(ವಿಶ್ವ ಕನ್ನಡಿಗ ನ್ಯೂಸ್) : ಮೆಲ್ಬೋರ್ನ್ ನಲ್ಲಿ ನಡೆದ ಭಾರತ ಹಾಗು ಪಾಕಿಸ್ತಾನಗಳ ನಡುವಿನ ರೋಚಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ನಿಂದ ಟೀಮ್ ಇಂಡಿಯಾ ಜಯಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿತ್ತು. 160 ರನ್ ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಕೊನೆಯ ಎಸೆತದಲ್ಲಿ ಜಯಗಳಿಸಿದೆ.
31 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಕೊಹ್ಲಿ ಮತ್ತು ಪಾಂಡ್ಯಾ ಆಸರೆಯಾದರು. ಕೊಹ್ಲಿ 53 ಎಸೆತಗಳಿಂದ 82 ರನ್ ಬಾರಿಸಿದರೆ, ಪಾಂಡ್ಯ 37 ಎಸೆತಗಳಿಂದ 40 ರನ್ ಬಾರಿಸಿದರು. ಪಾಕಿಸ್ತಾನ ಪರ ಬೌಲಿಂಗ್ ನಲ್ಲಿ ಹಾರಿಸ್ ರೌಫ್ 2 ಹಾಗು ನವಾಜ್ 2 ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ನಲ್ಲಿ ಪಾಕಿಸ್ತಾನ ಪರ ಶಾನ್ ಮಸೂದ್ ಅಜೇಯ 52 ರನ್ ಹಾಗೂ ಇಫ್ತಿಕರ್ ಅಹ್ಮದ್ 51 ರನ್ ಬಾರಿಸಿದರು. ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಹರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಪಡೆದಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.