(www.vknews.in) : ಮದುವೆಗೆ ತಯಾರಾಗಿರುವ ಹುಡುಗನಿಗೆ ದುಡಿಮೆ ಇದೆಯೇ ಎಂದು ಸರಿಯಾಗಿ ಪರಿಶೀಲಿಸಬೇಕು. ಆತನ ಬಾಹ್ಯ ಸೌಂದರ್ಯವನ್ನು ಕಂಡು ಮೋಸ ಹೋಗಬಾರದು. ಬರೀ ಆತನ ಹ್ಯಾಂಡ್ಸಮ್ಗೆ ಆಕರ್ಷಿತನಾದರೆ, ಬಳಿಕ ಖೇದಿಸಬೇಕಾಗುತ್ತದೆ, ಅಲೆಯಬೇಕಾಗುತ್ತದೆ. ದುಡಿಮೆ ಇಲ್ಲದ ಮೈಗಳ್ಳನಿಗೆ ಹೆಣ್ಣು ಕೊಟ್ಟರೆ, ಬಳಿಕ ಅವನನ್ನೂ ಸಾಕಬೇಕಾಗುತ್ತದೆ. ಮಾತ್ರವಲ್ಲ ಪತ್ನಿಯಾದವಳು ಪ್ರತಿಯೊಂದಕ್ಕೂ ಆತನ ಸಹೋದರರೊಂದಿಗೋ ಅಥವಾ ತವರು ಮನೆಯವರೊಂದಿಗೋ ಯಾಚಿಸಬೇಕಾಗುತ್ತದೆ. ಅವರ ಕಾರುಬಾರಿನಲ್ಲಿ ಆಸರೆ ಪಡೆಯಬೇಕಾಗುತ್ತದೆ. ಅಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ, ಅದನ್ನು ಸಹಿಸಬೇಕಾಗುತ್ತದೆ. ಆದ್ದರಿಂದ ಒಂದಷ್ಟು ಕಮ್ಮಿ ಆದಾಯದವನಾದರೂ ಪರವಾಗಿಲ್ಲ. ನಿಷ್ಠೆ ಯಿಂದ ದುಡಿದು ಪತ್ನಿ, ಮಕ್ಕಳನ್ನು ಸಾಕಿ ಸಲಹುವವರನಾದರೆ ಸಾಕು. ಆತನ ದುಡಿಮೆಯಲ್ಲಿ ಬೆವರ ಹನಿಗಳಿವೆ. ಸಮೃದ್ಧಿ ಇದೆ.
ಹಾಗೆಯೇ, ಇಸ್ಲಾಮಿನಲ್ಲಿ ಮಹಿಳೆಗೆ ಉದ್ಯೋಗ ಕಡ್ಡಾಯವೇನೂ ಅಲ್ಲ. ದುಡಿದು ಪತಿ, ಮಕ್ಕಳನ್ನು ಸಾಕಬೇಕಾದುದು ಅವಳ ಬಾಧ್ಯತೆಯಲ್ಲ. ಹಾಗಂತ ಶರೀಅತ್ನ ಚೌಕಟ್ಟಿನಲ್ಲಿ ಉದ್ಯೋಗಕ್ಕೆ ತೆರಳುವುದು ನಿಷಿದ್ಧವೂ ಅಲ್ಲ. ಆದರೆ ಉದ್ಯೋಗ ಮತ್ತು ಗಂಡನೊಂದಿಗಿನ ಸಂಸಾರದ ಆಯ್ಕೆಯಲ್ಲಿ ಆಕೆ ಉದ್ಯೋಗಕ್ಕಿಂತ ಸಂಸಾರದ ಆಯ್ಕೆಗೆ ಒತ್ತು ಕೊಡಬೇಕು.
ಏಕೆಂದರೆ, ಕೌಟುಂಬಿಕ ಜವಾಬ್ದಾರಿಕೆ ಬಹಳ ಮಹತ್ವದ್ದು. ದಣಿವರಿಯದ ಉದ್ಯೋಗದ ಜತೆಗೆ ಮನೆಯ ಕೆಲಸ ಕಾರ್ಯಗಳು ಎರಡೂ ಒಟ್ಟೊಟ್ಟಿಗೆ ನಿಭಾಯಿಸಲು ಆಕೆಗೆ ತುಂಬಾ ಆಯಾಸವಾಗಬಹುದು. ಸುಸ್ತಾಗಬಹುದು. ಮದುವೆಯ ಬಳಿಕವಂತೂ ಉದ್ಯೋಗಕ್ಕಾಗಿ ಹಠ ಹಿಡಿಯುವ ಪತ್ನಿ ಒಂದೆರೆಡು ಮಕ್ಕಳನ್ನು ಹಡೆಯುವುದರೊಂದಿಗೆ ಉದ್ಯೋಗದಿಂದ ಬೇಸತ್ತು ಹೋಗುತ್ತಾಳೆ. ನಿಜವಾಗಿ, ಆಕೆಯ ಖರ್ಚು, ಬಟ್ಟೆಬರೆ, ವಸತಿಯ ಸಂಪೂರ್ಣ ಹೊಣೆ ಪತಿಯ ಮೇಲಿದೆ. ಅದು ಆತನ ಜವಾಬ್ದಾರಿಕೆ ಕೂಡಾ. ಮುಂದುವರಿಯುವುದು……
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.