(www.vknews. in) ; ತುಳುನಾಡಿನ ಹಿರಿಯ ಧಾರ್ಮಿಕ ವಿದ್ವಾಂಸರು ,ಉಡುಪಿಯ ಅತ್ರಾಡಿ ಖಾಝಿಗಳು ಆದ ಶೈಖುನಾ ವಿ.ಕೆ ಅಬೂಬಕ್ಕರ್ ಮುಸ್ಲಿಯಾರ್ ಅವರ ನಿಧನಕ್ಕೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸಿ.ಅಬ್ದುರ್ರಹ್ಮಾನ್ ಮುಸ್ಲಿಂ ಲೀಗ್ ರಾಜ್ಯ ಸಮಿತಿ ಸದಸ್ಯ ಎ ಎಸ್ ಇಬ್ರಾಹಿಂ ಕರಿಂ ಕಡಬ ಮಂಗಳೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್ ,ಜಿಲ್ಲಾ ಕೋಶಾಧಿಕಾರಿ ರಿಯಾಝ್ ಹರೇಕಳ ,ಉಪಾಧ್ಯಕ್ಷರಾದ ಸಯ್ಯಿದ್ ಬಂಗೇರುಕಟ್ಟೆ ಹಾಗೂ ಎಚ್ ಮೊಹಮ್ಮದ್ ಇಸ್ಮಾಯಿಲ್ ಮುಸ್ಲಿಂ ಲೀಗ್ ಹಿರಿಯ ಮುಖಂಡರಾದ ನ್ಯಾಯವಾದಿ ಎಸ್.ಸುಲೈಮಾನ್ , ಬಾಫಖಿ ತಂಙಳ್ ಫೌಂಡೇಶನ್ ಕರ್ನಾಟಕ ಅಧ್ಯಕ್ಷರಾದ ಡಾ.ಶೇಖ್ ಬಾವ ಮಂಗಳೂರು , ಜಂ-ಇಯ್ಯತ್ತುಲ್ ಫಲಾಹ್ ಮುಂದಾಳು ಸಯ್ಯಿದ್ ಸಾಹುಲ್ ಹಮೀದ್ ತಂಙಳ್ ಮೊದಲಾದವರು ತೀವ್ರ ಸಂತಾಪ ಸೂಚಿಸಿದ್ದಾರೆ.
ತುಳುನಾಡಿನ ಜನತೆಗೆ ಇಸ್ಲಾಮ್ ಧರ್ಮದ ಜ್ಞಾನವನ್ನು ಧಾರೆಯೆರೆದ ಹಿರಿಯ ಧಾರ್ಮಿಕ ವಿದ್ವಾಂಸರಾಗಿದ್ದ ಮರ್ಹೂಂ ಅಡ್ಯಾರ್ ಕಣ್ಣೂರು ಮುಹಮ್ಮದ್ ಹಾಜಿ ಅವರ ಮಗನಾದ ವಿ.ಕೆ ಉಸ್ತಾದರ ಇಡೀ ಕುಟುಂಬವೇ ಧಾರ್ಮಿಕ ಪಂಡಿತರಾಗಿದ್ದು,ಧಾರ್ಮಿಕ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು.ಸದ್ದುಗದ್ದಲವಿಲ್ಲದೆ ತಮ್ಮ ಅಗಾಧ ಜ್ಞಾನವನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸಿದ ವಿ.ಕೆ ಉಸ್ತಾದರ ನಿಧನವು ಸಮಾಜಕ್ಕೆ ತುಂಬಲಾರದ ನಷ್ಟವೆಂದು ಬಣ್ಣಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.