ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಸೈಬರ್ ಅಪರಾಧ ನಡೆಯಲು ನಾವೇ ಕಾರಣವಾಗುತ್ತೇವೆ. ಅರಿವಿದ್ದೂ ಅಂತರ್ಜಾಲ ಕ್ಕೆ ನಾವು ಸೇರಿಸುವ ವಿವಿಧ ವೈಯಕ್ತಿಕ ಮಾಹಿತಿಗಳು, ಫೋಟೋಗಳು ಸೈಬರ್ ಕಳ್ಳರಿಗೆ ಅಪರಾಧ ವೆಸಗಲು ಸಹಕಾರಿಯಾಗುತ್ತದೆ ಎಂದು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಹಾಗು ರೋಟೊರಾಕ್ಟ್ ಕ್ಲಬ್ ಪುತ್ತೂರು ಜಂಟಿಯಾಗಿ ನಡೆಸಿದ ಕಾರ್ಯಕ್ರಮದಲ್ಲಿ ಸೈಬರ್ ತಂತ್ರಜ್ಞಾನ ತಜ್ಞ ರಾದ ಕುಮಾರಿ ಪ್ರಣಿತಾ ರವರು ಹೇಳಿದರು.
ಈ ಪ್ರಕ್ರಿಯೆ 2019 ರ ಬಳಿಕ ಅತೀ ಹೆಚ್ಚಾಗಿದ್ದು ದಿನವೊಂದಕ್ಕೆ ಸುಮಾರು 1 ಲಕ್ಷ ದಷ್ಟು ಸೈಬರ್ ಅಪರಾಧಗಳು ನಡೆಯುತ್ತಿವೆ. ಇವುಗಳಿಗೆ ಪರಿಹಾರ ನೀಡಲು, ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಅಗತ್ಯವಾದ ತಂತ್ರಜ್ಞಾನ ಮತ್ತು ಪರಿಣಿತರ ಕೊರತೆ ಇದೆಯಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಮತ್ತು ಕುಟುಂಬದವರ ಭಾವಚಿತ್ರಗಳನ್ನು ಸೇರಿಸುವಾಗ ತುಂಬಾ ಯೋಚಿಸಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಮತ್ತು ಕುಟುಂಬದವರ ಭಾವಚಿತ್ರಗಳನ್ನು ಸೇರಿಸುವಾಗ ತುಂಬಾ ಯೋಚಿಸಬೇಕು, ಎಂದು ಸೈಬರ್ ತಂತ್ರಜ್ಞಾನ ತಜ್ಞ ರಾದ ಕುಮಾರಿ ಪ್ರಣಿತಾ ರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಸೆಂಟ್ರಲ್ ಅಧ್ಯಕ್ಷರಾದ ರಫೀಕ್ ದರ್ಬೆ ಅಧ್ಯಕ್ಷತೆ ವಹಿಸಿದರು. ರೋಟೋರಾಕ್ಟ್ ಕ್ಲಬ್ ಅಧ್ಯಕ್ಷ ಗಣೇಶ್ ಕಲ್ಲರ್ಪೆ ಸೈಬರ್ ಸಮಸ್ಯೆಯ ತಮ್ಮ ಅನುಭವ ಹಂಚಿಕೊಂಡರು. ಕಾರ್ಯದರ್ಶಿ ಚಂದ್ರಹಾಸ ರೈ ಮತ್ತು ಪೂರ್ವಾಧ್ಯಕ್ಷ ನವೀನ್ ಚಂದ್ರ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವರಾಮ ಎಂ ಎಸ್ ಪ್ರಾರ್ಥಿಸಿದರು.ಡಾ ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ಸಂಯೋಜಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.