(www.vknews.in) : ವಿಶಿಷ್ಟ ಸೇವೆಗಾಗಿ ರಾಜ್ಯದಲ್ಲಿ ಹಲವಾರು ಪೋಲಿಸ್ ಅಧಿಕಾರಿಗಳು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡವರಿದ್ದಾರೆ. ಆದರೆ DY,SP ಶ್ರೀ ವೆಲೆಂಟಿನ್ ಡಿಸೋಜಾರಷ್ಟು ಪ್ರಶಸ್ತಿಗಳನ್ನು ಪಡೆದ ಪೋಲಿಸ್ ಅಧಿಕಾರಿ ಗಳು ರಾಜ್ಯದಲ್ಲಿ ಅತೀ ವಿರಳವೆನ್ನಬಹುದು. ಒಂದು ಬಾರಿ ರಾಷ್ಟ್ರಪತಿ ಪದಕ ಮೂರು ಬಾರಿ ಮುಖ್ಯ ಮಂತ್ರಿಗಳ ಚಿನ್ನದ ಪದಕವನ್ನು ಹಾಗೂ ಹಲವಾರು ವಿಶಿಷ್ಟ ಪುರಸ್ಕಾರಗಳನ್ನು ಪಡೆದು ಪೋಲಿಸ್ ಇಲಾಖೆಯ ಅಪರೂಪದ ಅಧಿಕಾರಿಯಾಗಿ ರಾಜ್ಯದ ವಿವಿಧೆಡೆಗಳಲ್ಲಿ ವಿಜೃಂಭಿಸಿ ಮಹತ್ತರ ಸಾಧನೆಗೈದ ಶ್ರೀ ವೆಲೆಂಟಿನ್ ಡಿಸೋಜಾ ಕನಾ೯ಟಕ ಪೋಲಿಸ್ ಇಲಾಖೆಗೆ ಒಂದು ಶ್ರೇಷ್ಠ ವರದಾನವಾಗಿದ್ದಾರೆ.
” ಎಲ್ಲಿ ರೌಡಿಗಳನ್ನು ಮಟ್ಟ ಹಾಕಲಾಗಿದೆಯೋ, ಎಲ್ಲಿ ಭೂಗತ ದೊರೆಗಳ ಜಾಡನ್ನು ಬೇಧಿಸಲಾಗಿದೆಯೋ, ಎಲ್ಲಿ ಅಂತರ್ ರಾಜ್ಯ ಚೋರ ಶಿಖಾಮಣಿಗಳನ್ನು ಹಿಡಿಯಲಾಗಿದೆಯೋ, ಎಲ್ಲಿ ಸಮಾಜ ಘಾತುಕರ ಸದ್ದಡಗಿಸಲಾಗಿದೆಯೋ, ಎಲ್ಲಿ ಸ್ಮಗ್ಲಿಂಗ್, ವೇಶ್ಯಾವಾಟಿಕೆ ನಿಗ್ರಹಿಸಲಾಗಿದೆಯೋ ಅಲ್ಲೆಲ್ಲಾ DYSP ಶ್ರೀ ವೆಲೆಂಟಿನ್ ಡಿಸೋಜಾರ ಅದ್ಭುತ ಸಾಹಸ ನಡೆದಿದೆ ಎಂದೇ ಅರ್ಥ”. ಎಲ್ಲಿ ರಾಜ್ಯ, ರಾಜ್ಯ ಪ್ರಶಸ್ತಿ ನೀಡಲಾಗುತಿದೆಯೋ ಎಲ್ಲಿ ರಾಷ್ಟ ಪದಕ ನೀಡಲಾಗುತ್ತಿದೆಯೋ ಎಲ್ಲಿ ಇಲಾಖಾ ಪುರಸ್ಕಾರ, ಸಾರ್ವಜನಿಕ ಪ್ರಶಂಸೆಗಳು ಸಿಗುತ್ತಿದೆಯೋ ಅಲ್ಲೆಲ್ಲಾ ಶ್ರೀ ವೆಲೆಂಟಿನ್ ಡಿಸೋಜಾರ ಹೆಸರು ಇದ್ದೇ ಇರುತ್ತದೆ.
