(www.vknews. in) ; ಪೋಲಿಸ್ ಅಧಿಕಾರಿಗಳ ಪೈಕಿ ಹಲವರು ಪ್ರಾರಂಭದಲ್ಲಿ ಮಾತ್ರ ದಕ್ಷರಾಗಿ ಇರುತ್ತಾರೆ. ಹಣ ಮುಟ್ಟದೆ ಯಾವ ಪ್ರಭಾವ ಕ್ಕೂ ಒಳಗಾಗದೆ ಸಣ್ಣ ಪುಟ್ಟ ರಾಜಕಾರಣಿಗಳನ್ನು ಠಾಣೆಯಲ್ಲಿ ಬೈದು ಕೈಗೆ ಸಿಗುವ ಪುಡಿ ರೌಡಿಗಳನ್ನು ಹಿಡಿದು-ಹೊಡೆದು ಬಾರೀ ಜೋರಿನ ಪೋಲಿಸ್ ಅಧಿಕಾರಿ ಎಂದು ಹೆಸರು ಗಳಿಸುತ್ತಾರೆ. ದಿನಗಳೆದಂತೆ ಬಾರ್ ಮಾಲೀಕರ, ಸ್ಮಗ್ಲರ್ ಗಳ ಪರಿಚಯವಾಗಿ ತನ್ನ ದಕ್ಷ ತೆಯನ್ನು ಒಂದೊಂದಾಗಿ ಕಳಚಿ ಅತ್ಯಂತ ಭ್ರಷ್ಟರಾಗಿ ಕುಖ್ಯಾತಿ ಪಡೆದು ಹೋದವರಿದ್ದಾರೆ. ಆದರೆ ಪೋಲಿಸ್ ಇಲಾಖೆಗೆ ಸೇರಿದಂದಿನಿಂದ ಇಂದಿನ ವರೇಗೂ ಯಾವುದೇ ಬದಲಾವಣೆ ಇಲ್ಲದೆ ತನ್ನ ದಕ್ಷ ತೆ-ಸಮರ್ಥತೆಗಳನ್ನು ಉಳಿಸಿಕೊಂಡು ಪೋಲಿಸ್ ಇಲಾಖೆಗೆ ಕೀರ್ತಿ ತಂದ ಕೆಲವೇ ಮಂದಿ ಪೋಲಿಸ್ ಅಧಿಕಾರಿ ಗಳಲ್ಲಿ ASI ಸುಜನ್ ಶೆಟ್ಟಿ ಒಬ್ಬರಾಗಿದ್ದಾರೆ ಎಂಬುವುದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿಯೇ ಅವರನ್ನು CCB ಯ ಪಣಂಬೂರು ಬಂದರ್ ಬಜ್ಪೆಗೆ ಸರಕಾರ ಈ ಹಿಂದೆ ನೇಮಿಸಿತ್ತು. ಯಾವುದೇ ಪ್ರಕರಣಗಳಾದರೂ ಸುಜನ್ ಶೆಟ್ಟಿ ಕೈ ಹಾಕಿದ್ದಾರೆಂದರೆ ಆ ಕೇಸು ಪತ್ತೆಯಾಗುವುದರಲ್ಲಿ ಸಂದೇಹವಿಲ್ಲ.
