೀಲರ್ ಪಾಲುದಾರರು ನಮ್ಮ ವಹಿವಾಟಿನ ಅವಿಭಾಜ್ಯ ಅಂಗವಾಗಿದ್ದಾರೆ. ಅವರಿಗೆ ಸುಲಭವಾಗಿ ವಹಿವಾಟು ನಡೆಸಲು ಪೂರಕವಾದ ಪರಿಹಾರಗಳನ್ನು ಒದಗಿಸಲು ನಾವು ಸದಾ ಸಿದ್ಧರಿದ್ದೇವೆ. ಜೊತೆಯಾಗಿ ಮಾರುಕಟ್ಟೆಯಲ್ಲಿ ನಾವು ಬೆಳೆಯಬೇಕಾಗಿದೆ. ನಮ್ಮ “ನ್ಯೂ ಫಾರ್ಎವರ್” ಪೆÇೀಟ್ರ್ಫೋಲಿಯೋದಿಂದಾಗಿ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಹಣಕಾಸು ಪರಿಹಾರಗಳನ್ನು ಒದಗಿಸಲು ಬಜಾಜ್ ಫೈನಾನ್ಸ್ ಜೊತೆಗೆ ಕೈಜೋಡಿಸಲು ಖುಷಿಯಾಗುತ್ತಿದೆ. ಇದರಿಂದಾಗಿ ನಮ್ಮ ಡೀಲರ್ ಪಾಲುದಾರರಿಗೆ ದುಡಿಯುವ ಬಂಡವಾಳ ಹೆಚ್ಚಿಸಿಕೊಳ್ಳಲು ಸಹಾಯಕವಾಗಲಿದೆ” ಎಂದು ಹೇಳಿದರು.
ಬಜಾಜ್ ಫೈನಾನ್ಸ್ ಲಿಮಿಟೆಡ್ನ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಅನೂಪ್ ಸಹಾ ಮಾತನಾಡಿ “ಬಜಾಜ್ ಫೈನಾನ್ಸ್ ತನ್ನ ಸಂಪನ್ಮೂಲಗಳನ್ನು ಬಳಸಿಕೊಂಡು ವೈಯಕ್ತಿಕವಾಗಿ ಮತ್ತು ವಹಿವಾಟಿಗಾಗಿ ಸದಾ ಸುಲಭದ ಹಣಕಾಸು ಪರಿಹಾರಗಳನ್ನು ಒದಗಿಸುತ್ತ ಬಂದಿದೆ. ಈ ಆರ್ಥಿಕ ನೆರವಿನ ಕಾರ್ಯಕ್ರಮದ ಮೂಲಕ ನಾವು ಟಿಎಂಪಿವಿಮತ್ತು ಟಿಪಿಇಎಂನ ಅಧಿಕೃತ ಪ್ಯಾಸೆಂಜರ್ ಮತ್ತು ಎಲೆಕ್ಟ್ರಿಕ್ ವಾಹನ ಡೀಲರ್ಗಳಿಗೆ ಬಂಡವಾಳ ಕ್ರೋಢೀಕರಣಕ್ಕೆ ಸಹಾಯ ಮಾಡಲಿದ್ದು, ಆ ಮೂಲಕ ವಾಹನ ಮಾರುಕಟ್ಟೆಯಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳಲು ನೆರವಾಗಲಿದ್ದೇವೆ. ಪ್ರಸ್ತುತ ಪಾಲುದಾರಿಕೆ ಡೀಲರ್ಗಳಿಗೆ ಮಾತ್ರವಲ್ಲದೇ, ಭಾರತದಲ್ಲಿ ಆಟೋಮೋಟಿವ್ ಮಾರುಕಟ್ಟೆ ಬೆಳೆಯಲು ಪೂರಕವಾಗಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಟಿಎಂಪಿವಿ ಮತ್ತು ಟಿಪಿಇಎಂ ಭಾರತದ ಆಟೋಮೊಟಿವ್ ಮಾರುಕಟ್ಟೆಯಲ್ಲಿ ಐಸಿಇ ಮತ್ತು ಇವಿ ವಿಭಾಗಗಳೆರಡರಲ್ಲಿಯೂ ಹೊಸತನವನ್ನು ತುಂಬುತ್ತಿದೆ. ಕಂಪೆನಿಯ ವಿಶಿಷ್ಟ ನ್ಯೂ ಫಾರ್ಎವರ್ ತತ್ವದಿಂದಾಗಿ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಪರಿಚಯವಾಗುತ್ತಿದ್ದು, ಗ್ರಾಹಕರಿಂದ ವ್ಯಾಪಕ ಪ್ರಶಂಸೆ ಪಡೆಯುತ್ತಿದೆ.
ಬಜಾಜ್ ಫೈನಾನ್ಸ್ ಭಾರತದ ಅತ್ಯಂತ ವೈವಿಧ್ಯಮಯ ಎನ್ಬಿಎಫ್ಸಿಗಳಲ್ಲಿ ಒಂದಾಗಿದ್ದು, ಸಾಲ, ಠೇವಣಿ ಮತ್ತು ಪಾವತಿ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದೆ. 83.64 ಮಿಲಿಯಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. 2024ರ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಕಂಪೆನಿಯ ನಿರ್ವಹಣೆಯಡಿ ಬರುವ ಒಟ್ಟಾರೆ ಆಸ್ತಿಯ ಮೌಲ್ಯ 3,30,615 ಕೋಟಿ ರೂಪಾಯಿಗಳಾಗಿವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.