(www.vknews.in) : ಡಿಸೆಂಬರ್ ಜನವರಿ ತಿಂಗಳು ಬಂತೆಂದರೆ ಶಾಲೆ ಕಾಲೇಜು ಗಳಲ್ಲಿ ಸ್ಕೂಲ್ ಡೇ ನಡೆಯುವ, ಪಿಕ್ ನಿಕ್ ಹೋಗುವುದು ಸಾಮಾನ್ಯ. ಬಹುಷಃ ಕೊರೋನದ 2 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಆಗಿರಬೇಕು ಶಾಲೆ ಕಾಲೇಜು ಗಳಲ್ಲಿ ಸ್ಕೂಲ್ ಡೇ ಪಿಕ್ ನಿಕ್ ನಂತಹಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.
ಶಾಲೆ ಕಾಲೇಜು ಪಾಠದ ಮದ್ಯೆ ಸ್ವಲ್ಪ ಎಂಜಾಯ್ ಅಥವಾ ರಿಲಾಕ್ಸ್ ಬೇಕು.ಆದರೆ ಅದು ಅತಿಯಾಗಬರದು. ಹೌದು! ಕಾಲವು ತುಂಬಾ ಬದಲಾಗಿ ಬಿಟ್ಟಿದೆ ಮಕ್ಕಳು ನಮ್ಮ ಕೈ ತಪ್ಪಿ ಹೋಗುತ್ತಿದ್ದಾರೋ ಎಂಬ ಆತಂಕ ಹೆತ್ತವರಿಗೆ ತೀವ್ರವಾಗಿ ಕಾಡುತ್ತಿದೆ. ಅಷ್ಟಕ್ಕೂ ಪರಿಸರವೂ ಮಲಿನ ಗೊಂಡಿದೆ.ಯಾವ ಒಂದು ವಸ್ತುವನ್ನು ಮಕ್ಕಳಿಗೆ ನೀಡಬಾರದೆಂದು ಬಯಸಿದ್ದೆವೋ,ಆ ಒಂದು ವಸ್ತುವನ್ನು ಕೋರೋಣ ಎಂಬ ಮಾರಕ ರೋಗವು ಅದನ್ನು ನಮ್ಮ ಮಕ್ಕಳಿಗೆ ಕೊಡಲು ನಿರ್ಬಂಧ ಗೊಳಿಸಿತು. ಆನ್ಲೈನ್ ತರಗತಿ ಹೆಸರಲ್ಲಿ ಮಕ್ಕಳಿಗೆ ನೀಡಲಾದ ಮೊಬೈಲ್ ಮಕ್ಕಳಲ್ಲಿ ಭಾರಿ ಪರಿಣಾಮ ಬೀರಿಸಿದ್ದು,ಸಾಕಷ್ಟು ಮಕ್ಕಳು ಮೊಬೈಲ್ ಮುಖಾಂತರ ತಪ್ಪು ದಾರಿಗೆ ಅಥವಾ ಮೊಬೈಲ್ ಚಟಕ್ಕೆ ಬಿದ್ದಿರುದು ನಾವೆಲ್ಲ ಗಮನಿಸಿದ ವಿಚಾರ.
ಮೊಬೈಲ್ ಗಿಂತಲೂ ಅಘಾತ ಕಾರಿನ ವಿಚಾರ ವಾಗಿದೆ ಹದಿ ಹರೆಯದ ಮಕ್ಕಳು ಅಮಲು ಪದಾರ್ಥ ಸೇವನೆಗೆ ಬಲಿಯಾಗುತ್ತಿರುವುದು. ಅದರಲ್ಲೂ ಶಾಲಾ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುದು ಎಂಬ ವಾರ್ತೆಗಳು ಕೇಳುವಾಗ ಅಘಾತ ವೆನಿಸುತ್ತದೆ. ಇತ್ತೀಚೆಗೆ ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಮಕ್ಕಳ ಶಾಲಾ ಬ್ಯಾಗ್ ನಿಂದ ಡ್ರಗ್ಸ್ ಗಳನ್ನು ಶಾಲಾ ಅಧ್ಯಾಪಕರು ವಶಪಡಿಸಿಕೊಂಡಿದ್ದಾರೆ. ವಿಶ್ವ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಗೊಳಿಸಿದ ವರದಿ ಪ್ರಕಾರ ಡ್ರಗ್ಸ್ ಮಾಫಿಯಾದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದೆ ಎಂಬ ಬೆಚ್ಚಿ ಬೀಳಿಸುವ ವರದಿ ಪ್ರಕಟಿಸಿದೆ.
