ಎಂ. ಡಿ. ಜಬ್ಬಾರ್ (ದೊಂಪ) ಮಂಗಳೂರು ತಾಲೂಕಿನ ಮಲ್ಲೂರು ಗ್ರಾಮದ ಅಂಮುಂಜೆಯ ಗೌರವಾನ್ವಿತ ‘ದೊಂಪ’ ಕುಟುಂಬದಲ್ಲಿ, ದೊಂಪ ಅಬ್ದುಲ್ ರಹ್ಮಾನ್ ಹಾಗೂ ಮರ್ಯಮ್ ಅವರ ಸುಪುತ್ರನಾಗಿ ಜನಿಸಿದ ಎಂ. ಡಿ. ಜಬ್ಬಾರ್ರವರು ತನ್ನ ಶಿಕ್ಷಣವನ್ನು ಫಲ್ಗುಣಿ . ಹಿ. ಪ್ರಾ. ಶಾಲೆ ಮಲ್ಲೂರುನಲ್ಲಿ ಪಡೆದ ಅವರು ಕಂಟ್ರಾಕ್ಟರ್ ಆಗಿ ತನ್ನ ವೃತಿಯನ್ನು ಪ್ರಾರಂಭಿಸುತ್ತಾರೆ.
ತನ್ನ ಎಳೆಯ ವಯಸ್ಸಿನಲ್ಲಿ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿ ನವೋದಯ ಯುವಕ ಮಂಡಲ(ರಿ) ಮಲ್ಲೂರು ಹಾಗೂ ಜೂನಿಯರ್ ಬೆಸ್ಟ್ ಕ್ಲಬ್(ರಿ) ಮಲ್ಲೂರು ಇದರ ಅಧ್ಯಕ್ಷರಾಗಿ ಸೇವೆಸಲ್ಲಿಸುತಾರೆ.
ಹಾಗಯೇ ಬಡಜನರ, ದೀನದಲಿತರ ಆಶೀರ್ವಾದದೊಂದಿಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಾರೆ. ಮಲ್ಲೂರು ವಲಯ ಕಾಂಗ್ರೇಸ್ ಅಧ್ಯಕ್ಷರಾಗಿ, ಗುರುಪುರ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುತಾರೆ ಹಾಗೂ ತನ್ನ ಅವಿರತ ಪರಿಶ್ರಮ ಮೂಲಕ ಎರಡು ಬಾರಿ ಉಳಾಯಿಬೆಟ್ಟು ಗ್ರಾಮ ಪಂಚಾಯತ್ನ ಸದಸ್ಯರಾಗಿ, ನಂತರ ಮಂಗಳೂರು ತಾಲೂಕು ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ಅನಂತರದಲ್ಲಿ ಬ್ಯಾರಿ ಸಮುದಾಯದಲ್ಲಿಯೇ ಅತೀ ಕಿರಿಯ ವಯಸ್ಸಿನಲ್ಲೇ ಪ್ರತಿಷ್ಠಿತ ಮಂಗಳೂರು ತಾಲೂಕು ಪಂಚಾಯತ್ನ ಅಧ್ಯಕ್ಷರಾಗಿ ನೇಮಕಗೊಂಡ ಶ್ರೇಯಸ್ಸು ಎಂ. ಡಿ. ಜಬ್ಬಾರ್ ಗೆ ಸಲ್ಲುತ್ತದೆ.
ಮುಂದೆ ಎಂ.ಡಿ. ಜಬ್ಬಾರ್ರವರು, ಮಲ್ಲೂರು ದೆಮ್ಮಲೆ ಬದ್ರಿಯಾ ಜುಮಾ ಮಸ್ಟಿದ್ನ ಅಧ್ಯಕ್ಷರಾಗಿಯು ಕೂಡ ಕಾರ್ಯನಿರ್ವರಿಸುತ್ತಾರೆ ಹಾಗೂ ತಮ್ಮ ಅವಧಿಯಲ್ಲಿ ದೆಮ್ಮಲೆ ಬದ್ರಿಯಾ ಜುಮಾ ಮಸ್ಟಿದ್ನ ಮಸ್ಟಿದ್ ಪುನರ್ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಾರೆ.
ಸಯ್ಯದ್ ಹೈದ್ರೋಸ್ ಜುಮಾ ಮಸ್ಟಿದ್ ಉದ್ಧಬೆಟ್ಟು ಇದರ ಏಳಿಗೆಗಾಗಿ ಹಾಗೂ ಇದರ ಉರೂಸು ಕಾರ್ಯಕ್ರಮಕ್ಕೆ ಅಪಾರ ಕೊಡುಗೆಯನ್ನು ನೀಡಿರುತ್ತಾರೆ.
ತನ್ನ ರಾಜಕೀಯ ಅವಧಿಯಲ್ಲಿ ಎಂ.ಡಿ. ಜಬ್ಬಾರ್ರವರು ಮುಸ್ಲಿಂ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಧ್ವನಿಯಾಗಿ ಕಾರ್ಯನಿರ್ವರಿಸುತ್ತಾರೆ ಹಾಗೂ ತನ್ನ ಸಮಾಜಸೇವೆಯ , ನಿಷ್ಕಲ್ಮಶ ವ್ಯಕ್ತಿತ್ವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು.
