10 ತಿಂಗಳು 26 ದಿನಗಳಲ್ಲಿ 9 ದೇಶಗಳಲ್ಲಿ ಸಂಚರಿಸಿ ಮೆಕ್ಕಾ ತಲುಪಿದ ಬ್ರಿಟಿಷ್ ಪ್ರಜೆ..
ಮಕ್ಕಾ (ವಿಶ್ವ ಕನ್ನಡಿಗ ನ್ಯೂಸ್) : ಇರಾಕಿ ಮೂಲದ ಬ್ರಿಟಿಷ್ ಪ್ರಜೆಯೊಬ್ಬರು ಪವಿತ್ರ ಹಜ್ಜ್ ನಿರ್ವಹಿಸಲು ಕಾಲ್ನಡಿಗೆಯಲ್ಲಿ ಮೆಕ್ಕಾಗೆ ಆಗಮಿಸಿದ್ದಾರೆ. 52 ವರ್ಷದ ಆದಮ್ ಮೊಹಮ್ಮದ್ ಈ ವರ್ಷದ ಹಜ್ ಯಾತ್ರೆಗೆ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ಬ್ರಿಟನ್ ತೊರೆದ ಆದಮ್ ಮೊಹಮ್ಮದ್ 10 ತಿಂಗಳು 26 ದಿನಗಳಲ್ಲಿ 9 ದೇಶಗಳಲ್ಲಿ ಸಂಚರಿಸಿ ಮೆಕ್ಕಾ ತಲುಪಿದ್ದಾರೆ.
ಅವರು ಆಗಸ್ಟ್ 1, 2021 ರಂದು, ರಾತ್ರಿ 8 ಗಂಟೆಗೆ, ‘ಪೀಸ್ ಜರ್ನಿ’ ವೋಲ್ವರ್ಹ್ಯಾಂಪ್ಟನ್ನಿಂದ ಕಾಲ್ನಡಿಗೆಯಲ್ಲಿ ಪ್ರಯಾಣ ಆರಂಭಿಸಿದ್ದರು. ಸೌದಿ ಅರೇಬಿಯಾವನ್ನು ಪ್ರವೇಶಿಸುವ ಮೊದಲು, ಅವರು ನೆದರ್ಲ್ಯಾಂಡ್ಸ್, ಜರ್ಮನಿ, ಜೆಕ್ ರಿಪಬ್ಲಿಕ್, ಹಂಗೇರಿ, ರೊಮೇನಿಯಾ, ಬಲ್ಗೇರಿಯಾ, ತುರ್ಕಿ, ಸಿರಿಯಾ ಮತ್ತು ಜೋರ್ಡಾನ್ ಮೂಲಕ ಮಕ್ಕಾ ತಲುಪಿದ್ದಾರೆ.
ಅವರು ಮರುಭೂಮಿಗಳು, ಕಷ್ಟಕರವಾದ ರಸ್ತೆಗಳು, ಸಮುದ್ರಗಳು ಮತ್ತು ಯುದ್ಧಭೂಮಿಗಳ ಮೂಲಕ ಕಾಲ್ನಡಿಗೆಯಲ್ಲಿ 4,000 ಮೈಲಿಗಳನ್ನು ದಾಟಿ ಪವಿತ್ರ ನಗರವಾದ ಮೆಕ್ಕಾವನ್ನು ಪ್ರವೇಶಿಸಿದರು. 2021 ರಲ್ಲಿ ಸುಡುವ ಚಳಿಗಾಲ ಮತ್ತು ಬೇಸಿಗೆಯಲ್ಲಿ ತನ್ನ ನಡಿಗೆಯನ್ನು ಪ್ರಾರಂಭಿಸಿದ್ದ ಅವರು ಕಳೆದ ಭಾನುವಾರ ಸೌದಿ ಅರೇಬಿಯಾಕ್ಕೆ ಆಗಮಿಸಿದರು. ಪ್ರಯಾಣದ ಸಮಯದಲ್ಲಿ ಕೆಟ್ಟ ಹವಾಮಾನವೂ ಸೇರಿದಂತೆ ಎಲ್ಲಾ ರೀತಿಯ ತೊಂದರೆಗಳನ್ನು ತಾನು ಸಹಿಸಿಕೊಂಡಿದ್ದೇನೆ ಮತ್ತು ಪವಿತ್ರ ಭೂಮಿಯನ್ನು ತಲುಪಿದಾಗ ತುಂಬಾ ಸಂತೋಷವಾಗಿದೆ ಎಂದು ಆದಮ್ ಮುಹಮ್ಮದ್ ಹೇಳಿದ್ದಾರೆ.
