ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): _’ಜೋಡಿಗೆರೆ’_ ಮತ್ತು _’ಬೇಡಗುಳಿ’_ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಒಂದು ಪುರಾಣ ಪುಣ್ಯ ಕಥೆಗಳುಳ್ಳ ಪ್ರದೇಶ ಮತ್ತು ಬಿ.ಆರ್.ಟಿ (ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ) ಪುಣಜನೂರು ಸ್ಟೇಟ್ ಫಾರೆಸ್ಟ್ ಇಂದ ಆರಂಭಗೊಳ್ಳುವ ಈ ಪ್ರದೇಶದಲ್ಲಿಯೇ ಹೆಚ್ಚು ಹುಲಿಗಳು ಕಾಣಸಿಗುತ್ತವೆ. ಮನಸೊರೆಗೊಳ್ಳುವ ಕಾಡಿದು ಅಸಂಖ್ಯಾತವಾದ ಸಸ್ಯ, ಗಿಡ, ಮರಗಳನ್ನು ಕಾಡು ಪ್ರಾಣಿಗಳನ್ನು ಹೊಂದಿರುವ ಒಂದು ನಿಸರ್ಗ ತಾಣ ಒಮ್ಮೆ ಇಲ್ಲಿಗೆ ಬಂದರೆ ಸಾಕು ಹೊರಹೋಗಲು ಮನಸ್ಸೇ ಬರುವುದಿಲ್ಲ ಪ್ರಶಾಂತವಾದ ಹಚ್ಚ ಹಸುರಿನ ನಿಸರ್ಗದೂರದು. _ಕುರಿಮಂದೆ ಕಳ್ಳಭೇಟೆ ತಡೆ ಶಿಬಿರದ_ ಎತ್ತರದ ಪ್ರದೇಶದಲ್ಲಿ ಹೆಚ್ಚು ನಿಂತು ಆ ಎತ್ತರವಾದ ಹಸಿರ ಕಣಿವೆಯನ್ನು ಎಲ್ಲೋ ಧುಮ್ಮಿಕ್ಕುವ ಜಲಪಾತಗಳ ಶಬ್ದವನ್ನು, ಹಕ್ಕಿ, ಪಕ್ಷಿಗಳ ಮತ್ತು ಪ್ರಾಣಿಗಳ ಕೂಗುವ ಆ ಧ್ವನಿಯನ್ನು ಆಲಿಸುವುದು ಅದೊಂದು ಅತ್ಯದ್ಭುತ ಕ್ಷಣವೆಂದೇ ಹೇಳಬಹುದು. ಬೇಡಗುಳಿಯಿಂದ ಅನತಿ ದೂರದಲ್ಲಿರುವ ಜೋಡಿಗೆರೆಯು ಹಲವಾರು ಬೆಟ್ಟ ಗುಡ್ಡಗಳನ್ನು ಸೋಲಿಗರ ಪೋಡುಗಳನ್ನ ಹೊಂದಿರುವ ಸುಂದರ ಹಸಿರು ಕಣಿವೆಯುಳ್ಳ ಕಾನನ ಜೋಡಿಗೆರೆ ಎಂದರೆ ಜೋಡು ಜೋಡಿಯಾಗಿ ಕೆರೆಗಳನ್ನು ಹೊಂದಿರುವ ಬೆಟ್ಟ ಗುಡ್ಡಗಳಿಂದ ಆವೃತ್ತವಾದ ಎತ್ತರದ ಪ್ರದೇಶ ಒಂದು ಐತಿಹ್ಯದ ಪ್ರಕಾರ- ಜೋಡಿಗೆರೆ ಈ ಪ್ರದೇಶದಲ್ಲಿ ಸವಣ ಎಂಬ ರಾಜ ಆಳ್ವಿಕೆ ನಡೆಸುತ್ತಿದ್ದ ಮಾರಿ, ಮಸಣಿ, ಮುನಿಗಳು,ಗಾಳಿಗಳು ಮತ್ತು ರಾಕ್ಷಸರಿಂದ ತನ್ನ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿದ್ದ ಶ್ರೀ ಮಲೆಮಹದೇಶ್ವರರು ಸವಣನನ್ನು ದೊಕ್ಕೆರೆ ಬೆಟ್ಟದಲ್ಲಿ ಸಂಹಾರಗೊಳಿಸಿ ನರರನ್ನು ವಾಸಿಸಲು ಅವಕಾಶ ಕಲ್ಪಿಸಿದರು ಎಂಬ ಪುರಾಣ ಪುಣ್ಯಕಥೆಗಳನ್ನು ಇಲ್ಲಿರುವ ಒಂದೊಂದು ಬೆಟ್ಟಗಳು ಒಂದೊಂದು ಐತಿಹ್ಯಗಳನ್ನು ಹೊಂದಿದ್ದು ಅವುಗಳ ಸುಧೀರ್ಘ ಇತಿಹಾಸವನ್ನು ನೋಡೋಣ.
