ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಕೊರೊನಾ ಲಸಿಕೆ ವಿಚಾರವಾಗಿ ಮಾಜಿ ಸಿ.ಎಂ ಸಿದ್ದರಾಮಯ್ಯ ಅವರು ಟ್ವೀಟರ್ ನಲ್ಲಿ ಟೀಕೆ ಮಾಡಿರುವುದು ಸರಿಯಲ್ಲ, ಮಾಜಿ ಮುಖ್ಯಮಂತ್ರಿ ಆಗಿರುವ ಅವರಿಗೆ ಮುಖ್ಯಮಂತ್ರಿ ಅಷ್ಟೇ ಅಧಿಕಾರವಿರುತ್ತದೆ. ಹೀಗಿರುವಾಗ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು ಮಾತನಾಡಲಿ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ..
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,135 ಕೋಟಿ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ಎಲ್ಲರಿಗೂ ಲಸಿಕೆ ಉಚಿತವಾಗಿ ಕೊಡುವುದು ಸುಲಭದ ಮಾತಲ್ಲ. ನಮ್ಮ ದೇಶದಲ್ಲಿ ಲಸಿಕೆಯು 100 ಕೋಟಿ ದಾಟಿ ಮುಂದೆ ಸಾಗಿದ್ದು, ಇಡೀ ಪ್ರಪಂಚದಲ್ಲೇ ಭಾರತದ ಬಗ್ಗೆ ವಿಶ್ವಾಸ ವ್ಯಕ್ತವಾಗುತ್ತಿದೆ. ದೇಶ ಅಲ್ಲದೇ ಪ್ರಪಂಚಕ್ಕೆ ಲಸಿಕೆ ಪೂರೈಕೆ ಮಾಡುವ ಶಕ್ತಿ ಇರುವುದು ನಮ್ಮ ಭಾರತ ದೇಶಕ್ಕೆ ಮಾತ್ರ ಎಂದು ವಿದೇಶದವರೂ ಹೇಳುತ್ತಿದ್ದಾರೆ. ಇದನ್ನು ನೋಡಿ ಸಹಿಸಿಕೊಳ್ಳದೆ ಹೊಟ್ಟೆ ಹುರಿದುಕೊಳ್ಳುತ್ತಿರುವ ಪ್ರತಿಪಕ್ಷದವರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.