ಕುಂಬಳೆ (www.vknews.in): ಮನೆಯ ಹಾಲ್ನಲ್ಲಿ ವ್ಯಕ್ತಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕುಂಬಳೆಯಲ್ಲಿ ನಡೆದಿದೆ. ಮೃತರನ್ನು ಇಚ್ಲಂಗೋಡು ಚಿತ್ತೂರು ನಿವಾಸಿ ದಿ. ಕುಂಞಿಪಳ್ಳಿ ಅವರ ಪುತ್ರ ಅಬ್ದುಲ್ ಸಲೀಂ (33) ಎಂದು ಗುರುತಿಸಲಾಗಿದೆ.
ಅಬ್ದುಲ್ ಸಲೀಂ ಅವರ ತಾಯಿ ಆಯಿಷಾಬಿ ಅವರು ಮಗಳ ಮನೆಗೆ ತೆರಳಿದ್ದರು. ಹೀಗಾಗಿ ರಾತ್ರಿ ಅಬ್ದುಲ್ ಸಲೀಂ ಅವರು ಮನೆಯಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ. ಬೆಳಗ್ಗೆ ಸ್ಥಳೀಯರು ಮನೆಗೆ ತೆರಳಿ ನೋಡಿದಾಗ, ಮನೆಯ ಹಾಲ್ನಲ್ಲಿ ಅಬ್ದುಲ್ ಸಲೀಂ ಅವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.