ಕಾಪು (www.vknews.in): ಮೇ ೧೯ ಶುಕ್ರವಾರ ಡಿ.ಕೆ.ಎಸ್.ಸಿ ಇದರ ಅಧೀನದಲ್ಲಿರುವ ಅಲ್-ಇಹ್ಸಾನ್ ದಅïವಾ ಕಾಲೇಜು ಇದರ ಅಲ್-ಇಹ್ಸಾನ್ ದಅïವಾ ಸ್ಟೂಡೆಂಟ್ಸ್ ಅಸೋಸಿಯೇಶನ್ (ಅಡ್ಸ) ಇದರ ೨೦೨೩-೨೪ನೇಯ ಕಮಿಟಿ ಬೀಳ್ಗೊಡುಗೆ ಹಾಗೂ ೨೦೨೪-೨೫ನೇಯ ನೂತನ ಕಮಿಟಿಯನ್ನು ಮರ್ಕಝ್ ಕ್ಯಾಂಪಸಿನಲ್ಲಿ ರಚಿಸಲಾಯಿತು.
ಕಾರ್ಯಕ್ರಮದಲ್ಲಿ ದಅïವಾ ಕಾಲೇಜು ಇದರ ಪ್ರಾಂಶುಪಾಲರಾದ ಮುಹಮ್ಮದ್ ಸ್ವಾಬಿರ್ ಸಅದಿ ಅಲ್-ಅಸ್ನವೀ ಅಧ್ಯಕ್ಷತೆಯನ್ನು ವಹಿಸಿದರು. ಬಾತೀಷ್ ಹಿಮಮಿ ಸ್ಸಖಾಫಿರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಫಾರೂಕ್ ಆತೂರುರವರು ಹಳೆ ಕಮಿಟಿಯ ವರದಿ ಮಂಡನೆ ಮಾಡಿದರು ಹಾಗೂ ರಾಫಿಹ್ ಸಜಿಪರವರು ಹಳೆ ಕಮಿಟಿಯ ಲೆಕ್ಕ ಪತ್ರವನ್ನು ಮಂಡಿಸಿದರು. ಕೊನೆಯದಾಗಿ ೨೦೨೩-೨೪ನೇ ಸಾಲಿನ ನೂತನ ಕಮಿಟಿಯನ್ನು ರಚಿಸಲಾಯಿತು. ಅಧ್ಯಕ್ಷರು: ಮುಹಮ್ಮದ್ ರಾಫಿಹ್ ಸಜಿಪ, ಕಾರ್ಯದರ್ಶಿ: ಮುಹಮ್ಮದ್ ಮುನವ್ವರ್ ಕನ್ಯಾನ, ಕೋಶಾಧಿಕಾರಿ: ಝಮೀರ್ ಅಬ್ದುಲ್ಲಾ ಸುಹೈಲ್ ಕಡಬ ಹಾಗು ಸದಸ್ಯರಾಗಿ ಮುಹಮ್ಮದ್ ಶಿಹಾಬುದ್ದೀನ್ ಮಡಿಕೇರಿ, ಮುಹಮ್ಮದ್ ಸಾಬಿತ್ ವೇಣೂರು, ಮಹಮ್ಮದ್ ಹನೀಫ್ ಪಣಕಜೆ, ಮುಹಮ್ಮದ್ ಜಬ್ಬಾರ್ ಬಂಟ್ವಾಳ, ಮಹಮ್ಮದ್ ಅಫ್ಳಲ್ ಜಾರಿಗೆಬೈಲು, ಮುಹಮ್ಮದ್ ಸಿನಾನ್ ಮುಡಿಪು ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಾಫೀಳ್ ಮಸ್ರೂರ್ ಸುರೈಜಿ ಸ್ಸಖಾಫಿ ಅಲ್ ವಾರಿಸಿ, ಅಹ್ಮದ್ ಉನೈಸ್ ಅಹ್ಸನಿ ಅಲ್-ಅಫ್ಳಲಿ, ಅಬ್ದುಲ್ ರಶೀದ್ ಸಅದಿ ಅಲ್-ಅಸ್ನವೀ, ಅಬ್ದುಲ್ ಹಮೀದ್ ಅಹ್ಸನಿ ಅಲ್-ಅಫ್ಳಲಿ ಕೆ.ಸಿ ರೋಡ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಫಾರೂಕ್ರವರು ಸ್ವಾಗತಿಸಿದರೆ ಸುಹೈಲ್ ಕಡಬರವರು ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.