(www.vknews.in) ; ದುಬೈ – ದಾರುನ್ನೂರ್ ಯು ಎ ಇ ಕಲ್ಚರಲ್ ಸಮಿತಿಯ ವತಿಯಿಂದ ವರ್ಷ0ಪ್ರತಿ ಆಚರಿಸಿಕೊಂಡು ಬರುತ್ತಿರುವ ಗ್ರಾಂಡ್ ಇಫ್ತಾರ್ ಕಾರ್ಯಕ್ರಮವನ್ನು ದಿನಾಂಕ 08/04/2023 ನೇ ಶನಿವಾರದಂದು ಶಾರ್ಜಾ ಮುವೈಲಿಯದಲ್ಲಿರುವ ಪೇಸ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇತ್ತೀಚೆಗೆ ದುಬೈ ಲ್ಯಾಂಡ್ ಮಾರ್ಕ್ ಹೋಟೆಲ್ ನಲ್ಲಿ ನಡೆದ ದಾರುನ್ನೂರ್ ಮಾಸಿಕ ಮಜ್ಲಿಸುನ್ನೂರ್ ಸಂದರ್ಭ ಗ್ರಾಂಡ್ ಇಫ್ತಾರ್ ನ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ದಾರುನ್ನೂರ್ ಮಜ್ಲಿಸುನ್ನೂರ್ ಅಮೀರ್ ಸಯ್ಯದ್ ಅಸ್ಕರ್ ಅಲಿ ತಂಗಳ್ ಕೊಲ್ಪೆ, ದಾರುನ್ನೂರ್ ಯು ಎ ಇ ಅದ್ಯಕ್ಷ ಜನಾಬ್ ಮಹಮ್ಮದ್ ಮಾಡಾವು, ಉಸ್ತಾದ್ ಅಬ್ದುಲ್ ಕರೀಂ ದಾರಿಮಿ ಸಾಲ್ಮರ ,ಸಯ್ಯದ್ ಆಶಿಕ್ ಅಸ್ಕರ್ ಅಲಿ ತಂಗಳ್, ದಾರುನ್ನೂರ್ ಯು ಎ ಇ ಪ್ರಧಾನ ಕಾರ್ಯದರ್ಶಿ ಜನಾಬ್ ಬದ್ರುದ್ದೀನ್ ಹೆಂತಾರ್, ಜನಾಬ್ ಅಬ್ದುಲ್ ರಜಾಕ್ ಸೊಂಪಾಡಿ, ಗ್ರಾಂಡ್ ಇಫ್ತಾರ್–23 ಸ್ವಾಗತ ಸಮಿತಿಯ ಚೇರ್ಮೇನ್ ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ, ಕೋ ಚೇರ್ಮೇನ್ ಜನಾಬ್ ನವಾಝ್ ಬಿ ಸಿ ರೋಡ್, ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್ , ಪ್ರಧಾನ ಕಾರ್ಯದರ್ಶಿ ಜನಾಬ್ ಮಹಮ್ಮದ್ ಸಾಜಿದ್ ಬಜ್ಪೆ, ಜೊತೆ ಕಾರ್ಯದರ್ಶಿ ಜನಾಬ್ ಸಿರಾಜ್ ಬಿ ಸಿ ರೋಡ್, ಜನಾಬ್ ಇಸ್ಮಾಯಿಲ್ ಮುಂಧಿರ್ ತೋಡಾರ್ ಕೋಶಾಧಿಕಾರಿ ಜನಾಬ್ ಶಂಸುದ್ದೀನ್ ಸೂರಲ್ಪಾಡಿ, ಜನಾಬ್ ಅಶ್ರಫ್ ಅರ್ತಿಕೆರೆ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಂಡ್ ಇಫ್ತಾರ್–23 ಕಾರ್ಯಕ್ರಮವು ಏಪ್ರಿಲ್ ತಿಂಗಳ 8 ನೇ ತಾರೀಕು ಶನಿವಾರದಂದು ಆಸರ್ ನಮಾಜ್ ಬಳಿಕ ಆರಂಭಗೊಳ್ಳಲಿದೆ. ಮಾಸಿಕ ಮಜ್ಲಿಸುನ್ನೂರ್, ಮರ್ಹೂಂ ನೌಶಾದ್ ಹಾಜಿ ಅನುಸ್ಮರಣೆ , ಹಾಗೂ ಮುಖ್ಯ ಪ್ರಭಾಷಣ ಕಾರ್ಯ ಏರ್ಪಡಿಸಲಾಗುವುದು. ಇಫ್ತಾರ್ ಬಳಿಕ ಹೃಸ್ವ ಸಭಾ ಕಾರ್ಯಕ್ರಮ ನೆರವೇರಲಿದೆ , ಅಲ್ಲದೆ ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಏರ್ಪಡಿಸಲಾಗುವುದು ಎಂದು ಚೈರ್ಮನ್ ಅಬ್ದುಲ್ ಸಲಾಂ ಬಪ್ಪಳಿಗೆ ವಿವರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.