ಸುಳ್ಯ (www.vknews.in) : ಮಂಡೆಕೋಲು ಗಡಿ ಪ್ರದೇಶದಲ್ಲಿ ಸುಮಾರು 9 ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಮಂಡೆಕೋಲು ಗ್ರಾಮದ ವಿವಿಧ ಭಾಗಗಳಲ್ಲಿ ಕಾಡಾನೆಗಳ ದಾಳಿ ಕಳೆದ 2 ತಿಂಗಳಿನಿಂದ ತೀವ್ರಗೊಂಡಿದ್ದು ಸಲವು ಕಡೆ ಹಾನಿಗಳು ಕೂಡ ಸಂಬಂಧಿಸಿದೆ ಸುಮಾರು 9 ಆನೆಗಳ ಹಿಂಡು ಕಂಡು ಬಂದಿದೆ. ಪಂಜಿಕಲ್ಲು ಭಾಗದಲ್ಲಿ ಕಾಡಾನೆಗಳ ಹಿಂಡು ಕಂಡು ಬಂದಿದೆ. ಕಾಡಾನೆಗಳ ಹಿಂಡು ರಸ್ತೆ ದಾಟುವ ವೀಡಿಯೋ ವೈರಲ್ ಆಗಿದೆ.
ಕಳೆದ ಕೆಲ ದಿನಗಳಿಂದ ಮಂಡೆಕೋಲು ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ಜನವಸತಿ ಪ್ರದೇಶ, ಸಾರ್ವಜನಿಕ ಸ್ಥಳಗಳಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ ಈ ಪ್ರದೇಶದಲ್ಲಿ ಜನರು ಓಡಾಡಲು ಭಯಪಡುವಂತಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.