ಇದೀಗ ಡಿಸೆಂಬರ್ ಜನವರಿ ತಿಂಗಳು ಗಳಲ್ಲಿ ಎಲ್ಲಾ ಶಾಲಾ ಕಾಲೇಜು ಗಳಲ್ಲಿ ಸ್ಕೂಲ್ ಡೇ ಪಿಕ್ ನಿಕ್ ಹೋಗುವುದು ಆರಂಭ ಗೊಂಡಿದೆ ಇದರಿಂದ ಭಾರಿ ಅನಾಹುತಗಳು ಸಂಭವಿಸುತ್ತಿದ್ದು,ಹೆತ್ತವರು ತಮ್ಮ ಮಕ್ಕಳ ಬಗ್ಗೆ ತೀವ್ರ ಜಾಗ್ರತೆ ವಹಿಸಬೇಕಾಗಿದೆ.
ಕೆಲವು ದಿನಗಳ ಹಿಂದೆ ಕೇಳಿದ ಎರಡು ಪ್ರತ್ಯೇಕ ಘಟನೆಗಳು ಕೇಳುವಾಗ ಮೈ ಝಲ್ ಎನಿಸುತ್ತದೆ.ಇತ್ತೀಚೆಗೆ ಕಾಲೇಜ್ ಡೇ ನಡೆಯುತ್ತಿದ್ದ ಒಂದು ಕಾಲೇಜು ನಲ್ಲಿ ತಮ್ಮದೇ ತರಗತಿ ವಿದ್ಯಾರ್ಥಿನಿಗೆ ಡ್ರಗ್ಸ್ ನೀಡಿ ಅವಳನ್ನು ಸಾಮೂಹಿಕವಾಗಿ ಅತ್ಯಾಚಾರ ಗೈದ ಪ್ರಕರಣ ಹಸಿಯಾಗಿರುವಾಗಲೇ. ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಶಾಲಾ ಪಿಕ್ ನಿಕ್ ಗೆಂದು ಕರೆದು ಕೊಂಡು ಹೋಗಿ ರಾತ್ರಿ ಸ್ವತಹ ಪ್ರಾಂಶುಪಾಲ ಪ್ರಥಮ ಪಿಯುಸಿ ವಿದ್ಯಾರ್ಥಿನಿಗೆ ರಾತ್ರಿ ಆಹಾರದಲ್ಲಿ ಅಮಲು ಪದಾರ್ಥ ಬೆರಸಿ ಆಕೆಯನ್ನು ಅತ್ಯಾಚಾರ ಗೈದ ಹೀನ ಕೃತ್ಯ ಬೆಳಕಿಗೆ ಬಂದಿದೆ.
ಸ್ಕೂಲ್ ಡೇ ಪಿಕ್ ನಿಕ್ ಕಲಿಸುವ ಪೋಷಕರೇ ಇತ್ತ ಗಮನಿಸಿ..
ಒಟ್ಟಿನಲ್ಲಿ ಸ್ಕೂಲ್ ಡೇ ಪಿಕ್ ನಿಕ್ ಹೆಸರಲ್ಲಿ ಕಾಲೇಜು ಅಥವಾ ಶಾಲಾ ಕ್ಯಾಂಪಸ್ನಲ್ಲಿ ನಡೆಯುವ ಅನಾಚಾರ ಮತ್ತುಅನಾಹುತಗಳಿಂದ ನಮ್ಮ ನಿಮ್ಮೆಲ್ಲರ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ಎಲ್ಲಾ ಪೋಷಕರ ಮೇಲಿದೆ.
✍️ PKM ಉರುವಾಲು ಪದವು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.