ಹೊಸದಿಲ್ಲಿ(www.vknews.in) ; ಹರ್ಯಾಣದ ಬಹುಮಹಡಿ ಕಟ್ಟಡದ 7 ನೇ ಮಹಡಿಯಿಂದ ಬಿದ್ದು ಯೂಟ್ಯೂಬರ್ಗಳು ಮೃತಪಟ್ಟಿದ್ದಾರೆ. ಮೃತರನ್ನು ಗರ್ವಿತ್ ಸಿಂಗ್ ಗಯಾರಿ (25) ಮತ್ತು ನಂದಿನಿ ಕಶ್ಯಪ್ (22) ಎಂದು ಗುರುತಿಸಲಾಗಿದೆ. ಇಬ್ಬರೂ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಅನೇಕ ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ.
ಕೆಲವು ದಿನಗಳ ಹಿಂದೆ, ಗರ್ವಿತ್ ಮತ್ತು ನಂದಿನಿ ತಂಡದೊಂದಿಗೆ ಶೂಟಿಂಗ್ ಉದ್ದೇಶಕ್ಕಾಗಿ ಡೆಹ್ರಾಡೂನ್ನಿಂದ ಹರಿಯಾಣದ ಬಹದ್ದೂರ್ಗಢಕ್ಕೆ ತೆರಳಿದರು. ಇಬ್ಬರೂ ರುಹೀಲಾ ರೆಸಿಡೆನ್ಸಿಯ ಏಳನೇ ಮಹಡಿಯಲ್ಲಿ ಫ್ಲಾಟ್ ಅನ್ನು ಬಾಡಿಗೆಗೆ ತೆಗೆದುಕೊಂಡು ಐವರು ಸಹೋದ್ಯೋಗಿಗಳೊಂದಿಗೆ ವಾಸಿಸುತ್ತಿದ್ದರು.
ಶನಿವಾರ ಬೆಳಗ್ಗೆ 6 ಗಂಟೆ ವೇಳೆಗೆ ಇಬ್ಬರೂ ಫ್ಲಾಟ್ ಮೇಲಿನಿಂದ ಕೆಳಗೆ ಬಿದ್ದಿರುವುದು ಕಂಡುಬಂದಿದೆ. ಶೂಟಿಂಗ್ ಮುಗಿಸಿ ಶುಕ್ರವಾರ ತಡರಾತ್ರಿ ಇಬ್ಬರೂ ಫ್ಲಾಟ್ಗೆ ಬಂದಿದ್ದರು. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಫೋರೆನ್ಸಿಕ್ ತಂಡ ಕೂಡ ಸ್ಥಳಕ್ಕೆ ಆಗಮಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
View this post on Instagram A post shared by Garvit Singh Garry (@garvitgarry)
A post shared by Garvit Singh Garry (@garvitgarry)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.