(www.vknews. in) ; ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ)ನ ಸಂಚಾಲಕರಾದ ಮೊಯ್ದಿನ್ ಕುಟ್ಟಿ, ನಿರ್ದೇಶಕರಾದ ಉಸ್ಮಾನ್ ನೆಕ್ಕಿಲು,ನವಾಜ್ ಪಳ್ಳತ್ತಾರು, ಇಸ್ಮಾಯಿಲ್ ಮಾಣಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ)ಯ ಅಧ್ಯಕ್ಷರು ಹಾಗೂ ನಿರ್ದೇಶಕರಾದ ಉಮ್ಮರ್ ಫಾರೂಕ್ ಹಾಗೂ ಪೂರ್ವಪ್ರಾಥಮಿಕ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯದರ್ಶಿ ಮೇಘ ಹಿರೇಬಂಡಾಡಿ, ಸಂಘಟನಾ ಕಾರ್ಯದರ್ಶಿಗಳಾದ ವಿದ್ಯಾ ನರಿಮೊಗರು ಹಾಗೂ ಹರ್ಷಿತಾ ಕನ್ಯಾನ ರವರ ನಿಯೋಗವು ಮಾನ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಶ್ರೀಮತಿ ಕಾವೇರಿಯವರನ್ನು ಭೇಟಿ ಯಾಗಿ ಶಾಲೆ ಪ್ರಾರಂಭಕ್ಕೆ ಮುನ್ನ ಶಾಲೆಯಲ್ಲಿ ಆಗಬೇಕಾದ ಅತ್ಯವಶ್ಯ ಕೆಲಸಗಳ ಬಗ್ಗೆ ಮಾನ್ಯ ಆಯುಕ್ತರಲ್ಲಿ ಚರ್ಚಿಸಿದರು
ಶಾಲೆ ಪ್ರಾರಂಭಕ್ಕೆ ಮುಂಚಿತವಾಗಿಯೇ ಎಲ್ಲಾ ಮಕ್ಕಳಿಗೆ ಪಠ್ಯ ಪುಸ್ತಕ ,ಸಮವಸ್ತ್ರ,ಶೂ ಸಾಕ್ಸ್ ಹಾಗೂ ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳು ದೊರಕುವ ಬಗ್ಗೆ, ಸಮವಸ್ತ್ರದ ಹೊಲಿಗೆ ಗೆ ಒಂದು ಜೋಡಿಗೆ 400 ರಿಂದ 600 ರೂಪಾಯಿಯಷ್ಟು ಹಣದ ಅವಶ್ಯಕತೆ ಇದ್ದು ಬಡ ಪೋಷಕರಿಗೆ ಅದನ್ನು ಹೊಂದಿಸಲು ಕಷ್ಟ ಸಾಧ್ಯ ಆಗಿರುವ ಕಾರಣ ಸರಕಾರವೇ ಹೊಲಿದ ಸಮವಸ್ತ್ರವನ್ನು ವಿತರಿಸುವುದು ಅಥವಾ ಅದಕ್ಕೆ ತಗಲುವ ವೆಚ್ಚವನ್ನು ಭರಿಸುವ ಬಗ್ಗೆ, ಎಸ್ಡಿಎಂಸಿ ಯವರು 2015-16 ರಿಂದ ಸರಕಾರಿ ಶಾಲೆಗಳಲ್ಲಿ ಆರ್ ಟಿ ಈ ಪ್ರಕಾರ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಿರುವ ಕಾರಣ ಮಕ್ಕಳ ದಾಖಲಾತಿಯು ಹೆಚ್ಚಾಗಿರುತ್ತದೆ. ಆದರೆ ಅಲ್ಲಿರುವ ಮಕ್ಕಳಿಗೆ ಶಿಕ್ಷಣ ಕೊಡುವ ಶಿಕ್ಷಕರ ವ್ಯವಸ್ಥೆಯಾಗಲಿ,ಅಕ್ಷರದಾಸೋಹ,ಸಮವಸ್ತ್ರ, ಪಠ್ಯಪುಸ್ತಕದ ವ್ಯವಸ್ಥೆಯಾಗಲಿ ಮಾಡದಿರುವ ಕಾರಣ ಎಸ್ಡಿಎಂಸಿ ಗಳಿಗೆ ಹಾಗೂ ಪೋಷಕರಿಗೆ ಹೊರೆ ಆಗಿದ್ದು ಸರ್ಕಾರದಿಂದಲೇ ಕೆ ಪಿ ಎಸ್ ಮಾದರಿಯಲ್ಲಿ ಅಥವಾ ಅತಿಥಿ ಶಿಕ್ಷಕರ ಮಾದರಿಯಲ್ಲಿ ಶಿಕ್ಷಕರ ವ್ಯವಸ್ಥೆಯನ್ನ ಮಾಡಿ ಕೊಡಲು ವಿನಂತಿಸಲಾಯಿತು.
ಅದಲ್ಲದೆ ಇಷ್ಟು ವರ್ಷದಿಂದ ಎಸ್ಡಿಎಂಸಿಗಳ ಸಹಕಾರದಿಂದ ಅಕ್ಷರದಾಸೋಹ ದಿಂದಲೇ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದು ಕೆಲವು ಇಲಾಖೆಯ ಅಧಿಕಾರಿಗಳು ಅದರ ಬಗ್ಗೆ ಅಪಸ್ವರ ಎತ್ತುತ್ತಿರುವ ಬಗ್ಗೆ ಆಯುಕ್ತರ ಗಮನಕ್ಕೆ ತಂದಾಗ ಸರಕಾರದಿಂದ ವ್ಯವಸ್ಥೆ ಆಗುವವರೆಗೆ ಇಷ್ಟು ವರ್ಷದಿಂದ ನಡೆಯುತ್ತಿರುವ ರೀತಿಯಲ್ಲಿ ನಡೆಯಲಿ ಎನ್ನುವ ಭರವಸೆಯನ್ನು ನೀಡಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.