ಮಂಗಳೂರು ನಗರದ ಸಿಸಿಬಿಯಲ್ಲಿ 3 ವರ್ಷ ಇನ್ಸ್ಪೆಕ್ಟರ್ ರಾಗಿಯೂ, ಬಂಟ್ವಾಳದ DYSP ಯಾಗಿಯೂ, ಮಂಗಳೂರು ನಗರದ ಕಮಿಷನರ್ ಕಚೇರಿಯ ಲ್ಲಿ CCRB ವಿಭಾಗದಲ್ಲಿ DYSP ಯಾಗಿಯೂ ಉಡುಪಿ ನಗರ ಅಧಿಕಾರಿಯಾಗಿ ದುಡಿದು ದಿಟ್ಟ ನಿಲುವಿನ ಧೀರ ಅಧಿಕಾರಿ ಎಂಬ ಜನ ಮನ್ನಣೆ ಗಳಿಸಿದ್ದಾರಲ್ಲದೆ ಧೀರತೆಯ ಧೀಮಂತ ಪೋಲಿಸ್ ಅಧಿಕಾರಿ ಯೆಂಬ ಖ್ಯಾತಿಗೆ ಒಳಗಾಗಿದ್ದಾರೆ. ಶ್ರೀ ವೆಲೆಂಟಿನ್ ಡಿಸೋಜಾ ಎಂದಾಕ್ಷಣ ಕಳ್ಳ ಖದೀಮರು, ಕಾಳ ಸಂತೆ ಕೋರರರು, ಭೂಗತ ದೊರೆಗಳು, ರೌಡಿಗಳು, ಪುಂಡರು ಇತ್ಯಾದಿ ಸಮಾಜ ಘಾತುಕರು, ದೇಶ ದ್ರೋಹಿಗಳು ಒಮ್ಮೆಲೇ ಬೆಚ್ಚಿ ಬೀಳುತ್ತಾರೆ. ಯಾವುದೇ ಪ್ರಕರಣಗಳು ಶ್ರೀ ವೆಲೆಂಟಿನ್ ಡಿಸೋಜಾರ ಕೈಗೆ ಬಂದರೆ ಆ ಪ್ರಕರಣ ಪತ್ತೆಯಾಗುವುದರಲ್ಲಿ ಸಂದೇಹವಿಲ್ಲ. ನೂರಾರು ಭೀಕರ ಪ್ರಕರಣಗಳನ್ನು ಪತ್ತೆ ಮಾಡಿ ಸರಕಾರಕ್ಕೆ ಕೋಟ್ಯಾಂತರ ರೂ.ಗಳ ಅಕ್ರಮ ಸಂಪತ್ತನ್ನು ಸ್ವಾಧೀನಪಡಿಸಿ ಕೊಟ್ಟ ಶ್ರೀ ವೆಲೆಂಟಿನ್ ಡಿಸೋಜಾ ಇಲಾಖೆಯ ಹಾಗೂ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇದೀಗ ಕಾರವಾರ ಜಿಲ್ಲೆಯ DYSP ಯಾಗಿ ಎರಡು ವರ್ಷ ಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ವೆಲೆಂಟಿನ್ ಡಿಸೋಜಾ ನಿವೃತ್ತಿಯ ಅಂಚಿನಲ್ಲಿದ್ದಾರೆ. ಕಾರವಾರ ಜಿಲ್ಲೆಯಾದ್ಯಂತ ಅನುಷ್ಠಾನದಲ್ಲಿದ್ದ ಎಲ್ಲಾ ರೀತಿಯ ಅನಿಷ್ಟತೆಯನ್ನು ಬಗ್ಗು ಬಡಿದು ನಿರ್ಭಯ ವಾತಾವರಣ ವನ್ನು ಸೃಷ್ಟಿಸಿದ ಶ್ರೀ ವೆಲೆಂಟಿನ್ ಡಿಸೋಜಾ ಉತ್ತಮ ಕ್ರೀಡಾ ಪಟು, ವೈಟ್ ಲಿಪ್ಟರ್ ಆಗಿ ಮತ್ತಷ್ಟು ಜನ ಮೆಚ್ಚುಗೆ ಗಳಿಸಿದ್ದಾರೆ.
ಶ್ರೀ ವೆಲೆಂಟಿನ್ ಡಿಸೋಜಾ ರಂತಹ ನಿಷ್ಠಾವಂತ ಅಧಿಕಾರಿಗಳು ತೀರಾ ವಿರಳವೆನ್ನಬಹುದು. ಸಾಂಗ್ಲಿಯಾನರಂತಹ ದಿಟ್ಟೆದೆಯ ಪೋಲಿಸ್ ಅಧಿಕಾರಿ ಗಳ ಸಾಲಿಗೆ ಸೇರುವ ಶ್ರೀ ವೆಲೆಂಟಿನ್ ಡಿಸೋಜಾ ಪೋಲಿಸ್ ಇಲಾಖೆಗೊಂದು ವರದಾನವಾಗಿದ್ದಾರೆ.
ಶೇಖ್ ಇಸಾಕ್ ಸಂಪಾದಕರು- ಕಾಕೋ೯ಟಕ ಸಾಪ್ತಾಹಿಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.