ಪುತ್ತೂರು (www.vknews.in) : ಪುತ್ತೂರು ಸಮೀಪ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಿತ್ತೂರು ಸಮೀಪದ ಸೂರ್ಯ ನಿವಾಸಿ ಲಿಂಗಪ್ಪ ಗೌಡರ ಪುತ್ರಿ, ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿನಿ ಮಂಜುಶ್ರೀ (20) ಮೃತ ಯುವತಿ.
ಕೆಲ ದಿನಗಳ ಹಿಂದೆ ಕಬಕ ಸಮೀಪದ ಕೂವೆತ್ತಿಲದಲ್ಲಿ ಆಲ್ಟೋ ಕಾರು ಹಾಗೂ ಆಕ್ಟಿವಾ ನಡುವೆ ನಡೆದ ಅಪಘಾತದಲ್ಲಿ ಮಂಜುಶ್ರೀ ಗಂಭೀರ ಗಾಯಗೊಂಡಿದ್ದರು. ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾತ್ರಿ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ಮನೆಯವರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.