ಅಸ್ಲಿಂ-ತಸ್ಲಿಂ ಪ್ರವಾದಿ (ಸ.ಅ)ರವರ ಭವಿಷ್ಯವಾಣಿ
(www.vknews.in) : ಮುಹಮ್ಮದ್ ಮುಸ್ತಫಾ (ಸ.ಅ) ರವರ ಪ್ರವಾದಿತ್ವ (ನುಬುವತ್)ದ ಮೂರನೇ ವರ್ಷ ಪೇರ್ಷ್ಯ ಸಾಮ್ರಾಜ್ಯವು ರೋಮನರ ಮೇಲೆ ದಂಡೆತ್ತಿ ಬಂದು ಫ್ಯಾಲಸ್ತೀನನ್ನು ವಶಪಡಿಸಿಕೊಂಡಿತು. ಈ ಸಂಧರ್ಭದಲ್ಲಿ ಯಹೂದಿಯರು ತಮ್ಮ ಶತ್ತ್ರುಗಳಾದ ಕ್ರೈಸ್ತರ ವಿರುದ್ದ ಪೇರ್ಷಿಯದ ಬೆಂಬಲಿಗರಾಗಿದ್ದರು.ಪ್ರವಾದಿ(ಸ.ಅ)ರವರು ಮತ್ತು ಅನುಯಾಯಿಗಳು ರೋಮಿನ ಬೆಂಬಲಿಗರಾಗಿ ದ್ದರು. ಈ ಯುದ್ಧದಲ್ಲಿ ಬೈತುಲ್ ಮುಖದ್ದಸ್ ಕೂಡ ಪರ್ಷಿಯನ್ನರ ಅಧೀನವಾಯಿತು.ಆದರು ಅಲ್ಲಿದ್ದ ಯಹೂದಿಗಳಿಗೆ ಪೇರ್ಷೀಯದವರಿಂದ ಯಾವುದೇ ರಕ್ಷಣೆಯಾಗಲಿ ,ಬೆಂಬಲವಾಗಲಿ ಸಿಗಲಿಲ್ಲ.
ಇದೇ ಸಂದರ್ಭ ರೋಮ್ ಪ್ಯಾಲೆಸ್ತೀನನ್ನು ಸದ್ಯದಲ್ಲೇ ಮರಳಿ ಗೆಲ್ಲುವುದಾಗಿ ಅಲ್ಲಾಹನು ಪವಿತ್ರ ಕುರ್ಆನ್ ಸೂಕ್ತದ ಮೂಲಕ ಘೋಷಿಸುತ್ತಾನೆ.ಪ್ರವಾದಿಯರ ಈ ಕುರ್ಆನ್ ಸೂಕ್ತದ ಉದ್ದರಣೆಯನ್ನು ಕುರೈಷರು ಗೇಲಿ ಮಾಡುತ್ತಾರೆ.ಕೆಲವು ವರ್ಷಗಳ ನಂತರ ರೋಮ್ ಚಕ್ರವರ್ತಿ ಹಿರಾಕ್ಲಿಸ್ ಪೇರ್ಷೀಯಾದವರನ್ನು ಸೋಲಿಸಿ ಪ್ಯಾಲೆಸ್ತೀನ್ ವಶಪಡಿಸಿಕೊಳ್ಳುತ್ತಾರೆ.ಹೀಗೆ ಕುರ್ಆನಿನ ಭವಿಷ್ಯವಾಣಿಯು ನಿಜವಾಗುತ್ತದೆ. ಬದರ್ ಯುದ್ದ ನಂತರ ಪ್ರವಾದಿ(ಸ.ಅ)ರವರು ಇಸ್ಲಾಂ ಸ್ವೀಕಾರ ಮಾಡುವಂತೆ ಆಹ್ವಾನಿಸಿ ಅಂದಿನ ಎಲ್ಲ ರಾಜರುಗಳಿಗೆ ಪತ್ರ ಬರೆಯುತ್ತಾರೆ. ಈ ಪೈಕಿ ರೋಮ್ ಚಕ್ರವರ್ತಿ ಹಿರ್ಕಲ್ ರವರಿಗೆ ಪ್ರವಾದಿಯವರು ಬರೆದ ″ಅಸ್ಲಿಂ-ತಸ್ಲಿಂ″(ಇಸ್ಲಾಂ ನಂಬಿ – ಜಯಶಾಲಿಗಳಾಗಿ) ಎಂಬ ಪತ್ರವು ಇತಿಹಾಸ ಪ್ರಸಿದ್ಧ ವಾಗಿದೆ.
