ಪ್ಯಾರಿಸ್ (ವಿಶ್ವ ಕನ್ನಡಿಗ ನ್ಯೂಸ್):ಫ್ರಾನ್ಸ್ ನಲ್ಲಿ ಇಸ್ಲಾಮ್ ವಿರುದ್ಧ ನಡೆ ಬಿಗಿಯಾಗುತ್ತಲಿದ್ದು ಇದರ ಮುಂದುವರಿದ ಭಾಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಪ್ರಾಪ್ತರಿಗೆ ಧಾರ್ಮಿಕ ವಸ್ತ್ರಗಳನ್ನು ಯಾ ಚಿಹ್ನೆಗಳನ್ನು ತೊಡಿಸುವ ನಿಷೇಧ ಹೇರುವ ಕುರಿತ ಮಸೂದೆಯೊಂದನ್ನು ಫ್ರಾನ್ಸ್ ಸರಕಾರ ಸದನದಲ್ಲಿ ಮುಂದಿಟ್ಟಿದೆ.ಇದರಲ್ಲಿ ಹಿಜಾಬ್ ಕೂಡ ಸೇರಿದೆ.ಮಸೂದೆ ಇನ್ನು ಕಾನೂನಾಗಿ ಮೂಡಿಬಂದಿಲ್ಲವಾದರೂ ಸಾಮಾಜಿಕ ತಾಣಗಳಲ್ಲಿ ಇದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಫ್ರಾನ್ಸ್ ನಲ್ಲಿ ಸಹಮತದ ಲೈಂಗಿಕ ಕ್ರಿಯೆ ನಡೆಸಲು ವಯೋಮಿತಿ 15 ವರ್ಷ ,ಆದರೆ ಹಿಜಾಬ್ ಧರಿಸಲು ೧೮ ವರ್ಷಗಳಾಬೇಕು,ಇದು ಹಿಜಾಬ್ ವಿರುದ್ಧ ಅಲ್ಲ,ಇಸ್ಲಾಮ್ ವಿರುದ್ಧ ಎಂದು ಟ್ವೀಟ್ ನಲ್ಲಿ ಮಾನಾರ್ ಎನ್ನುವ ಸಾಮಾಜಿಕ ಕಾರ್ಯಕರ್ತೆ ಕಿಡಿಕಾರಿದ್ದಾರೆ.ಹಿಜಾಬ್ ಅನ್ನು ಧರಿಸಲು ಬಲಾತ್ಕರಿಸುವುದು ಎಷ್ಟು ಅಸಮಂಜಸವೋ,ಅವಳನ್ನು ತೊಡದಂತೆ ಬಲಾತ್ಕರಿಸುವುದು ಕೂಡ ಅಷ್ಟೇ ದೊಡ್ಡ ತಪ್ಪು ಎಂದಿದ್ದಾರೆ ಬರಹಗಾರ್ತಿ ನಜ್ವಾ ಜಬಿನ್.ಫ್ರಾನ್ಸ್ ಈ ಟೀಕೆಗಳ ಮಧ್ಯೆ ಯಾವ ನಿರ್ಧಾರ ಕೈಗೊಳ್ಳುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.