(www.vknews. in) ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ಪ್ರಸ್ತುತ ಪಡಿಸಿದ ಮಲ್ಹಾರ್ 2.0 ಕಾರ್ಯಕ್ರಮದಲ್ಲಿ ಕರ್ನಾಟಕದ ಸುಪ್ರಸಿದ್ದ ಗಾಯಕಿ ಶ್ರೀಮತಿ ಸೀಮಾ ರಾಯಕರ್ ಅವರ ಸುಮಧುರ ಕಂಠದಿಂದ ಮಧುರ ಗೀತೆಗಳ ರಸದೌಟಣವನ್ನು ಕಲಾಭಿಮಾನಿಗಳಿಗೆ ಉಣಬಡಿಸಿದರು..
ಶ್ರೀಮತಿ ಸೀಮಾ ರಾಯಕರ್ ಅವರು ಕರ್ನಾಟಕದಾತ್ಯಂತ ಸಾವಿರಾರು ಕಾರ್ಯಕ್ರಮ ನೀಡಿದ ಜನಪ್ರಿಯ ಗಾಯಕಿ, ಭಕ್ತಿಗೀತೆ, ಭಾವಗೀತೆ ಮತ್ತು ಚಲನಚಿತ್ರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಸೀಮಾ ಅವರು ಈ ಮೊದಲು ಲಂಡನ್, ಅಮೇರಿಕಾ, ಆಸ್ಟ್ರೇಲಿಯಾ, ಓಮನ್ ಮತ್ತು ಬಹರೈನ್ ನಲ್ಲಿ ಹಲವಾರು ಕಾರ್ಯಕ್ರಮ ನೀಡಿ ಜನಮನ್ನಣೆ ಗಳಿಸಿದ್ದಾರೆ. ದಿನಾಂಕ 12ನೇ ಜೂನ್ 2024 ರ ಸಂಜೆ 7:00 ಗಂಟೆಗೆ ದೋಹಾ ನಗರದ ಭಾರತೀಯ ಸಾಂಸ್ಕೃತಿಕ ಕೇಂದ್ರ ದ ಅಶೋಕ ಸಭಾಂಗಣದಲ್ಲಿ ಶ್ರೀಮತಿ ಸೀಮಾ ರಾಯಕರ್ ಅವರ ಮಧುರ ಗೀತೆಗಳನ್ನು ಕತಾರ್ ನ ಅನಿವಾಸಿ ಭಾರತೀಯರು ಆನಂದಿಸಿದರು.
ಭಾರತೀಯ ಸಾಂಸ್ಕೃತಿಕ ಕೇಂದ್ರ ದ ಅಧ್ಯಕ್ಷರಾದ ಶ್ರೀ ಮಣಿಕಂಠನ್, ಉಪಾಧ್ಯಕ್ಷರಾದ ನಮ್ಮ ಹೆಮ್ಮೆಯ ಕನ್ನಡಿಗ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಮತ್ತು ಆಡಳಿತ ಮಂಡಳಿ ಸದಸ್ಯರು ಸೀಮಾ ರಾಯಕರ್ ಅವರನ್ನು ಆತ್ಮೀಯತೆಯಿಂದ ಸನ್ಮಾನಿಸಿ ಅವರ ಕಲಾ ಬದುಕು ಉಜ್ವಲವಾಗಿರಲಿ ಎಂದು ಹಾರೈಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.