ಮಂಗಳೂರು (www.vknews. in) : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಇತ್ತೀಚೆಗೆ ನಿರ್ಧಿಷ್ಟ ಪ್ರಕರಣವೊಂದರಲ್ಲಿ ಬೆಳ್ತಂಗಡಿ ಪೊಲೀಸರು ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಪೋಲೀಸು ಸ್ಟೇಶನ್ ಗೆ ಧಾವಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಅಲ್ಲದೆ,ಪೊಲೀಸರನ್ನು ಏರು ಧ್ವನಿಯಿಂದ ಬೈದು, ಅವಾಚ್ಯ ಶಬ್ದದಿಂದ ಅವಹೇಳನ ಗೈದಿದ್ದಾರೆ.
ಪೂಂಜಾರು ತಾನು ಓರ್ವ ಜನಪ್ರತಿನಿಧಿ ಎಂಬುದನ್ನು ಮರೆತು ತನ್ನ ಎಂದಿನ ಚಾಳಿಯನ್ನು ಮುಂದುವರಿಸಿ ಈ ನಾಡಿನ ಕಾನೂನು, ನಿಯಮ, ನೈತಿಕತೆ ಎಲ್ಲವನ್ನೂ ಉಲ್ಲಂಘಿಸಿರುತ್ತಾರೆ. ಪೂಂಜಾರನ್ನು ಭಂದಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದ ರೊಂದಿಗೆ, ಅವರ ಶಾಸಕ ಸ್ಥಾನವನ್ನು ಅನರ್ಹ ಗೊಳಿಸಬೇಕಿದೆ. ಈ ನಾಡಿನ ಕಾನೂನು ಸಂಸ್ಥೆಗಳನ್ನು ಅವಹೇಳನ ಗೈಯುವ ಯಾವುದೇ ಶಕ್ತಿಗಳನ್ನು ಮಟ್ಟ ಹಾಕಬೇಕಿದೆ.
ಕೆ.ಅಶ್ರಫ್( ಮಾಜಿ ಮೇಯರ್) ಮಂಗಳೂರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.