ಎಂ ಡಿ ಜಬ್ಬಾರ್ ಅವರು ಮರಹೂಂ ಬದ್ರುದ್ದೀನ್ ಜೊತೆಗೂಡಿ ಜೀವ ದ್ವನಿ ಎಂಬ NGO ಸ್ಥಾಪಿಸಿ ಅದರ ಮೂಲಕ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತಿದ್ದರು ಹಾಗೂ ಆ ಕಾಲದಲ್ಲಿ ಮಂಗಳೂರಿನ ಪುರ ಭವನದಲ್ಲಿ ದಾಖಲೆಯ ರಕ್ತ ದಾನ ಶಿಬಿರ ಆಯೋಜಿಸಿ ಯುವಕರಿಗೆ ಮಾದರಿಯಾಗಿದ್ದರು.
ಎಂ ಡಿ ಜಬ್ಬಾರ್ ಅವರು ತನ್ನ ರಾಜಕೀಯ ಅವಧಿಯಲ್ಲಿ ಬಡ, ಹಿಂದುಳಿದ ಹಾಗೂ ಮುಸ್ಲಿಂ ಸಮುದಾಯದ ದ್ವನಿಯಾಗಿ ಕಾರ್ಯನಿರ್ವರಿಸುತ್ತಿದರು. ಅವರ ತನ್ನ ಕ್ರಿಯಾತ್ಮಕ ನಾಯಕತ್ವ, ಸಾಮಾಜಿಕ ಕೆಲಸ ಹಾಗೂ ಉತ್ತಮ ಗುಣಮಟ್ಟದ ವ್ಯಕ್ತಿತ್ವದ ಮೂಲಕ ಅಪಾರ ಹಿತೈಷಿಗಳನ್ನು, ಸ್ನೇಹಿತ ಹಾಗೂ ಅಭಿಮಾನಿ ಬಳಗವನ್ನು ಗಳಿಸಿದ್ದರು.
ಹಾಗೆಯೆ ತನ್ನ ಅತೀ ಕಡಿಮೆ ರಾಜಕೀಯ ಅವಧಿಯಲ್ಲಿ ಕ್ಲೀನ್ ಇಮೇಜ್ ನೊಂದಿಗೆ ಅಪಾರ ಯಶಸ್ಸು ಗಳಿಸಿದ ಎಂ.ಡಿ. ಜಬ್ಬಾರ್ರವರು ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಂ ಸಮುದಾಯದ ಒಬ್ಬ ಉನ್ನತಮಟ್ಟದ ಪ್ರಮುಖ ರಾಜಕೀಯ ನಾಯಕನಾಗಿ ಬೆಳೆಯುತ್ತಿರುವಾಗ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ.
13th May 2003 ಶುಕ್ರವಾರದಂದು ಮಂಗಳೂರು ತಾಲೂಕು ಪಂಚಾಯತ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವಾಗ ತನ್ನ ಕಚೇರಿಯಿಂದ ಜುಮ್ಮಾ ನಮಾಜಿಗೆ ಮಸೀದಿಗೆ ಹೊರಡುವಾಗ ತನ್ನ ಹೆಂಡತಿ ಹಾಗೂ ಮಗಳ ಕಣ್ಣು ಮುಂದೆಯೇ ವಿರೋಧಿಗಳ ಕ್ರೌರ್ಯಕ್ಕೆ ಬಲಿಯಾಗುತ್ತಾರೆ.
ಇಂದಿಗೆ ಎಂ.ಡಿ. ಜಬ್ಬಾರ್ರವರು ನಮ್ಮನ್ನು ಆಗಲಿ ಇಪ್ಪತಒಂದು ವರ್ಷ ಕಳೆದರೂ ಅವರು ಜನಸಾಮಾನ್ಯರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಮಾಡಿದ ಸೇವೆ ಚಿರಸ್ಮರಣೀಯ ವಾಗಿದೆ.
ಇಂದು ಅವರು ಶಾಹೀದ್ ಆಗಿ 21 ವರುಷ ಕಳೆಯಿತು ಅವರನ್ನು ಈ ಸಂದರ್ಭದಲ್ಲಿ ಭಾವಪೂರ್ಣವಾಗಿ ನೆನೆಯುತ್ತ ಅವರಿಗೆ ಸರ್ವಶಕ್ತನಾದ ಅಲ್ಲಾಹು ಮಗ್ಫಿರತ್ ಮತ್ತು ಮರ್ಹಮತ್ ನೀಡಲಿ ಹಾಗೂ ಶಾಹೀದ್ ನ ದರ್ಜೆಯೊಂಗಿದೆ ಸ್ವರ್ಗದಲ್ಲಿ ಉನ್ನತ ಮಟ್ಟದ ಸ್ಥಾನ ನೀಡಲಿ.
ಅಮೀನ್ ಯಾ ರಬ್ಬಲ್ ಆಲಮೀನ್.
ಮರ್ಹೂಮ್ ಎಂ.ಡಿ ಜಬ್ಬಾರ್ (ದೊಂಪ) ಮಲ್ಲೂರು ಮಾಜಿ ಅಧ್ಯಕ್ಷರು ತಾಲೂಕು ಪಂಚಾಯತ್ ಮಂಗಳೂರು, ದ.ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.