ಉಡುಪಿ (www.vknews.in) : ಉಡುಪಿಯ ಕುಂಜಿಬೆಟ್ಟುವಿನಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾಪು ಮೂಲದ ಎರಡು ತಂಡಗಳ ಯುವಕರು ಉಡುಪಿ – ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳಲ್ಲಿ ಬಂದು ಜಗಳ ಮಾಡಿಕೊಂಡು ಕಾರಿನಲ್ಲಿಯೇ ಹೊಡೆದಾಟ ಮಾಡಿಕೊಂಡಿದ್ದಾರೆ.
ಮೇ 18ರಂದು ಉಡುಪಿ ಕುಂಜಿಬೆಟ್ಟುವಿನಲ್ಲಿ ನಡೆದಿರುವ ಈ ಘಟನೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಪು ಮೂಲದ ಎರಡು ಯುವಕರ ತಂಡದ ನಡುವೆ ಜಗಳ ನಡೆದಿದೆ. ಗರುಡ ಗ್ಯಾಂಗ್ ಮತ್ತು ಶರೀಫ್ ನಡುವೆ ಹೊಡೆದಾಟ ಸಂಭವಿಸಿದೆ. ನಂತರ ಕಾರುಗಳ ನಡುವೆ ಢಿಕ್ಕಿ ಹೊಡೆದುಕೊಂಡು ಹೊಡೆದಾಟ ನಡೆಸಿದ್ದಾರೆ.
ಈ ಗಲಾಟೆಯಲ್ಲಿ ಒಬ್ಬ ಯುವಕ ಗಂಭೀರ ಗಾಯಗೊಂಡಿದ್ದಾನೆ. ನಂತರ ಆಸ್ಪತ್ರೆಗೆ ಆ ಯುವಕನನ್ನು ದಾಖಲಿಸಿದಾಗ ಆತ ಮೃತಪಟ್ಟಿದ್ದಾನೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಆಶೀಕ್ ಮತ್ತು ರಾಕೀಬ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.