(www.vknews.in) ; 2019 ಜಗತ್ತಿನಾದ್ಯಂತ ಕೋರೋನ ಪಸರಿಸಿ ದಿಗ್ಬ್ರಮೆಯಾದ ಸಂದರ್ಭ ಸ್ವಲ್ಲ ಕೆಮ್ಮು ನೆಗಡಿಯಾದರೆ ಒಡ ಹುಟ್ಟಿದವರೇ ದೂರ ಮಾಡಿದ ಸಂದರ್ಭ ಮರಣ ಹೊಂದಿದರೆ ಶವ ಸಂಸ್ಕಾರಕ್ಕೆ ಸ್ವಂತ ಕುಟುಂಬ ಹತ್ತಿರ ಬಾರದ ಸಂದರ್ಭ ಕರ್ನಾಟಕ ಮುಸ್ಲಿಂ ಜಮಾಅತ್ ನ ಸಹಾಯ್ ಮೂಲಕ ಅದ್ಬುತ ಸೇವೆ ಸಲ್ಲಿಸಿದ ಸಂದರ್ಭ
ಸುಮಾರು 70 ರಷ್ಟು ಗರ್ಬಿಣಿಯರನ್ನುಚಾರ್ಟಡ್ ವಿಮಾನದ ಮೂಲಕ ಅವರವರ ಕುಟುಂಬ ಕ್ಕೆ ಸಂತೋಷ ದಲ್ಲಿ ಮನೆ ಸೇರಿಸುವಲ್ಲಿ ಸಫಲರಾದ ಕೆಸಿಎಫ್..
ಜಗತ್ತಿನ ಎಲ್ಲಾ ಚಟುವಟಿಕೆಗಳು ಸ್ತಬ್ಧ ವಾದಾಗ ಜಗತ್ತು ಭೀತಿಯಲ್ಲಿ ಎಲ್ಲಾ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಿದ ಸಂದರ್ಭದಲ್ಲಿ ಕೆಸಿಎಫ್ ಕೋವಿಡ್ ಮಹಾ ಮಾರಿಯ ವಿರುದ್ಧ ಸಮರ ರಂಗಕ್ಕೆ ಇಳಿದಿತ್ತು.
ಕೊರೋನ ಸಂದರ್ಭದಲ್ಲಿ ಯಾರೂ ಮನೆಯಿಂದ ಹೊರಗೆ ಬರಲು ಹೆದರಿದ ಸಂದರ್ಭದಲ್ಲಿ ಅನಿವಾಸಿಗಳಿಗೆ ತಾಯ್ನಾಡಿಗೆ ಬರಲು ಕೆಸಿಎಫ್ ಸುಮಾರು 13 ಚಾರ್ಟರ್ಡ್ ವಿಮಾನಗಳ ವ್ಯವಸ್ಥೆ ಮಾಡಿತ್ತು. ಆಗಮಿಸಿದ ಅನಿವಾಸಿ ಕನ್ನಡಗಿರನ್ನು ಸ್ವೀಕರಿಸಿ 7 ದಿನಗಳ ಕಾಲ ಕ್ವಾರಂಟೈನ್ ಮಾಡಿಸಿ ಅವರವರ ಮನೆಗೆ ಕಳಿಸಿಕೊಡಲಾಗಿತ್ತು. ಇದರಲ್ಲಿ ತುಂಬು ಗರ್ಭಿಣಿ ಯರು,ಸಣ್ಣ ಮಕ್ಕಳು, ಹಿರಿಯರ ನಾಗರಿಕರು ಒಳಗೊಂಡಿದ್ದರು.ಅಂದಿನ ಸನ್ನಿವೇಶ ನೆನಪಿಸುವಾಗ ಈಗಲೂ ಮೈ ಜುಮ್ಮೆನಿಸುತ್ತಿದೆ. ನಾನು ಮತ್ತು ಹಮೀದ್ ಬಜಪೆ ಕೆಸಿಎಫ್ ಕಳುಹಿಸಿದ 13 ಚಾರ್ಟರ್ಡ್ ವಿಮಾನದಲ್ಲಿ ಆಗಮಿಸಿದ ಅನಿವಾಸಿ ಕನ್ನಡಿಗರನ್ನು ಬಜಪೆ ವಿಮಾನ ನಿಲ್ಲಾಣದಲ್ಲಿ ಸ್ವೀಕರಿಸಿ ಜಿಲ್ಲಾಡಳಿತ ನೀಡಿದ ಬಸ್ ಮೂಲಕ ನಗರದ ವಿವಿಧ ವಸತಿಗೃಹದಲ್ಲಿ ಕಾರಂಟೈನ್ ಗೆ ವ್ಯವಸ್ಥೆ ಮಾಡಿಸಿ ಸಹಕರಿಸಿದ್ದೆವು. ಅಂದಿನ ಆ ಸಂದರ್ಭದ ಸೇವೆಗಳು ಜೀವನ ಪೂರ್ತಿ ಮರೆಯುವಂತಿಲ್ಲ.