ಇವರು ಒಂಬತ್ತು ದೇಶಗಳಲ್ಲಿ ಸಂಚರಿಸಿ 6,500 ಕಿ.ಮೀ ದೂರವನ್ನು ಕ್ರಮಿಸಿ ಮೆಕ್ಕಾ ತಲುದ್ದಾರೆ. ಅವರು ದಿನಕ್ಕೆ ಸರಾಸರಿ 17.8 ಕಿ.ಮೀ ಪ್ರಯಾಣಿಸುತ್ತಿದ್ದರು. ಈ ವರ್ಷದ ಹಜ್ ಯಾತ್ರೆಗೆ ಬಂದಿದ್ದ ಮೆಕ್ಕಾದ ನಿವಾಸಿಗಳು ಮತ್ತು ವಿವಿಧ ದೇಶಗಳಿಂದ ಬಂದಿದ್ದ ಯಾತ್ರಾರ್ಥಿಗಳು ಆದಮ್ ಮೊಹಮ್ಮದ್ ಅವರನ್ನು ಬರಮಾಡಿಕೊಂಡರು. ಅವರು ಮೆಕ್ಕಾಗೆ ಆಗಮಿಸಿದ ವೀಡಿಯೊಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ದಾರಿಯುದ್ದಕ್ಕೂ ಅನೇಕ ಜನರು ನನ್ನನ್ನು ಸ್ವಾಗತಿಸಲು ಮುಂದೆ ಬಂದಿದ್ದಾರೆ, ಅವರು ಪ್ರತಿದಿನ ನನಗೆ ಆಹಾರವನ್ನು ನೀಡುತ್ತಿದ್ದರು. ಅವರಲ್ಲಿ ಕೆಲವರು ಪ್ರಯಾಣಕ್ಕೆ ನನಗೆ ಆರ್ಥಿಕ ಬೆಂಬಲವನ್ನು ಸಹ ಒದಗಿಸಿದರು. ಇನ್ನೂ ಕೆಲವರು ನನ್ನೊಂದಿಗೆ ಸ್ವಲ್ಪ ದೂರದವರೆಗೆ ಬಂದು ನನ್ನ ಸಣ್ಣ ತ್ರಿಚಕ್ರ ವಾಹನವನ್ನು ತಳ್ಳಿದರು. ಪುಟ್ಟ ಮಕ್ಕಳು ನನ್ನನ್ನು ನೋಡಿದಾಗ ನನ್ನ ಕಡೆಗೆ ಓಡಿಬಂದು ‘ಅಂಕಲ್ ಆದಮ್, ನನ್ನ ಹೀರೋ’ ಎಂದು ನನ್ನನ್ನು ತಬ್ಬಿಕೊಳ್ಳುವುದನ್ನು ನೋಡುವುದು ತುಂಬಾ ಸಂತೋಷದ ಮತ್ತು ಹೆಮ್ಮೆಯ ಅನುಭವವಾಗಿದೆ ಎಂದು ಅವರು ತನ್ನ ಪ್ರಯಾಣದ ಅನುಭವಗಳನ್ನು ವಿವರಿಸಿದರು.
ಅರೇಬಿಕ್ ಮತ್ತು ಪಾರ್ಸಿ ಸೇರಿದಂತೆ ನಾಲ್ಕು ಭಾಷೆಗಳನ್ನು ಮಾತನಾಡುವ ಆದಮ್ ಮೊಹಮ್ಮದ್, ಅವರನ್ನು ಯುರೋಪಿಯನ್ ದೇಶಗಳಾದ ಫ್ರಾನ್ಸ್, ಪೋಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಹಜ್ಜ್ ನಿರ್ವಹಿಸಿ ಮರಳಿದ ಬಳಿಕ ಹಲಾಲ್ ಮಾಂಸ ನಿಷೇಧದ ವಿರುದ್ಧ ಹೋರಾಡಲು ಸಹಾಯ ಮಾಡಲು ವಿನಂತಿಸಿದ್ದಾರೆ. 1990ರ ದಶಕದ ಉತ್ತರಾರ್ಧದಲ್ಲಿ ಇರಾಕ್ ಸೈನ್ಯದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ಯುದ್ಧದ ಖೈದಿಯಾಗಿ ಸೆರೆಸಿಕ್ಕ ನಂತರ ಆದಮ್ ಮೊಹಮ್ಮದ್ ಯುಕೆಗೆ ತೆರಳಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.