(www.vknews. in) ; ಪುತ್ತೂರು ಘಟಕದ ವತಿಯಿಂದ ಇಂದು ಗೃಹರಕ್ಷಕ ಸಿಬ್ಬoದಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಪಿ. ಜಗನ್ನಾಥ ರವರಿಗೆ ಮತ್ತು ಲಘು ಮತ್ತು ಪ್ರವಾಹ ರಕ್ಷಣೆ ಯಲ್ಲಿ ಚಿನ್ನದ ಪದಕ ಪಡೆದ. ಕೇಶವ ಏನ್ ರವರಿಗೆ ಸಮಾದೇಷ್ಟ ಡಾ ಮುರಲೀ ಮೋಹನ್ ಚೂಂತಾರು ಮತ್ತು ಅಧ್ಯ ಕ್ಸತೆ ವಹಿಸಿದ ಮುಳಿಯ ಜ್ಯುವೆಲ್ಲರ್ಸ್ ಮಾಲಕಿ ಕೃಷ್ಣವೇಣಿಪ್ರಸಾದ್ ರವರು ನೆರೆವೇರಿಸಿದರು ಶ್ರೀಮತಿ ಕೃಷ್ಣವೇಣಿಪ್ರಸಾದ್ ರವರು ಗ್ರಹರಕ್ಷಕ ಬಗ್ಗೆ ನಿಸ್ಕಾಮ ಸೇವೆಸಲ್ಲಿಸುತ್ತಿರುವ ಬಗ್ಗೆ ಉತ್ತಮ ಮಾತುಗಳನ್ನು ವ್ಯಕ್ತ ಪಡಿಸಿದರು.
ದೇವರಿಗೆ ಸಮಾನರೆಂದು ಮತ್ತು ಉತ್ತಮ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು. ಕಷ್ಟ ಕಾಲದಲ್ಲಿ ಸದಾ ಆಪತ್ಭಾಂದವ ರಂತೆ ಗ್ರಹ ರಕ್ಷಕರು ಕೆಲಸ ಮಾಡುತ್ತಾರೆ ಎಂದು ನುಡಿದರು. ಸಮಾದೇಷ್ಟ ಡಾ ಚೂಂತಾರು ಮಾತನಾಡಿ ಪುತ್ತೂರು ಘಟಕದ ಸಿಬ್ಬಂದಿಗಳಿಗೆ ನೆಲೆಯಿಲ್ಲದೆ ಇದ್ದು ,ಮುಂದಿನ ದಿನಗಳಲ್ಲಿ ನೆಲೆ ಸಿಗುವುದಕ್ಕೆ ಇಲಾಖೆ ವತಿಯಿಂದ ಪ್ರಯತ್ನಿಸುತ್ತೇವೆ ಮತ್ತು ಮುಖ್ಖ್ಯಮಂತ್ರಿ ಚಿನ್ನದಪದಕ ಪಡೆಯುವುದು ತುಂಬಾ ಕಷ್ಟಕರ ವಿಷಯ ಆದ್ದರಿಂದ ಪ್ರಯತ್ನ ನಮ್ಮದು ಪ್ರತಿಫಲ ದೇವರದ್ದು ಎಂಬ ವಿಚಾರವನ್ನ ತಿಳಿಸಿ ದರು ಹಾಗೂ ಪುತ್ತೂರು ಘಟಕದ ಗ್ರಹರಕ್ಷಕ ಸಿಬ್ಬಂದಿಗಳು ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ್ದು ನಮ್ಮ ಇಲಾಖೆಯಲ್ಲಿ ನಿಷ್ಠೆಯಿಂದ ಕರ್ತವ್ಯನಿರ್ವಹಿಸುತ್ತಿದ್ದಾರೆ.
ಕೃಷ್ಣವೇಣಿಪ್ರಸಾದ್ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಮಾಡೆಂಟ್ ಡಾ. ಮುರಳಿಮೋಹನ್ ಚೂoತಾರು ಮತ್ತು ಘಟಕಾಧಿಕಾರಿ. ಅಭಿಮನ್ಯು ರೈ,ಹಿರಿಯ ಗ್ರಹರಕ್ಷಕರಾದ ಸುದರ್ಶನ್ ಜೈನ್, ಸೈಯದ್ ಹಾಗೂ ಇತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.