೧- ಮುನೀ ಗುಡ್ಡೆ- ಇಲ್ಲಿ ಮುನಿಗಳು ವಾಸಿಸುತ್ತಿದ್ದರು ಈ ಮುನೀ ಗುಡ್ಡೆಯು ದೊಡ್ಡುಗನ ಪಾಳೆ ಎಂಬ ಊರನ್ನೇ ತಿನ್ನಲು ಹವಣಿಸುತ್ತಿತ್ತು ಅಂತೆಯೇ ದೊಡ್ಡುಗನ ಪಾಳೆಯನ್ನು ಬೇಚರಾಕ್ ಗ್ರಾಮವನ್ನಾಗಿಸಿದೆ.
2-ಕುರುಡು ವೀರು ಬೆಟ್ಟ- ಇಲ್ಲಿಯೂ ಸಹ ಮುನಿಗಳು ಜೀವಿಸುತ್ತಿದ್ದು ಇಲ್ಲಿರುವ ಬೆಟ್ಟದ ಒಂದು ಕಣ್ಣಿಗೆ ಮೊಳೆಯನ್ನು ಬಡಿದಿರುವ ಹಿನ್ನೆಲೆಯಲ್ಲಿ ಈ ಬೆಟ್ಟಕ್ಕೆ ಈ ಹೆಸರು ಬಂದಿದೆ.
3-ನೆಸರಿ ಕಲ್ಲು ಬೆಟ್ಟ- ಜೇನುಗೂಡುಗಳನ್ನು ಹೊಂದಿರುವ ಜಾಂಬುವನ ಬೆಟ್ಟವಾಗಿದೆ.
4-ಬೆಜ್ಜರೆ- ಬೆಜ್ಜರೆ ಮರಗಳನ್ನು ಹೊಂದಿರುವ ಬೆಟ್ಟ.
5-ಮೆಟ್ಟುಗಲ್ಲು- ಮೆಟ್ಟಿಲಿನ ರೀತಿ ಆಕೃತಿಯನ್ನು ಹೊಂದಿದ್ದು ಈ ಹಿನ್ನಲೆಯಲ್ಲಿ ಮೆಟ್ಟುಗಲ್ಲು ಎಂಬ ಹೆಸರು ಬಂದಿದೆ.
6- ಬಿಂದಿಗೆ ಬೆಟ್ಟ- ಈ ಬೆಟ್ಟದಲ್ಲಿ ಮರದಲ್ಲಿ ಬಿಂದಿಗೆ ರೀತಿ ಕಾಯಿಗಳಿದ್ದು ಈ ಹಿನ್ನಲೆಯಲ್ಲಿ ಬಿಂದಿಗೆ ಬೆಟ್ಟ ಎಂಬ ಹೆಸರಿದೆ.
7-ಕೊಳ್ಳಿ ಕಲ್ಲು ಬೆಟ್ಟ- ಇಲ್ಲಿ ಕೊಳ್ಳಿ ಹಣ್ಣು ದೊರೆಯುವುದರಿಂದ ಕೊಳ್ಳಿ ಕಲ್ಲು ಬೆಟ್ಟ ಎಂಬ ಹೆಸರಿದೆ.
8-ಸೂಳೆರೆಬೆಟ್ಟ- ಆ ಕಾಲದಲ್ಲಿ ವೇಶ್ಯೆಯರಿದ್ದಿರಬಹುದೆಂಬ ವಾಡಿಕೆ ಇದೆ.
9-ಹುಳ್ಳೀ ಗುಡ್ಡ- ಕಾಡು ಹುರುಳಿಗಿಡಗಳಿರುವ ಹಿನ್ನಲೆಯಲ್ಲಿ ಹುಳ್ಳೀ ಗುಡ್ಡೇ ಎಂಬ ಹೆಸರಿದೆ.
