(www.vknews. in) ; ದಿನಾಂಕ:16-02-2024ನೇ ಶುಕ್ರವಾರದಂದು ದ.ಕ. ಜಿಲ್ಲಾ ಗೃಹರಕ್ಷಕ ದಳದ ಪೊಲೀಸ್ ಅಧೀಕ್ಷಕರು ಮತ್ತು ಪೋಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಬರುವ ಘಟಕಗಳಿಗೆ ಚುನಾವಣಾ ಪೂರ್ವಸಿದ್ಧತಾ ತಯಾರಿ ಸಲುವಾಗಿ 25 ಗೃಹರಕ್ಷಕರನ್ನು ಸಿ ಫಾರಂ ನೀಡಿ ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದಂತಹ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ರವರು ಮಾತನಾಡಿ ಶಿಸ್ತುಬದ್ಧವಾಗಿ ಇಲಾಖಾ ನಿಯಮಾನುಸಾರ ಸಮವಸ್ತ್ರ ಧರಿಸಿ ಹಾಗೂ ಜವಾಬ್ದಾರಿಯುತವಾಗಿ ಕಾನೂನು ಸುವ್ಯವಸ್ಥೆ ಕರ್ತವ್ಯ ಮಾಡುವಂತೆ ಸೂಚಿಸಿದರು. ಮುಂಬರುವ ಚುನಾವಣಾ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದರು.
10 ದಿನಗಳ ಮೂಲತರಬೇತಿ ಶಿಬಿರವನ್ನು ಆಯೋಜಿಸಲಾಗುವುದು. ಸದರಿ ತರಬೇತಿ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ, ಸಂಚಾರಿ ನಿಯಂತ್ರಣ, ಮೂಲ ಅಗ್ನಿಶಮನ ತರಬೇತಿ, ರೈಫಲ್ ಡ್ರಿಲ್ ತರಬೇತಿ ಮುಂತಾದ ಸಮಗ್ರ ತರಬೇತಿಗಳನ್ನು ನೀಡಲಾಗುವುದು ಎಂದು ವಿವರಿಸಿದರು. ಸಮವಸ್ತ್ರವನ್ನು ಎಲ್ಲೂ ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರಿಕೆಯನ್ನು ನೀಡಿದರು. ಮಂಗಳೂರು ಘಟಕಾಧಿಕಾರಿ ಶ್ರೀ ಮಾರ್ಕ್ ಶೆರಾರವರು ಹೊಸದಾಗಿ ನೇಮಕಗೊಂಡ ಗೃಹರಕ್ಷಕರಿಗೆ ಇಲಾಖಾ ನಿಯಮಗಳ ಬಗ್ಗೆ ಮಾಹಿತಿ ನೀಡಿ ತರಬೇತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಉಳ್ಳಾಲ ಘಟಕಾಧಿಕಾರಿ ಶ್ರೀ ಸುನಿಲ್ ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.