ಮಂಗಳೂರು ನಗರದ CCB, ಪಣಂಬೂರು, ಬಂದರ್, ಬಜ್ಪೆ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಹಲವಾರು ಪ್ರಮುಖ ಪ್ರಕರಣಗಳನ್ನು ಭೇದಿಸಿ ಕುಖ್ಯಾತ ರೌಡಿಗಳನ್ನು, ಸಮಾಜ ಘಾತುಕರನ್ನು ಯಾವ ಗುಹೆಯೊಳಗಿದ್ದರೂ ಹಿಡಿದು ತಂದು ಕಂಬಿಯೊಳಗೆ ತುರುಕಿ ತನ್ನ ಪರಾಕ್ರಮ ಮರೆದ ಸುಜನ್ ಶೆಟ್ಟಿ ಮೂಲತಃ ಹೆಬ್ರಿಯವರು. ಇದೀಗ ಮಂಗಳೂರು ನಗರದ CCB ಯಲ್ಲಿ ಸೇವೆ ಸಲ್ಲಿಸುತ್ತಿದ್ದು ಇತ್ತೀಚೆಗೆ ASI ಯಾಗಿ ಭಡ್ತಿಗೊಂಡು ಪೋಲಿಸ್ ಕಮಿಷನರ್ ಅನುಪಮ್ ಅಗರ್ವಾಲ್ ರವರ ಮುಕ್ತ ಪ್ರಶಂಸೆಗೆ ಪಾತ್ರರಾಗಿ ಶಹಬಾಸ್ ಗಿರಿ ಗಿಟ್ಟಿಸಿಕೊಂಡ ಶ್ರೀ ಸುಜನ್ ಶೆಟ್ಟಿ ಅಕ್ರಮ ದಂಧೆಕೋರರ ಸದ್ದಡಗಿಸಿ ಯಾರ ಹಂಗು ಇಲ್ಲದೆ ಸೇವೆ ಸಲ್ಲಿಸಿ ಪೋಲಿಸ್ ಇಲಾಖೆ ಎಂದರೆ ಏನೆಂಬ ಮಹತ್ವವನ್ನು ತೋರಿಸಿ ಕೊಟ್ಟು ಪೋಲಿಸರು ಹೇಗಿರಬೇಕೆಂದು ಮನವರಿಕೆ ಮಾಡಿಸಿದ ಒಬ್ಬ ಧೀರೋದಾತ್ತ ASI ಇದ್ದರೆ ಅದು ಸುಜನ್ ಶೆಟ್ಟಿ ಎಂಬುದರಲ್ಲಿ ಸಂದೇಹವಿಲ್ಲ.
2021 ರಲ್ಲಿ ಅಂದಿನ ಮುಖ್ಯ ಮಂತ್ರಿಗಳ ಚಿನ್ನದ ಪದಕ ಹಾಗೂ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದು ಸುಜನ್ ಪೋಲಿಸ್ ಇಲಾಖೆಗೆ ಕೀರ್ತಿ ತಂದಿದ್ದಾರೆ. ದಕ್ಷ- ಪ್ರಾಮಾಣಿಕ ಹಾಗೂ ಧೀರ ಪೋಲಿಸ್ ಅಧಿಕಾರಿ ಶ್ರೀ ಸುಜನ್ ಶೆಟ್ಟಿ ಮಂಗಳೂರು ಕಮಿಷನರ್ ವ್ಯಾಪ್ತಿಯ ಪ್ರಾಮಾಣಿಕ ASI ಗಳಲ್ಲಿ ಓರ್ವರಾಗಿದ್ದಾರೆ. ಶ್ರೀಯುತ ಸುಜನ್ ರವರು ರಾಷ್ಟ್ರಪತಿ ಪದಕ ಪಡೆದು ಕೊಳ್ಳುವ ಅರ್ಹತೆಯನ್ನು ಹೊಂದಿದ್ದಾರೆ ಎಂಬ ಯಾತ್ಯಾರ್ಥವನ್ನು ಸರಕಾರ ಮನಗಾಣಬೇಕು.
ಶ್ರೀಯುತ ಸುಜನ್ ಶೆಟ್ಟಿ ಯವರಿಗೆ ಪೋಲಿಸ್ ಇಲಾಖೆಯ ಇನ್ನಷ್ಟು ಹುದ್ದೆ ಗಳು ಲಭಿಸಿ ಪೋಲಿಸ್ ಇಲಾಖೆ ಗೆ ಮತ್ತಷ್ಟು ಕೀರ್ತಿ ತರುವಂತಾಗಲಿ ಎಂದು ನಾವು ಹಾರೈಸುತ್ತೇವೆ.
ಶೇಖ್ ಇಸಾಕ್ ಸಂಪಾದಕರು ಕಾಕೋ೯ಟಕ ಸಾಪ್ತಾಹಿಕ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.