(www.vknews.in) : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಸಾಗರ ಶಾಖೆ ಇದರ ಮಹಾಸಭೆಯು 31- 1- 2022 ಸಭೆಯು ಬದ್ರಿಯಾ ಮಸ್ಜಿದ್ ನಲ್ಲಿ ನಡೆಯಿತು.ಸಯ್ಯದ್ ಭಾಷ ತಂಗಳ್ ಅವರ ದುಆದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಬದ್ರಿಯಾ ಜುಮ್ಮಾ ಮಸ್ಜಿದ್ ಖತೀಬ್ ಅಬ್ದುರಹ್ಮಾನ್ ಸಖಾಫಿ ಉದ್ಘಾಟಿಸಿ ಕಾರ್ಯಕರ್ತರಿಗೆ ಎಸ್ ಎಸ್ ಎಫ್ ಸಂಘಟನೆಯ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿದರು.
ನಂತರ ಪ್ರದಾನ ಕಾರ್ಯದರ್ಶಿ ಅಲ್ತಾಫ್ ವರದಿ ಮತ್ತು ಕೋಶಧಿಕಾರಿ ಸುಹೈಲ್ ಲೆಕ್ಕ ಪತ್ರ ಮಂಡಿಸಿದರು. ಹಳೆ ಕಮಿಟಿಯನ್ನು ಬರಕಾಸ್ತು ಗೊಳಿಸಿ ಹೊಸ ಕಮಿಟಿ ರಚಿಸಲಾಯಿತು. ಅಧ್ಯಕ್ಷರಾಗಿ ಸಿ ಯಂ ಶಂಶೀರ್, ಪ್ರದಾನ ಕಾರ್ಯದರ್ಶಿಯಾಗಿ ಜಾಬೀರ್ ಮತ್ತು ಕೋಶಾಧಿಕಾರಿಯಾಗಿ ಲುಕ್ಮಾನ್ ಮತ್ತು ಕಾರ್ಯದರ್ಶಿಗಳಾಗಿ ತುಫೈಲ್, ಸಫ್ವಾನ್, ಗುಲ್ಜಾರ್, ಮಹರೂಫ್, ಸಿನಾನ್, ಔಫ, ಬಶೀರ್ ಸಿ ಯಂ , ಮೊಹಮ್ಮದ್ ಕೈಫ್ ಇವರುಗಳನ್ನು ಆಯ್ಕೆ ಮಾಡಲಾಯಿತು.
ಎಸ್ ಎಸ್ ಸಾಗರ ಡಿವಿಶನ್ ಅಧ್ಯಕ್ಷರಾದ ಆಸಿಫ್ ಸಖಾಫಿ, ನೂರುಲ್ ಅಮೀನ್ ಸೊರಬ, ವಿ ಕೆ ನಸೀರ್ ಕಾರ್ಗಲ್ ವಿಕ್ಷಕರಾಗಿ ಆಗಮಿಸಿದ್ದರು. ಎಸ್ ವೈ ಎಸ್ ಸಾಗರ ಯುನಿಟ್ ಅಧ್ಯಕ್ಷರಾದ ರಫೀಕ್, ಸೇರಿದಂತೆ ಎಸ್ ವೈ ಎಸ್ ಮತ್ತು ಎಸ್ ಎಸ್ ಎಫ್ ನ ಹಲವಾರು ನಾಯಕರು ಕಾರ್ಯಕರ್ತರು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.