ಸಲಾಲ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಒಮಾನ್ ಸಲಾಲ ಝೋನ್ ಇದರ ವತಿಯಿಂದ ದಿನಾಂಕ 17.2.2024 ಶನಿವಾರ ಝೋನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸುಳ್ಯ ಅಧ್ಯಕ್ಷತೆಯಲ್ಲಿ ಸನಯ್ಯ ಶಕೀಲ್ ರವರ ಮನೆಯನಲ್ಲಿ ಕೆಸಿಎಫ್ ಡೇ ಮತ್ತು ಮಾಸಿಕ ಮಹ್ಳರತುಲ್ ಬದ್ರಿಯ ಕಾರ್ಯಕ್ರಮ ನಡೆಯಿತು.
ಶಾಫಿ ಮುಸ್ಲಿಯಾರ್ ದುಅ ನೆರವೇರಿಸಿದರು. ನೌಶಾದ್ ಹಿಮಮಿ ಈಶ್ವರಮಂಗಳ ಕಿರಾ-ಅತ್ ಪಠಿಸಿದರು. ಸಲಾಲ ಝೋನ್ ಪ್ರಧಾನ ಕಾರ್ಯದರ್ಶಿ ಫಾರೂಕ್ ಸೂರಿಬೈಲ್ ಸ್ವಾಗತಿಸಿ, ಅಬ್ದುಲ್ ಲತೀಫ್ ಸುಳ್ಯ ಉದ್ಘಾಟನೆ ಮತ್ತು ಅಧ್ಯಕ್ಷೀಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಆದರ್ಶ ಭಾಷಣವನ್ನು ಇಹ್ಸಾನ್ ಕರ್ನಾಟಕ ಒರ್ಘನೈಝರ್ ಆದ ಬಹು: ಖಲಂದರ್ ಬಾವ ಉಸ್ತಾದ್ ಮಾಡಿದರು ಹಾಗೂ ಡಿಸೇನಿಯಂ ವಿಷಯ ಮತ್ತು ಸಂಘಟನಾ ತರಗತಿಯನ್ನು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಝೋನ್ ಕಾರ್ಯಕಾರಿ ಸದಸ್ಯರಾದ ಕಮಾಲ್ ಸುಳ್ಯ, ಬಷೀರ್ ಅಡ್ಕಾರ್, ಅದಿಲ್ ಮಾಚಾರ್ ಹಾಗೂ ಇತರ ಸದಸ್ಯರು ಬಾಗಿಯಾದರು
ಅಶ್ರಫ್ ಪಡುಬಿದ್ರಿ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು,. ಕೊನೆಯಲ್ಲಿ ಪಾರೂಕ್ ಕೃಷ್ಣಾಪುರ ಧನ್ಯವಾದ ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.