(www.vknews.in) : ಮಹಾರಾಷ್ಟ್ರದಲ್ಲಿ ರೀಲ್ ದುರಂತಗಳು ಮುಂದುವರಿದಿವೆ. ಇನ್ಸ್ಟಾಗ್ರಾಮ್ ರೀಲ್ ಚಿತ್ರೀಕರಣ ವೇಳೆ ಯುವಕನೊಬ್ಬ ದ್ವಿಚಕ್ರ ವಾಹನ ಅಪಘಾತದಲ್ಲಿ ದಾರುಣ ಅಂತ್ಯ ಕಂಡಿದ್ದಾನೆ. ಮಹಾರಾಷ್ಟ್ರದ ಧುಲಾ-ಸೋಲಾಪುರ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ರೀಲ್ ಚಿತ್ರೀಕರಣದ ವೇಳೆ ಕಾರು ಹಳ್ಳಕ್ಕೆ ಬಿದ್ದು ಯುವತಿಯೊಬ್ಬರು ಮೃತಪಟ್ಟಿದ್ದರು.
ಅಪಘಾತಕ್ಕೂ ಮುನ್ನ ಯುವಕರು ಬೈಕ್ ಮೇಲೆ ಕುಳಿತಿರುವ ವಿಡಿಯೋ ಬಿಡುಗಡೆಯಾಗಿದೆ. ಒಂದು ನಿಮಿಷದ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರು ಯುವಕರು ಹೆಲ್ಮೆಟ್ ಧರಿಸದೇ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಹಿಂದೆ ಇದ್ದ ಯುವಕ ವಿಡಿಯೋ ಚಿತ್ರೀಕರಿಸಿದ್ದಾನೆ.
ವಿಡಿಯೋ ಚಿತ್ರೀಕರಣ ಮಾಡುವಾಗ ಬೈಕ್ ನಲ್ಲಿ ಹೋಗುತ್ತಿದ್ದ ಯುವಕ ವಿಡಿಯೋ ನೋಡಿ ವಾಹನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಾಯಗೊಂಡ ಯುವಕರು ಸಹಾಯಕ್ಕಾಗಿ ಮನವಿ ಮಾಡುವುದನ್ನು ವೀಡಿಯೊ ತೋರಿಸುತ್ತದೆ.
चलती बाइक पर रील बनाना दो युवकों को पड़ा महंगा..बाइक का हुआ एक्सीडेंट..बाइक चला रहे शख्स की हादसे में मौके पर ही मौत..जबकि रील बना रहा दूसरा शख्स गंभीर रुप से घायल..ये हादसा #Dhule–#Solapur हाईवे पर #Beed बाईपास पर हुआ..वीडियों शोशल मीडिया पर तेज़ी से हो रहा वायरल@indiatvnews pic.twitter.com/dG8mJm5Jbj — Atul singh (@atuljmd123) July 6, 2024
चलती बाइक पर रील बनाना दो युवकों को पड़ा महंगा..बाइक का हुआ एक्सीडेंट..बाइक चला रहे शख्स की हादसे में मौके पर ही मौत..जबकि रील बना रहा दूसरा शख्स गंभीर रुप से घायल..ये हादसा #Dhule–#Solapur हाईवे पर #Beed बाईपास पर हुआ..वीडियों शोशल मीडिया पर तेज़ी से हो रहा वायरल@indiatvnews pic.twitter.com/dG8mJm5Jbj
— Atul singh (@atuljmd123) July 6, 2024
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.