ಈ ಒಂದು ಅನಿವಾಸಿ ಕನ್ನಡಿಗರಿಗೆ ನೆರವಾದ ಕೆಸಿಎಫ್ ನ ನಾಯಕತ್ವ ಎಂದೂ ಮರೆಯುವಂತಿಲ್ಲ.ಬೇಕಲ್ ಉಸ್ತಾದ್ ರವರಿಂದ ದುಬೈ ಯಲ್ಲಿ ಘೋಷಿಸಲ್ಪಟ್ಟ ಕೆಸಿಎಫ್ ಬೆಳವಣಿಗೆಯಲ್ಲಿ ರಾಜ್ಯದ ಖ್ಯಾತ ವಾಗ್ಮಿಗಳಾದ ಶಾಫಿ ಸ ಅದಿ ಮತ್ತು ಝೈನೀ ಕಾಮಿಲ್ ರವರ ಕೊಡುಗೆಯನ್ನು ಮರೆಯುವಂತಿಲ್ಲ. ಅವರಿಬ್ಬರ ನಿರಂತರವಾದ ಗಲ್ಫ್ ಪರ್ಯಟನೆಯಲ್ಲಿ ಅನಿವಾಸಿ ಕನ್ನಡಿಗರಿಗೆ ಕರುನಾಡ ಏಕೀಕೃತ ವೇದಿಕೆಯ ಬಗ್ಗೆ ಪ್ರೇರಣಾದಾಯಕ ತರಗತಿಗಳನ್ನು ನೀಡುತ್ತಿದ್ದರು. ರಾಜ್ಯದ ಸಂಘಟನೆಯ ಹಿರಿಯ ನಾಯಕರ ನಿರಂತರ ಚರ್ಚೆ, ಯೋಜನೆಯ ಫಲವಾಗಿ ಕೆಸಿಎಫ್ ಪ್ರಾರಂಭದಲ್ಲೇ ಬಹಳ ಶಕ್ತಿಯಾಗಿ ಬೆಳೆದು ಬಂತು. ಕೆಸಿಎಫ್ ಹಲವು ರಾಷ್ಟ್ರಗಳಲ್ಲಿ ಇಂದು ಕಾರ್ಯಚರಿಸುತ್ತಿದೆ. ಕೋರೋನ ಸಂದರ್ಭದಲ್ಲಿ ಮನೆಯಿಂದಲೇ ಹೊರಗೆ ಬರಲು ದೀರ್ಘ ಕಾಲ ನಿರ್ಬಂಧಿತ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರ ಪಾಲಿಗೆ ಬೆನ್ನೆಲುಬಾಗಿದ್ದು ಕೆಸಿಎಫ್…
ಅದರ ಆರಂಭಿಕ ಕಾಲದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ನಾಯಕತ್ವ ನೀಡಿದ ಡಾ. ಶೇಖ್ ಬಾವ ಹಾಜಿ ಅಬುದಾಬಿ,ಖಮರುದ್ದೀನ್ ಗೂಡಿನಬಳಿ ಸೌದಿ, ಇಕ್ಬಾಲ್ ಕಾಜೂರು ದುಬಾಯಿ,ಜಮಾಲ್ ವಿಟ್ಲ, ಇಕ್ಬಾಲ್ ಬರಕ,ಅಲಿ ಮುಸ್ಲಿಯಾರ್, ಡಿ ಪಿ ಸಖಾಫಿ , ಹಂಝ ಕನ್ನಂಗಾರ್, ಆರಿಫ್ ಕೋಡಿ,ಅಯ್ಯೂಬ್ ಕೋಡಿ, ಉಸ್ಮಾನ್ ಝೈತ್ ಕೊಡಗು,ಜಲೀಲ್ ನಿಝಾಮಿ ಕೊಡಗು,ಪಿಎಮ್ಎಚ್,ಹಮೀದ್ ಸ ಅದಿ, ಹಬೀಬ್ ಕೋಯ, ಎನ್ ಎಸ್ ಅಬ್ದುಲ್ಲಾ,ಮೆಹ್ಬೂಬ್ ಸಖಾಫಿ,ಸ್ವಾಲಿಹ್ ಬೆಳ್ಳಾರೆ,ಅಶ್ರು ಬಜಪೆ,ಅಶ್ರಫ್ ಕಿನ್ಯ ಮದೀನ,ಸಲೀಂ ಕನ್ಯಾಡಿ ,ಹಾಫಿಳ್ ಪಾರೂಕ್ ಸಖಾಫಿ ಕತ್ತರ್ ,ರಹೀಂ ಸಅದಿ ಕತಾರ್ … ಹೀಗೆ ಪಟ್ಟಿ ಮುಂದುವರಿಯುತ್ತದೆ.ಇಂತಹ ಹಲವಾರು ಹೆಸರೆತ್ತಿ ಹೇಳಬೇಕಾದ ಗಣ್ಯ ನಾಯಕತ್ವ ಇದರ ಹಿಂದಿದೆ.ಅಲ್ಲಾಹು ಕೆಸಿಎಫ್ ನ ಎಲ್ಲಾ ನಾಯಕರಿಗೂ,ಕಾರ್ಯಕರ್ತರಿಗೂ ದಶ ವಾರ್ಷಿಕ ಸಂಭ್ರಮ ವಿಜಯದೊಂದಿಗೆ ಅಲ್ಲಾಹು ದೀರ್ಘಾಯುಷ್ಯ, ಆಫಿಯತ್,ಆರೋಗ್ಯ ನೀಡಿ ಅನುಗ್ರಹಿಸಲಿ ಅಮೀನ್.
ಅಶ್ರಫ್ ಕಿನಾರ ಮಂಗಳೂರು ಉಪಾಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.