ಮಂಗಳೂರು (www.vknews.in) : ಎಸ್.ಕೆ.ಎಸ್.ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಲೀಡರ್ ಶಿಫ್ ಕ್ಯಾಂಪ್ ಕೈಕಂಬದ ಮಾತಾಕೃಪ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷರಾದ ಸಯ್ಯಿದ್ ಅಮೀರ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು, ಸಮಸ್ತ ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಎಮ್ ಎಚ್ ಮೊಹಿದೀನ್ ಹಾಜಿ ಧ್ವಜಾರೋಹಣಗೈದರು.
ಕೈಕಂಬ ವಲಯ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಜಮಾಲುದ್ದೀನ್ ದಾರಿಮಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು, ಎಸ್.ಕೆ.ಎಸ್.ಎಸ್.ಎಫ್ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಸತ್ತಾರ್ ಪಂದಲ್ಲೂರ್ ರವರು ಮಾತನಾಡಿ ನವ ತಲೆಮಾರಿನಿಂದ ಉತ್ತಮ ನಾಗರೀಕತೆಯುಳ್ಳ ಶಿಕ್ಷಿತ ವರ್ಗವನ್ನು ಸೃಷ್ಟಿಸುವುದೇ ಸಂಘಟನೆಯ 35ನೇ ವಾರ್ಷಿಕೋತ್ಸವದ ಮೂಲ ಉದ್ದೇಶ. ಕಾಲೇಜು ಕ್ಯಾಂಪಸ್ ಗಳಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ವಿರೋಧಿಸುವ ಮೂಲಕ ಕ್ಯಾಂಪಸ್ ಮತ್ತು ಸಮಾಜದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾದಕ ದ್ರವ್ಯದ ಪಿಡುಗನ್ನು ಕಿತ್ತೊಗೆಯಲು ಸಮುದಾಯವು ಒಕ್ಕೂರಲಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು
ಸಂಘಟನೆ ಅಲ್ಲಾಹನ ತೃಪ್ತಿಗೆ ಎಂಬುದರ ಬಗ್ಗೆ ಸ್ವದಖತುಲ್ಲಾಹ್ ಫೈಝಿ, ನಾಯಕತ್ವದ ಬಗ್ಗೆ ರಶೀದ್ ಮಾಸ್ಟರ್ ತರಗತಿ ನಡೆಸಿಕೊಟ್ಟರು. ಎಸ್ಕೆಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಸ್ವಾಗತಿಸಿದರು.ಜಿಲ್ಲಾ ಉಪಾಧ್ಯಕ್ಷ ಫಾರೂಕ್ ದಾರಿಮಿ,ಎಸ್ಕೆಎಸ್ಸೆಸ್ಸೆಫ್ ಕೈಕಂಬ ವಲಯ ಪ್ರಧಾನ ಕಾರ್ಯದರ್ಶಿ ಆರೀಫ್ ಬಡಕಬೈಲ್ ಕಾರ್ಯಕ್ರಮ ನಿರೂಪಿಸಿ ಜಿಲ್ಲಾ ವರ್ಕಿಂಗ್ ಕಾರ್ಯದರ್ಶಿ ಬದ್ರುದ್ದೀನ್ ಕುಕ್ಕಾಜೆ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.