ಪ್ಯಾರಿಸ್ (ವಿಶ್ವ ಕನ್ನಡಿಗ ನ್ಯೂಸ್) : ಉತ್ತರ ಇಟಲಿಯ ಸೂಪರ್ ಮಾರ್ಕೆಟ್ ನಲ್ಲಿ ನಡೆದ ಚಾಕು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮಿಲನ್ ಸಮೀಪದ ಅಸಾಗೋ ನಗರದಲ್ಲಿ ಈ ದಾಳಿ ನಡೆದಿದೆ. ಈ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಗಾಯಗೊಂಡವರಲ್ಲಿ ಆರ್ಸೆನಲ್ ಫುಟ್ಬಾಲ್ ಆಟಗಾರ ಪಾಬ್ಲೊ ಮಾರಿ ಕೂಡ ಸೇರಿದ್ದಾರೆ. ಪ್ಯಾರಾಬ್ಲೋ ಮಾರಿ 2020 ರಿಂದ ಆರ್ಸೆನಲ್ನಿಂದ ಗುತ್ತಿಗೆ ಮೇಲೆ ಇಟಾಲಿಯನ್ ಕ್ಲಬ್ ಮೊಂಜಾ ಪರ ಆಡುತ್ತಿದ್ದಾರೆ. 46 ವರ್ಷದ ದಾಳಿಕೋರನನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ದಾಳಿಕೋರ ಮಾನಸಿಕ ಅಸ್ವಸ್ಥ ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.