ಟೆಹರಾನ್ (ವಿಶ್ವ ಕನ್ನಡಿಗ ನ್ಯೂಸ್) : ಸ್ನಾನ ಮಾಡದೇ ವಿಶ್ವದ ಗಮನ ಸೆಳೆದಿದ್ದ ಆಮು ಹಾಜಿ ಕೊನೆಗೂ ವಿಧಿವಶರಾಗಿದ್ದಾರೆ. ಐವತ್ತು ವರ್ಷಕ್ಕೂ ಹೆಚ್ಚು ಕಾಲ ಸ್ನಾನ ಮಾಡದ ಅಮೂ ಹಾಜಿ ತಮ್ಮ 94 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಸಾವಿನ ಸುದ್ದಿಯನ್ನು ಮೊದಲು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಳಿಕ ಅಂತರಾಷ್ಟ್ರೀಯ ಮಾಧ್ಯಮಗಳೂ ಈ ಸುದ್ದಿಯನ್ನು ವರದಿ ಮಾಡಿದ್ದವು.
ಇರಾನ್ನ ದಕ್ಷಿಣ ಪ್ರಾಂತ್ಯದ ಫಾರ್ಸ್ನ ದೇಜ್ಗಾ ಗ್ರಾಮದಲ್ಲಿ ಅವರು ಕಳೆದ ದಿನ ಸಾವನ್ನಪ್ಪಿದ್ದಾರೆ ಎಂದು IRNA ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಮೂ ಹಾಜಿ ಯಾವುದೋ ವಿಚಿತ್ರ ಕಾರಣಕ್ಕೆ ಸ್ನಾನ ಮಾಡಲಿಲ್ಲ. ಸ್ನಾನ ಮಾಡಿದರೆ ಕಾಯಿಲೆ ಬರುತ್ತದೆ ಎಂಬ ಭಯದಿಂದ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸ್ನಾನವನ್ನೇ ಮಾಡಿರಲಿಲ್ಲ. ಅಮೂ ಹಾಜಿ ಒಂಟಿಯಾಗಿದ್ದರು.
ಅವರ ವಿಚಿತ್ರ ವರ್ತನೆಯು ವಿಶ್ವ ಮಾಧ್ಯಮಗಳಲ್ಲಿ ಆಗಾಗ್ಗೆ ವರದಿಯಾಗಿದೆ. ‘ದಿ ಸ್ಟ್ರೇಂಜ್ ಲೈಫ್ ಆಫ್ ಅಮೂ ಹಾಜಿ’ ಸಾಕ್ಷ್ಯಚಿತ್ರವೂ ಗಮನ ಸೆಳೆದಿತ್ತು. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸ್ನಾನ ಮಾಡಿಲ್ಲ ಎಂದು ಹೇಳಿದ್ದರೂ ತಿಂಗಳ ಹಿಂದೆ ಸ್ಥಳೀಯರೇ ಸ್ನಾನ ಮಾಡಿಸಿದ್ದಾರೆ ಎಂದು ಕೆಲ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈ ವಿಷಯದಲ್ಲಿ ಯಾವುದೇ ದೃಢೀಕರಣವಿಲ್ಲ. ಆದರೆ ಸ್ಥಳೀಯರು ಸ್ನಾನ ಮಾಡಿಸಿಯೇ ಮೃತಪಟ್ಟಿದ್ದಾರೆ ಎಂದು ಕೆಲವರು ದೂರಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.