ಮುಡಿಪು (www.vknews.in) : ಸ್ವಲಾಹುದ್ದೀನ್ ಹಯರ್ ಸೆಕೆಂಡರಿ ಮದ್ರಸ ಸುನ್ನೀ ಬಾಲ ಸಂಘ( ಎಸ್. ಬಿ. ಎಸ್) ಸಂಬಾರುತೋಟ ಇದರ ಮಹಾ ಸಭೆಯು ದಿನಾಂಕ 12-05-2024 ಆದಿತ್ಯವಾರ ಮದ್ರಸಾ ಸಭಾಂಗಣದಲ್ಲಿ ನಡೆಯಿತು.
ಮನೀರ್ ಆಹ್ಸನಿ ಯವರ ಪ್ರಾರ್ಥನೆಯ ಬಳಿಕ ಇಕ್ಬಾಲ್ ಜೌಹರಿ ಸ್ವಾಗತಿಸಿ ಸದರ್ ಮುಅಲ್ಲಿಂ ರಫೀಖ್ ಅಂಜದಿ ಯವರ ನೇತ್ರತ್ವದಲ್ಲಿ 2024-25 ನೇ ಸಾಲಿನ ನೂಥನ ಕಾರ್ಯಕಾರಿ ಸಮಿತಿಗೆ 17 ಸದಸ್ಯರನ್ನು ಆಯ್ಕೆಮಾಡಿ ಅಧ್ಯಕ್ಷ ಹಾಗೂ ಮದ್ರಸಾ ನಾಯಕನಾಗಿ ಸಫ್ವಾನ್, ಉಪಾಧ್ಯಕ್ಷನಾಗಿ ತ್ವಾಲಿಬ್, ಪ್ರ. ಕಾರ್ಯದರ್ಶಿ ಹಾಗೂ ಉಪನಾಯಕನಾಗಿ ಫಝಲ್ ಜೊ. ಕಾರ್ಯದರ್ಶಿ ಮಿಸ್ಹಬ್ ಕೋಶಾಧಿಕಾರಿಗಳಾಗಿ ಸಿನಾನ್ (ಸಹದ್,ಅಫ್ಹಮ್) ಮದ್ರಸಾ ನಾಯಕಿಯಾಗಿ ಆಫಿಯ, ಉಪನಾಯಕಿಯಾಗಿ ಫಾಸಿಲಾ ಮತ್ತು (ಜಾಸಿಮ, ಅಫೀಝಾ, ಹಿಬಾ) ರನ್ನೂ ಗ್ರೂಪ್ ಲೀಡರ್ ಗಳಾಗಿ ತನ್ವೀರ್ ಮತ್ತು ತನ್ಸೀಪ್ ವಿಧ್ಯಾರ್ಥಿನಿಯರಲ್ಲಿ ಶಝಾ ಮತ್ತು ನಾಸಿಯಾ ಳನ್ನೂ ಆಯ್ಕೆ ಮಾಡಿ, ಬಳಿಕ ಸಿನಾನ್ ಸಹದಿ ಅಲ್ ಹುಮೈದಿ ಬೈತ್ ಆಲಾಪನೆ ನಡೆಸಿದರು.
ಸ್ವಾಲಿಹ್ ಆಹ್ಸನಿ ಅಲ್- ಕಾಮಿಲ್,ಅಶ್ರಫ್ ಸಹದಿ ಮಾರ್ಗದರ್ಶನವನ್ನು ನೀಡಿ ಶುಭ ಹಾರೈಸಿದರು ಸಮಾರಂಭದ ಕೊನೆಯಲ್ಲಿ ಕಳೆದ ರಮಳಾನ್ ತಿಂಗಳಲ್ಲಿ ಖುರ್ಆನ್ ಖತಂ ಪೂರ್ತಿಗೊಳಿಸಿದ ವಿಧ್ಯಾರ್ಥಿನಿಗಳಿಗೆ ಕ್ಯಾಶ್ ಅವಾರ್ಡ್ ನೀಡಿ ಗೌರವಿಸಲಾಯಿತು. 9:30 ಕ್ಕೆ ಸರಿಯಾಗಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.