(www.vknews. in) ; ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಮಹಾಸಭೆಯು ಮುಫತ್ತಿಶ್ ಹಂಝ ಫೈಝಿ ಯವರ ಅಧ್ಯಕ್ಷತೆಯಲ್ಲಿ ದಿನಾಂಕ 8.5.2023 ರಂದು ಹಿದಾಯತುಲ್ ಇಸ್ಲಾಂ ಕೇಂದ್ರ ಮದ್ರಸ ಬೆಳ್ಳಾರೆಯಲ್ಲಿ ನಡೆಯಿತು.
ಬೆಳ್ಳಾರೆ ಮುದರ್ರಿಸರಾದ ನಸೀಹ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಮುಹಮ್ಮದ್ ನವವಿ ಮುಂಡೋಳೆ ಆಯ ವ್ಯಯ ಮತ್ತು ಶಮೀಂ ಅರ್ಶದಿ ವಾರ್ಷಿಕ ವರದಿ ಮಂಡಿಸಿದರು. ಮುದರ್ರಿಬ್ ಹಾಶಿಂ ರಹ್ಮಾನಿ ವಿಷಯ ಮಂಡಿಸಿದರು. ಮದ್ರಸಾ ಮೇನೇಜ್ಮೆಂಟ್ ಅಧ್ಯಕ್ಷರಾದ ತಾಜ್ ಮಹಮ್ಮದ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರೇಂಜ್ ಕೋಶಾಧಿಕಾರಿ ಹಸೈನಾರ್ ಧರ್ಮತ್ತಣ್ಣಿ, ಮದ್ರಸಾ ಮೇನೇಜ್ಮೆಂಟ್ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ರೇಂಜ್ ಮೇನೇಜ್ಮೆಂಟ್ ಕಾರ್ಯದರ್ಶಿ ಬಶೀರ್ ಯು.ಪಿ, ಬೆಳ್ಳಾರೆ ಕೋಶಾಧಿಕಾರಿ ಅಬ್ದುಲ್ ಹಮೀದ್ ಹಾಜಿ ಸುಳ್ಯ, ಝಕರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಅಬೂಬಕರ್ ಮಂಗಳ, ಕಾರ್ಯದರ್ಶಿ ಬಶೀರ್ ಕಲ್ಲಪ್ಪಣೆ, ಕೋಶಾಧಿಕಾರಿ ನಝೀರ್ ಶೂ ಬಿಝ್, ಜೊತೆ ಕಾರ್ಯದರ್ಶಿ ಅಝರುದ್ದೀನ್ ಬೆಳ್ಳಾರೆ, ಸದಸ್ಯರಾದ ಉಸ್ಮಾನ್ ಹಾಜಿ ಬಯಂಬಾಡಿ, ಉದ್ಯಮಿ ಮಮ್ಮಾಲಿ ಹಾಜಿ, ಅಹ್ಮದ್ ಪಾರೆ, ಅಮೀರ್ ಕುಕ್ಕುಂಬಳ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸ್ವಾಗತಿಸಿ ವಂದಿಸಿದರು.
ಸಭೆಯಲ್ಲಿ 2024-25 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು : ಮುಹಮ್ಮದ್ ನವವಿ ಬೆಳ್ಳಾರೆ
ಉಪಾಧ್ಯಕ್ಷರು : ಅಬ್ದುಲ್ ಖಾದರ್ ಫೈಝಿ ಐವರ್ನಾಡು, ಅಹ್ಮದ್ ನಈಮ್ ಫೈಝಿ ಪೇರಡ್ಕ
ಪ್ರ .ಕಾರ್ಯದರ್ಶಿ : ಶಮೀಮ್ ಅರ್ಶದಿ ಮಂಡೆಕೋಲು
ಜೊತೆ ಕಾರ್ಯದರ್ಶಿಗಳು : ರಫೀಕ್ ಮುಸ್ಲಿಯಾರ್ ಅಜ್ಜಾವರ, ಯಾಸಿರ್ ಅರಾಫತ್ ಕೌಸರಿ ಪಾಜಪಳ್ಳ
ಕೋಶಾಧಿಕಾರಿ : ಹಸೈನಾರ್ ಧರ್ಮತ್ತಣ್ಣಿ
IT ಕೋಡಿನೇಟರ್ : ಡಿ.ಕೆ ಝಕರಿಯಾ ಮುಸ್ಲಿಯಾರ್ ಬೆಳ್ಳಾರೆ
ಪರೀಕ್ಷಾ ಬೋರ್ಡ್ ಚೇರ್ಮನ್ : ಮುಹಮ್ಮದ್ ರಫೀಕ್ ಹನೀಫಿ ನೆಟ್ಟಾರು
ವೈಸ್ ಚೇರ್ಮನ್ : ಟಿ.ಎ ಸುಲೈಮಾನ್ ಮುಸ್ಲಿಯಾರ್ ಬೆಳ್ಳಾರೆ, ಅಬೂಬಕ್ಕರ್ ಅಝ್ಹರಿ ಬಯಂಬು
SKSBV ಚೇರ್ಮನ್ : ಮುಈನುದ್ದೀನ್ ಫೈಝಿ ಅರಂಬೂರು
ಕನ್ವೀನರ್ : ಸಾಜಿದ್ ಅಝ್ಹರಿ ಕಲ್ಲುಗುಂಡಿ
ವರ್ಕಿಂಗ್ ಕನ್ವೀನರ್ : ನೌಶಾದ್ ಅಝ್ಹರಿ ಅರಂತೋಡು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.