ಬೆಂಗಳೂರು (www.vknews.in) ; ಕಳೆದ ಹಲವು ಸಮಯದಿಂದ ಲೀ.ಗೆ 100 ರೂ. ಇದ್ದ ತಾಳೆ ಎಣ್ಣೆ ದರ 165 ರೂ. ವರೆಗೆ ಮುಟ್ಟಿತ್ತು. ಇದರ ಜತೆಗೆ ಸೂರ್ಯಕಾಂತಿ, ಶೇಂಗಾ ಎಣ್ಣೆ ದರ 140 ರೂ. ಆಸುಪಾಸಿನಿಂದ 200 ರೂ.ವರೆಗೆ ತಲುಪುವ ಮೂಲಕ ಅಡುಗೆ ಎಣ್ಣೆ ದುಬಾರಿ ಆಗಿತ್ತು . ಇದೀಗ ಹಬ್ಬದ ಸಮಯದಲ್ಲಿ ಬೆಲೆ ಕಡಿಮೆಯಾಗಿ ಬೆಲೆ ಏರಿಕೆ ಬಿಸಿ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ. 165 ರೂ. ತಲುಪಿದ್ದ ಒಂದು ಲೀಟರ್ ತಾಳೆ ಎಣ್ಣೆಯ ದರ ದಿಢೀರ್ ಇಳಿಕೆ ಕಂಡು 95 ರಿಂದ 90 ರೂ.ಗೆ ಬಂದು ನಿಂತಿದೆ. ಮುಂದಿನ ದಿನಗಳಲ್ಲಿ ಇದೇ ತಾಳೆ ಎಣ್ಣೆ ದರ ಇನ್ನೂ 10 ರಿಂದ 15 ರೂ. ಇಳಿಕೆ ಕಾಣಲಿದೆ ಎಂಬ ಮಾತು ವ್ಯಾಪಾರಿ ವಲಯದಲ್ಲಿ ಕೇಳಿ ಬರುತ್ತಿದೆ.
ಇದೇ ವೇಳೆ ಸೂರ್ಯಕಾಂತಿ ಹಾಗೂ ಶೇಂಗಾ ಎಣ್ಣೆ 200 ರೂ.ಗಳಿಂದ 150 ರೂ. ಆಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿದೆ. ಒಂದೇ ಬಾರಿಗೆ ಹಬ್ಬದ ಸಮಯದಲ್ಲಿ ಇಷ್ಟು ಬೆಲೆ ಕಡಿಮೆಯಾಗಿರುವುದು ಗ್ರಾಹಕರಲ್ಲಿ ಸಂತೋಷ ಹೆಚ್ಚುವಂತೆ ಮಾಡಿದೆ.ತಿಂಗಳಿಂದ ನಿರಂತರ ಅಡುಗೆ ಎಣ್ಣೆ ಬೆಲೆಯಲ್ಲಿ ಇಳಿಕೆ ಕಾಣುತ್ತಿರುವುದರಿಂದ ಕಿರಾಣಿ ಅಂಗಡಿ ಮಾಲೀಕರು ಅಡುಗೆ ಎಣ್ಣೆ ದಾಸ್ತಾನು ಮಾಡಲು ಹೆದರುವಂತಾಗಿದೆ. ಎರಡು ವರ್ಷಗಳಲ್ಲಿ ಹಲವು ಬಾರಿ ಎರಡು ತಿಂಗಳಿಗಾಗುವಷ್ಟು ಅಡುಗೆ ಎಣ್ಣೆ ದಾಸ್ತಾನು ಮಾಡಿಕೊಳ್ಳುವ ಮೂಲಕ ಲಾಭ ಮಾಡಿಕೊಳ್ಳುತ್ತಿದ್ದ ಅಂಗಡಿಕಾರರು ಈಗ ನಷ್ಟಕ್ಕೆ ಹೆದರಿ ದಾಸ್ತಾನು ಕಡಿಮೆ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.