(www.vknews. in) ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಲಿಕಟ್ಟೆ ಯು ಸುಮಾರು 50 ವರ್ಷಕ್ಕಿಂತಲೂ ಹೆಚ್ಚಿನ ಹಳೆಯ ಕಟ್ಟಡದಲ್ಲಿ ಪ್ರವರ್ತಿಸುತ್ತಿದ್ದು, ನಿನ್ನೆಯ ದಿನ ಶಾಲಾ ಅವಧಿಯಲ್ಲಿ 8 ನೇ ತರಗತಿ ಕೋಣೆಯ ಹಂಚಿನ ಮಾಡು ಬಿರುಕು ಬಿಟ್ಟಿದೆ. ಕೂಡಲೇ ಎಲ್ಲರೂ ಅದನ್ನು ಶ್ರದ್ದಿಸಿದ ಕಾರಣ ದೊಡ್ಡ ಅನಾಹುತ ಆಗದೆ ಮಕ್ಕಳನ್ನು ಎಲ್ಲ ಬೇರೆ ತರಗತಿಗೆ ವರ್ಗಾಯಿಸಲಾಯಿತು.
ವಾರ್ಷಿಕವಾಗಿ ಶಿಕ್ಷಣ ಇಲಾಖೆಯು ಹಲವು ಬಾರಿ ಶಾಲೆಗಳಲ್ಲಿ ಇರುವ ಅಸುರಕ್ಷಿತ ಕಟ್ಟಡಗಳ ಬಗ್ಗೆ ,ಹಾಗೂ ಮಕ್ಕಳನ್ನು ಸುರಕ್ಷಿತ ಕೊಠಡಿಯಲ್ಲಿ ಇರಿಸುವ ಬಗ್ಗೆ ಆದೇಶಗಳು,ಜ್ಞಾಪನಗಳು, ಸುತ್ತೋಲೆಗಳು ಕಳುಹಿಸಿದರು ಕೂಡ ಮುಖ್ಯ ಶಿಕ್ಷಕರ ಅಸಡ್ಡೆಯಿಂದ ಇಂತಹ ಅನಾಹುತಗಳು ಸಂಭವಿಸುತ್ತಿದ್ದು ಇಲಾಖೆಯು ಇಂತಹ ಶಿಕ್ಷಕರ ಬಗ್ಗೆ ಕಠಿಣ ಕ್ರಮವನ್ನು ಕೈಗೊಳ್ಳದೆ ಇರುವುದು ಇಂತಹ ಪುನರಾವರ್ತನೆಗೆ ಕಾರಣವಾಗಿದೆ.
ಅದಲ್ಲದೆ ಈ ಶಾಲೆಯ 8ನೇ ತರಗತಿ ಮಕ್ಕಳಿಂದಲೇ ಹಂಚನ್ನು ಸರಿ ಮಾಡಿಸಲು ಮಾಡಿಗೆ ಹತ್ತಿಸಿರುವ ಬಗ್ಗೆ ಕೂಡ ಪೋಷಕರು ಆರೋಪಿಸಿದ್ದು ಇದರ ಬಗ್ಗೆ ಕೂಡ ತನಿಖೆ ಆಗಬೇಕಿದೆ.
ಅಸುರಕ್ಷಿತವಾಗಿರುವ ಮಾಡಿಗೆ ಮಕ್ಕಳನ್ನು ಹತ್ತಿಸಿ ಬೇಜವಾಬ್ದಾರಿಯನ್ನು ಹಾಗೂ ಮಕ್ಕಳ ಸುರಕ್ಷೆಯ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸದ ಶಿಕ್ಷಕರ ಮೇಲೆ ತುರ್ತಾಗಿ ಕಾನೂನು ಕ್ರಮವನ್ನು ಕೈ ಗೊಳ್ಳಲು ಪೋಷಕರು ಆಗ್ರಹಿಸಿದ್ದಾರೆ.
ಕಾನೂನು ಬಾಹಿರವಾದ ಕೃತ್ಯಗಳು ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆಯಾದಾಗ ಮತನಾಡಬೇಕಾದ ಶಾಲಾಭಿವೃದ್ಧಿ ಸಮಿತಿಯ ಮೌನದ ಬಗ್ಗೆಯೂ ತನಿಖೆಯಾಗಬೇಕಿದೆ.
ಮಕ್ಕಳ ಗುಣ ಮಟ್ಟದ ಕಲಿಕೆ, ಮೂಲಭೂತ ಸೌಕರ್ಯ ಹಾಗೂ ಸುರಕ್ಷತೆಯ ಬಗ್ಗೆ ಪೋಷಕರಿಗೆ ಧೈರ್ಯವನ್ನು ಕೊಡಬೇಕಾಗಿರುವ ಎಸ್ಡಿಎಂಸಿಯು ಇದರ ಬಗ್ಗೆ ಚಕಾರ ಎತ್ತುವುದಿಲ್ಲ ಯಾಕೆ ಎನ್ನುವ ಪ್ರಶ್ನೆಯೂ ಎಲ್ಲಾ ಪೋಷಕರಲ್ಲೂ ಸಂಶಯಕ್ಕೆ ಕಾರಣವಾಗಿದೆ.
ಕೂಡಲೇ ಶಿಕ್ಷಣ ಇಲಾಖೆ ಹಾಗೂ ಮಕ್ಕಳಿಗೆ ಸಂಬಂಧಪಟ್ಟ ಆಯೋಗಗಳು ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರದ ಶಿಕ್ಷೆಯನ್ನು ಕೊಡಬೇಕು ಎನ್ನುವ ಆಗ್ರಹ ಪೋಷಕರದ್ದಾಗಿದೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.