10-ಕುದುರೆ ಗುಡ್ಡೆ- ರಾಜಮಹಾರಾಜರ ಕಾಲದಲ್ಲಿ ಕುದುರೆ ಲಾಯ ಬೀಡು ಬಿಟ್ಟಿದ್ದ ಹಿನ್ನಲೆಯಲ್ಲಿ ಕುದುರೆಗುಡ್ಡ ಎಂಬ ಹೆಸರಿದೆ.
11-ಮರೆಯನ ಗುಡ್ಡೆ- ರಾಗಿ ಮುದ್ದೆ ಲಭ್ಯವಿರುತ್ತಿದ್ದ ಹಿನ್ನಲೆಯಲ್ಲಿ ಮರೆಯನ ಗುಡ್ಡೆ ಎಂಬ ಹೆಸರಿದೆ.
12-ಹುಲಿಮೆಟ್ಟಿಧರೆ ಕೋಬು- ಹುಲಿಗಳ ತಾಣವಾದ್ದರಿಂದ ಹುಲಿಮೆಟ್ಟಿಧರೆ ಕೋಬು ಎಂಬ ಹೆಸರಿದೆ.
13-ಗೇರುಗುಡ್ಡೆ- ಗೇರುಮರಗಳ ಗುಡ್ಡೆಯಾಕಾರದಲ್ಲಿರುವುದರಿಂದ ಗೇರುಗುಡ್ಡೆ ಎಂಬ ಹೆಸರಿದೆ.
14-ನವಿಲು ಕೋಟೆ- ನವಿಲುಗಳು ಹೆಚ್ಚಾಗಿ ಕಂಡುಬಂದಿರುವುದರಿಂದ ನವಿಲು ಕೋಟೆ ಗುಡ್ಡ ಎಂಬ ಹೆಸರಿದೆ.
15-ಬರೆ ಗುಡ್ಡ- ಬಂಡೆಗಳಿರುವುದರಿಂದ ಬರೆ ಗುಡ್ಡ ಎಂಬ ಹೆಸರಿದೆ.
16-ದೊಡ್ಡಿನ ಎಣೆ ಬೆಟ್ಟ- ಕಾಡೆಮ್ಮೆಗಳು ಬರುವುದರಿಂದ ದೊಡ್ಡಿನ ಎನೆ ಬೆಟ್ಟ ಎಂಬ ಹೆಸರಿದೆ.
17-ಕೊಂತಿಕಲ್ಲು- ಕಲ್ಲು ಬಾಗಿರುವ ಭಂಗಿಯಲ್ಲಿರುವ ಹಿನ್ನೆಲೆಯಲ್ಲಿ ಕೊಂತಿಕಲ್ಲು ಎಂಬ ಹೆಸರಿದೆ.
18-ಕವಲಿಗುಡ್ಡೆ- ಕವಲು ಕವಲಾಗಿರುವುದರಿಂದ ಕವಲಿಗುಡ್ಡ ಎಂಬೆಸರಿದೆ.
19-ಕರಡಿ ಗುಡ್ಡೆ- ಕರಡಿಗಳು ಹೆಚ್ಚಾಗಿರುವುದರಿಂದ ಕರಡಿ ಗುಡ್ಡೆ ಎಂಬ ಹೆಸರಿದೆ.
20-ಕರಿಕಲ್ಲು ಗುಡ್ಡೆ- ಕಪ್ಪುಶಿಲೆ ಗುಡ್ಡೆ ಎಂಬ ಹೆಸರಿರುವುದರಿಂದ ಕರಿಕಲ್ಲು ಗುಡ್ಡೆ ಎಂಬ ಹೆಸರಿದೆ.
21-ದೊಕ್ಕೆರೆ ಬೆಟ್ಟ- ಶ್ರೀ ಮಲೆ ಮಹದೇಶ್ವರರು ಸವಣ ಎಂಬುವವನನ್ನು ಸಂಹರಿಸಿದ್ದರಿಂದ ದೊಕ್ಕೆರೆ ಬೆಟ್ಟ ಎಂಬ ಹೆಸರಿದೆ.
22- ನಾಮರೆ- ಬಂಡೆಗಳ ಮೇಲೆ ನಾಮರುವುದುರಿಂದ ನಾಮರೆ ಎಂಬ ಹೆಸರಿದೆ.
