(www.vknews.in) ; ಎನ್ಎನ್ ಓ ಕಮ್ಯೂನಿಟಿ ಸೆಂಟರ್ ಕುಂದಾಪುರ ವತಿಯಿಂದ ವಿದ್ಯಿಭ್ಯಾಸಕ್ಕಾಗಿ ಸಹಾಯಧನ ವಿತರಣ ಕಾರ್ಯಕ್ರಮ ಕಮ್ಯೂನಿಟಿ ಸೆಂಟರ್ ಮಿನಿ ಸಭಾ ಭವನದಲ್ಲಿ ನಡೆಯಿತು. ಹಂಗಳೂರಿನ ನಿವಾಸಿ ಅಬ್ದುಲ್ ಹಮೀದ್ ರವರ ಮಗನ ವಿದ್ಯಾಭ್ಯಾಸಕ್ಕಾಗಿ ಎನ್ಎನ್ ಓ ಕಮ್ಯೂನಿಟಿ ಸೆಂಟರ್ ಕುಂದಾಪುರದ ಅಧ್ಯಕ್ಷರಾದ ಅಬ್ದುಲ್ ಮುನಾಫ್ ಸಹಾಯಧನ ಹಸ್ತಾಂತರಿಸಿದರು. ಈ ಮೂದಲು ಕೆಲವು ದಿನಗಳ ಹಿಂದೆ ಹದಿನೈದು ವಿದ್ಯಾರ್ಥಿಗಳಿಗೆ ಸಹಾಯ ಧನ ವಿತರಿಸಲಾಗಿತ್ತು.
ಈ ಸಂದರ್ಭದಲ್ಲಿ ಕೆಸಿಸಿ ಕುಂದಾಪುರ ಪ್ರಧಾನ ಕಾರ್ಯದರ್ಶಿ ಹುಸೇನ್ ಹೈಕಾಡಿ,ಎನ್ಎನ್ ಓ ಉಡುಪಿ ಜಿಲ್ಲಾಧ್ಯಕ್ಷರಾದ ಮುಷ್ತಾಕ್ ಅಹ್ಮದ್ ಬೆಳ್ವೆ, ಟ್ರಸ್ಟಿಗಳಾದ ಮೌಲಾನ ಝಮೀರ್ ಅಹ್ಮದ್ ರಶಾದಿ, ಪೀರು ಸಾಹೇಬ್ ಉಡುಪಿ, ಪರ್ಯಾವರಣ ಸಂರಕ್ಷಣಾ ಸಮಿತಿ ಕರ್ನಾಟಕದ ಅಧ್ಯಕ್ಷರಾದ ಶೇಖ್ ವಾಹಿದ್ ದಾವೂದ್ ಉಡುಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹೀರ್ ನಾಖುದಾ ಗಂಗೊಳ್ಳಿ, ಜಿಲ್ಲಾ ಕೋಶಾಧಿಕಾರಿ ಯಾಹ್ಯ ನಖ್ವಾ ಮಲ್ಪೆ, ಕುಂದಾಪುರ ತಾಲೂಕು ಕಾರ್ಯದರ್ಶಿ ಫಝಲ್ ನೇರಳಕಟ್ಟೆ, ನಿಹಾರ್ ಕುಂದಾಪುರ, ಹಾರೋನ್ ರಶೀದ್ ಸಾಸ್ತಾನ, ಉಸ್ಮಾನ್ ಪಳ್ಳಿ, ಅಲ್ ಹಿಬಾ ಟ್ರೇಡಿಂಗ್ ಶಾರ್ಜಾ ಇದರ ಮಾಲೀಕರಾದ ಅಫ್ಝಲ್ ರಶೀದ್, ಉದ್ಯಾವರ ಮುಸ್ಲಿಂ ಯುನಿಟಿ ದುಬೈ ಅಧ್ಯಕ್ಷರಾದ ಅಬ್ದುಲ್ ಖಾಲಿಕ್ ಹೈದರ್, ಮೊಹಮ್ಮದ್ ಉಮಾಜ್ ಉದ್ಯಾವರ ಹಾಗೂ ಇತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.