ಈ ಪತ್ರ ಕೈ ಸೇರುವ ಸಮಯದಲ್ಲಿ ರೋಮ ಸಾಮ್ರಾಟರು ರಾಜಧಾನಿ ಕೊನ್ಸ್ಟಾನ್ಟಿನೋಪಲ್ ( ಇಸ್ತಂಬುಲ್) ನಲ್ಲಿರದೆ ಖುದುಸಿನಲ್ಲಿದ್ದರು.ಪತ್ರ ತಲುಪಿದ ಹಿರ್ಕಲ್ (ಹಿರಾಕ್ಲಿಸ್) ಚಕ್ರವರ್ತಿಯವರು ಪ್ರವಾದಿ(ಸ.ಅ)ರವರ ಬಗ್ಗೆ ತಿಳಿದುಕೊಳ್ಳಲು ಮೆಕ್ಕಾದಿಂದ ಪ್ಯಾಲಸ್ತೀನಿಗೆ ವ್ಯಾಪಾರಕ್ಕಾಗಿ ಬಂದಿದ್ದವರನ್ನು ತನ್ನ ಬಳಿ ಕರೆಸಿಕೊಳ್ಳುತ್ತಾರೆ.ಈ ರೀತಿ ಪ್ರವಾದಿ ಯವರ ಕಠಿಣ ಶತ್ರುವಾಗಿದ್ದ ಮಕ್ಕಾದ ಅಬೂಸುಫ್ಯಾನ್ ಚಕ್ರವರ್ತಿಯವರ ಬಳಿ ಬಂದು ನಬಿ(ಸ.ಅ)ರ ಬಗ್ಗೆ ನೈಜ ವಿವರಗಳನ್ನು ಮಂಡಿಸುತ್ತಾನೆ.ಈ ವಿವರಣೆಯನ್ನು ಆಲಿಸಿದ ಚಕ್ರವರ್ತಿಯು ಬೈತುಲ್ ಮುಖದ್ದಸ್ ಸಹಿತ ಈ ಎಲ್ಲ ಪ್ರದೇಶವು ಶೀಘ್ರದಲ್ಲೇ ಆ ಪ್ರವಾದಿಯವರ ಅಧೀನಕ್ಕೆ ಒಳಪಟ್ಟೀತೆಂದು ಭವಿಷ್ಯ ನುಡಿಯುತ್ತಾರೆ.
ಬೈತುಲ್ ಮುಖದ್ದಸ್ ಮತ್ತು ಶ್ಯಾಂ ಇಸ್ಲಾಮಿನ ಅಧೀನದಲ್ಲಿರಬೇಕೆಂಬುದು ಪ್ರವಾದಿಯವರ ಬಯಕೆಯಾಗಿತ್ತು. ಪ್ರವಾದಿಯವರ ಜೀವಿತಾವಧಿಯಲ್ಲಿ ಹಿಜಾಝ್(ಅರೇಬ್ಯ)ನಿಂದ ಹೊರಗೆ ನಡೆಸಿದ ಸೈನಿಕ ಕಾರ್ಯಾಚರಣೆಯು ಶ್ಯಾಂ ವಶಪಡಿಸುವುದಕ್ಕಾಗಿ ನಡೆಸಿದ “ಮುಅತ್ತಾ” ಯುದ್ದವೊಂದು ಮಾತ್ರವಾಗಿತ್ತು.
ಪ್ರವಾದಿಯವರ ವಫಾತ್ ನಂತರ ಪ್ರಥಮ ಖಲೀಫ ಅಬೂಬಕ್ಕರ್ ಸಿದ್ದೀಕ್ (ರ) ಪುನ: ಶ್ಯಾಂಗೆ ಸೇನೆಯನ್ನು ಕಳುಹಿಸಿ ಅಜ್ನೈನ್ ಯುದ್ಧದ ಮೂಲಕ ಡಮಸ್ಕಸ್ ನಗರವನ್ನು ವಶಪಡಿಸಿಕೊಳ್ಳುತ್ತಾರೆ. ಎರಡನೇ ಖಲೀಫಾ ಉಮರುಲ್ ಫಾರೂಕ್(ರ) ರವರ ಅಧಿಕಾರ ಅವಧಿಯಲ್ಲಿ ಯಾರ್ಮೂಕ್-ಖಾದಿಸೀಯ ಯುದ್ಧಗಳ ಮೂಲಕ ಪ್ಯಾಲಸ್ತೀನನ್ನು ವಶಪಡಿಸಿಕೊಳ್ಳುವುದರೊಂದಿಗೆ ಖುದುಸ್-ಬೈತುಲ್ ಮುಖದ್ದಸ್ ಇಸ್ಲಾಮಿನ ತೆಕ್ಕೆಗೆ ಬರುತ್ತದೆ.
— ಸಲಾಹುದ್ದೀನ್ ಅಯ್ಯೂಬಿ-ಕಡಬ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.