23-ಹುಣಸೇ ಬರೆ ಬೆಟ್ಟ- ಹುಣಸೇ ಮರಗಳ ಗುಂಪಿದ್ದು ಹುಣಸೇ ಬರೆ ಬೆಟ್ಟ ಎಂಬ ಹೆಸರಿದೆ.
24-ಬೆಕ್ಕು ಬರೆ ಬೆಟ್ಟ- ಕಾಡುಬೆಕ್ಕು ಇರುವುದರಿಂದ ಬೆಕ್ಕುಬರೆ ಬೆಟ್ಟ ಎಂಬ ಹೆಸರಿದೆ.
25- ಹಿಂಡಾನೆ ಕೋಬು- ಆನೆಗಳು ಹಿಂಡು ಕಂಡು ಬಂದಿರುವುದರಿಂದ ಹಿಂಡಾನೆ ಕೋಬು ಎಂಬ ಹೆಸರಿದೆ.
26ಬೂದಿಬರೆಬೆಟ್ಟ,27-ಕೋಡರೆ ಬೆಟ್ಟ, 28-ಕಣವಲೆ, 29-ಕೆಂಡಗದರೆ, 30-ತೋಟಬಾವಿ ಬಾನು, 31-ಕೆಂಗಲ್ ಬೆಟ್ಟ, 32-ಕಿಚ್ಚುಕೊಳ್ಳೆಅರೆ, 33-ಕಬ್ಬರೆ ದೊಡ್ಡ ಬೆಟ್ಟ,34-ಆಡುಬರೆ,35-ಎತ್ತಪ್ಪನ ಬೆಟ್ಟ, 36-ಹಬ್ಬೀ ಹಳ್ಳ, 37-ಕಬ್ಬಿನಗದ್ದೆ ಪಾಲ್ಸ್(ಶ್ರೀನಿವಾಸ ಪಾಲ್ಸ್),38-ಮೆಣಸುಕಡುವೆ, 39-ಗಿರಿಹಳ್ಳ,40-ಮದ್ದಾಳೆ ಖಾನೆ,41-ಗುರುಂಜಿಬೆಟ್ಟ 42- ನಾಮಬೆಟ್ಟ,43-ಬೆಳ್ಳಿಮುರಿ ಅರೆ, 44-ಮಾದಪ್ಪನ ಗುಡ್ಡೆ, 45-ಮಣ್ಣುಕಾಯಿಪೋಡು,46-ಗೊಟ್ಟಿಕಣಿವೆ, 47-ಕಾರಯ್ಯನ ಬೆಟ್ಟ,48-ಬಾಳೆ ಅರೆ,49-ಮೂಗಜ್ಜನ ಬೆಟ್ಟ, 50-ಸಿಗರೇ ಮಡು, 51-ಅಮ್ಮನ ಬರೆ, 52-ಹೊಟ್ಟೆಹೋಲೆ ಹಳ್ಳ,53-ಮಾವಿನ ಕೆರೆ, 54-ಕಾಟನ ಬಾವಿ ಕೆರೆ, 55-ಆಲಕಣಿವೆ56-ಮಾರಿಹೊನ್ನೆ, 58ಮಿಟ್ಲೆ ಕಣಿವೆ, ಸಾಗುವಾನಿ, ದಡುಸು, ಹೊನ್ನೆ, ಬೆಜ್ಜಲು, ಮತ್ತಿ, ನೆಲ್ಲಿಮರ, ತಾಳೆ, ಗೇರುಮರ, ಅಣಿಲೆ, ಪುಳುಮಾವು, ಚನ್ನಂಗಿ, ಹಾಲುಪ್ಪೆ, ಧೂಪದಮರ, ಹೊಲ್ಬೆ, ಕಾತಳೆ, ಅಸರೆ, ಸಿರಿಹೊನ್ನೆ ಇತ್ಯಾದಿ ಮರ ಸಂಪತ್ತಿದ್ದು ಜೋಡಿಗೆರೆ ಭೂ ಲೋಕದ ಸ್ವರ್ಗದ ಹಾಗೆ ಕಂಗೊಳಿಸುತ್ತದೆ.
✍️ಕೆ.ಶ್ರೀಧರ್ (ಕೆ.ಸಿರಿ) ಯುವ ಸಾಹಿತಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.