(www.vknews. in) ; ನೇರ ಚುನಾವಣೆ ನಡೆಯುವ ಲೋಕಸಭೆ ಮತ್ತು ವಿಧಾನಸಭೆಗಳಿಗೆ ರಾಜಕೀಯ ಪ್ರಭಾವದಿಂದಾಗಿ ಚಿಂತನಶೀಲ,ಮೇಧಾವಿಗಳು ಆಯ್ಕೆಯಾಗಿ ಬರುವ ಅವಕಾಶ ಕಡಿಮೆ ಇರಬಹುದೆಂದು ಸಂವಿಧಾನಕರ್ತರು ಮನಗಂಡು ಮೇಲ್ಮನೆಗೆ ಪರೋಕ್ಷ ಚುನಾವಣೆ ಇರುವುದರಿಂದ ಚಿಂತನಶೀಲರು, ಸಮರ್ಥರು,ಯೋಗ್ಯರು ಆಯ್ಕೆಯಾಗಿ ನಮ್ಮ ದೇಶವನ್ನು ಸರಿದಾರಿಯಲ್ಲಿ ಮುನ್ನಡೆಸುವ ವಿಚಾರಗಳು ಚರ್ಚೆಯಾಗಿ ಸೂಕ್ತ ಕಾನೂನು ಕಟ್ಟಳೆಗಳು ರಚನೆಯಾಗಬೇಕೆಂಬ ಸದುದ್ದೇಶ ಅವರಿಗಿತ್ತು. ಆದರೆ ಈಗ ಅವಕಾಶವಾದಿ ಪಕ್ಷಾಂತರಿಗಳಿಗೂ, ಅನರ್ಹರಿಗೂ ಅವಕಾಶ ಕಲ್ಪಿಸುವ ಮೂಲಕ ಸಂವಿಧಾನದ ಆಶಯದ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳು ವಿಧಾನಪರಿಷತ್ತನ್ನು ತಮ್ಮ ರಾಜಕೀಯ ಮೇಲಾಟಕ್ಕೆ ಬಳಸಿಕೊಳ್ಳುತ್ತಿರುವುದು ಖೇದಕರ.
ನಾನು ಉನ್ನತ ಶಿಕ್ಷಣವನ್ನು ಪಡೆದು ಕೊಲ್ಲಿ ದೇಶದ ಹೆಸರಾಂತ ಕಂಪೆನಿಗಳಲ್ಲಿ ಉನ್ನತ ಆಡಳಿತ ಹುದ್ದೆಗಳನ್ನು ವಿಭಾಗಿಸಿ ಅನುಭವಗಳಿಸಿರುತ್ತೇನೆ.ನನ್ನ ಸೇವಾಧಿಯಲ್ಲೇ ಹಲವಾರು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲೂ ಭಾಗಿಯಾಗಿರುತ್ತೇನೆ.
ಈಗ ಸ್ವದೇಶಕ್ಕೆ ಮರಳಿ ಹಲವಾರು ಸಮಾಜ ಸೇವಾ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುತ್ತೇನೆ.ನನ್ನ ಅನುಭವ , ಶಕ್ತಿ , ಸಾಮರ್ಥ್ಯವನ್ನು ನಾಡ ಸೇವೆಗೆ ಬಳಸಿಕೊಳ್ಳುವ ಉದ್ದೇಶದೊಂದಿಗೆ 2024 ರ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಸ್ವತಃ ನಾನು ಪದವಿ ಪಡೆದುಕೊಂಡಿರುವ ಮಂಗಳೂರು ವಿಶ್ವ ವಿದ್ಯಾನಿಲಯವು ದೇಶದಲ್ಲೇ ಹೆಸರುವಾಸಿಯಾಗಬೇಕೆಂದು ವಿ.ವಿ ಸ್ಥಾಪಕ ರೂವಾರಿಗಳು ಕನಸು ಕಂಡಿದ್ದರು.ಪ್ರಾರಂಭದಲ್ಲಿ ವಿ.ವಿ ಆ ದಿಕ್ಕಿನಲ್ಲಿ ಸಾಗುತ್ತಿತ್ತು.ಮಧ್ಯೆ ವಿ.ವಿ ಯ ಆಡಳಿತ ಚುಕ್ಕಾಣಿ ಹಿಡಿದಿರುವರ ಅಕ್ರಮ ಅವ್ಯವಹಾರಗಳಿಂದಾಗಿ ನಮ್ಮ ಹೆಮ್ಮೆಯ ವಿ.ವಿ ಅದೊಗತಿಯತ್ತ ಸಾಗುತ್ತಲಿದೆ.ವಿ.ವಿ ಒಳಗೆ ನುಸುಳಿರುವ ಹೆಗ್ಗಣಗಳನ್ನು ಹೊರದಬ್ಬಿ ಮಂಗಳೂರು ವಿ.ವಿ ಯ ಉಳಿವು ಮತ್ತು ಶ್ರೇಯೋಭಿವೃದ್ಧಿಗಾಗಿ ಸಮಾನ ಮನಸ್ಕರ ಸಹಕಾರದೊಂದಿಗೆ ನಾನು ಹೋರಾಟವನ್ನು ಹಮ್ಮಿಕೊಳ್ಳುತ್ತೇನೆ.
ನೈಋತ್ಯ ಪದವೀಧರರ ಕ್ಷೇತ್ರದ ಪ್ರಜ್ಞಾವಂತ ಮತದಾರ ಬಾಂಧವರು ಜೂನ್ 3 ರಂದು ನಡೆಯುವ ಚುನಾವಣೆಯಲ್ಲಿ ನನಗೆ ಮೊದಲ ಪ್ರಶಾಸ್ತ್ಯದ ಮತ ನೀಡಿ ಬೆಂಬಲಿಸಿ ಗೆಲ್ಲಿಸಬೇಕಾಗಿ ವಿನಂತಿಸುತ್ತಿದ್ದೇನೆ.ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿ ಡಾ.ಶೇಖ್ ಬಾವ ಮಂಗಳೂರು , ಸಮಾಜ ಸೇವಕರು ಜಂ-ಇಯ್ಯತ್ತುಲ್ ಫಲಾಹ್ ಮುಂದಾಳು ಸಯ್ಯಿದ್ ಶಾಹುಲ್ ಹಮೀದ್ ತಂಙಳ್ ಮಂಗಳೂರು , ಶಿಕ್ಷಣ ತಜ್ಞರಾದ ಸುಕೇಶ್ ಮಂಗಳೂರು , ರಾಜ್ಯ ಮುಸ್ಲಿಂ ಲೀಗ್ ಸಮಿತಿ ಸದಸ್ಯರಾದ ಎ.ಎಸ್.ಇ ಕರೀಮ್ ಕಡಬ , ಮುಸ್ಲಿಂ ಲೀಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್ , ಕೋಶಾಧಿಕಾರಿ ರಿಯಾಝ್ ಹರೇಕಳ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.