(www.vknews. in) ; ದೇಶ ವ್ಯಾಪಿ ಬಿಂದು ಅನ್ನುವಂತಹ ಸಂಸ್ಥೆ ಬಹಳ ವೇಗವಾಗಿ ಬೆಳೆದಿದೆ ಈ ಕಂಪನಿಯ ಪರವಾಗಿ ಮಾತನಾಡುವ ಹಲವಾರು ಮಾಧ್ಯಮಗಳು ಇವೆ ದೊಡ್ಡ ದೊಡ್ಡ ನಾಯಕರುಗಳಿದ್ದಾರೆ. ಆದರೆ ಇಲ್ಲಿ ವಾಸ್ತವ ಸಂಗತಿ ಬೇರೆನೆ ಇದೆ ತಾನು ಬೆಳೆದಂತಹ ಪುರುಷರ ಕಟ್ಟೆ ಅನ್ನುವಂತಹ ಪ್ರದೇಶದಲ್ಲಿ ಪ್ರದೇಶದಲ್ಲಿ ತನ್ನ ಉದ್ಯಮದ ಉದ್ದೇಶದಿಂದ ತನ್ನ ಖಾಸಗಿ ಸ್ಥಳದಲ್ಲಿ ಸರಕಾರದ ಅನುಮತಿ ಇದ್ದು ಇಲ್ಲದೆಯೂ ಹಲವಾರು ಕೊಳವೆ ಬಾವಿಗಳನ್ನು ಕೊರೆದು ಅಂತರ್ಜಲವನ್ನ ಉದ್ಯಮ ಅನ್ನುವಂತಹ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ
ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಜಲಕ್ಷಾಮ ಉಂಟಾಗುತ್ತಿದೆ ಹೀಗಿರುವಾಗ ಇಂತಹದನ್ನ ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ಮಾಡಿಸುವಂತಹ ಸಂದರ್ಭದಲ್ಲಿ ಅದಕ್ಕೆ ಧಾರ್ಮಿಕ ಲೇಪನವನ್ನು ಅಂಟಿಸಿ ಪ್ರತಿಭಟನಾಗಾರರನ್ನು ಧಮನಿಸುವ ಪ್ರಯತ್ನವು ಮಾಡುತ್ತಿದ್ದಾರೆ.🏳️ ಇಲ್ಲಿ ಜನರು ಗಮನಿಸಬೇಕಾದಂತಹ ವಿಷಯ ಏನಂದರೆ ಸಾರ್ವಜನಿಕರಿಗೆ ತೊಂದರೆ ಆಗುವಂತಹ ಯಾವುದೇ ಕೆಲಸಕ್ಕೆ ಸರಕಾರ ಅನುಮತಿ ನೀಡುವುದಿಲ್ಲ, ಹಾಗಿರುವಾಗ ಸರಕಾರದ ಅನುಮತಿಯನ್ನ ತಿರುಚಿಕೊಂಡು (ಅಂದರೆ ಬೋರ್ವೆಲ್ ಅನ್ನು ರಿಪೇರಿ ಮಾಡುವ ಅನುಮತಿಯನ್ನು) ಮುಂದಿಟ್ಟುಕೊಂಡು ಆ ಒಂದು ಪತ್ರದ ಮೂಲಕ ಹೊಸ ಹೊಸ ಬೋರ್ವೆಲ್ಗಳನ್ನು ಅಕ್ರಮವಾಗಿ ಕೊರೆಯುತ್ತಿದ್ದಾರೆ ,ಇದನ್ನ ಗಮನಿಸಿದಂತಹ ಸಾರ್ವಜನಿಕರು ಅಲ್ಲಿ ಪ್ರತಿಭಟನೆಯನ್ನು ಮಾಡುತ್ತಾರೆ ಈ ಪ್ರತಿಭಟನೆಗೆ ಬಂದಂತಹ ಜನರಲ್ಲಿ ನಾಲ್ಕೈದು ಮುಸಲ್ಮಾನರನ್ನು ಕಂಡ ಬಿಂದು ಭಕ್ತರು ಈ ಪ್ರತಿಭಟನೆಗೆ ಧಾರ್ಮಿಕ ಲೇಪನವನ್ನು ಅಂಟಿಸುತ್ತಾರೆ. ಅದಲ್ಲದೆ ಈ ಬಿಂದು ಮಾಲಕನಿಗೆ ಸ್ಥಳೀಯ ಕೆಲವು ರಾಜಕೀಯ ನೇತಾರರುಗಳ ಹಾಗೂ ಅಧಿಕಾರಿಗಳ ಆಂತರಿಕ ಬೆಂಬಲವೂ ಇದೆ .ಹಣ ಹಾಗೂ ದರ್ಪದ ಮುಂದೆ ಸಾರ್ವಜನಿಕ ಹಿತಾಸಕ್ತಿ,ಕಾನೂನು, ಗೌರವ ಎಲ್ಲವೂ ಕಣ್ಣು ಮುಚ್ಚಿ ಕುಳಿತಿದೆ. ಈ ಬಿಂದು ಶಿವಶಂಕರ ವಿರುದ್ಧ ಮಾತನಾಡಿಸುವಂತಹ ಈ ಅಕ್ರಮ ವಹಿವಾಟಿನ ವಿರುದ್ಧ ಪ್ರತಿಭಟನೆಗಳು ಇದೇ ಮೊದಲ ಏನಲ್ಲ ಪ್ರತಿಸಲ ಪ್ರತಿಭಟನೆ ನಡೆದಂತಹ ಸಂದರ್ಭದಲ್ಲಿ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ತನ್ನ ಪ್ರಭಾವವನ್ನು ಬಳಸಿಕೊಂಡು ಪ್ರತಿಯೊಂದು ಪ್ರತಿಭಟನೆಯನ್ನು ಕೂಡ ಧಮನಿಸಿದ್ದಾರೆ.
ದೇಶದಲ್ಲಿ ಯುವಕರಿಗೆ ರೋಲ್ ಮಾಡೆಲ್ ಆಗಿ ಈ ವ್ಯಕ್ತಿಯನ್ನು ತೋರಿಸುತ್ತಿದ್ದಾರೆ ಆದರೆ ತನ್ನ ಸ್ವಂತ ಊರಿಗೆ ಊರಿನ ಸಾಮಾನ್ಯ ಪ್ರಜೆಗಳಿಗೆ ಮಾರಕವಾದ ಅಂತಹ ಇಂತಹ ವ್ಯಕ್ತಿಗಳು ಯಾವ ರೀತಿಯಲ್ಲಿ ರೋಲ್ ಮಾಡಲಿ ಅಂತ ತಿಳಿಯುವುದಿಲ್ಲ. ಸಾರ್ವಜನಿಕರು ಇನ್ನಾದರೂ ಅರಿತು ತಮ್ಮ ಕೋಮು ವೈ ಮನಸನ್ನ ಬದಿಗಿಟ್ಟು ತಮ್ಮ ಏಳಿಗೆಗೋಸ್ಕರ ತಮ್ಮ ಊರಿನ ಅಂತರ್ಜಲ ಕ್ಕೋಸ್ಕರ ಒಗ್ಗ್ಗಟ್ಟಿ ನಿಂದ ಪ್ರತಿಭಟನೆ ಮಾಡದಿದ್ದಲ್ಲಿ ಈತ ಮಾಡುವ ಅಕ್ರಮ ವ್ಯವಹಾರವನ್ನು ವಿರೋಧಿಸದಿದ್ದಲ್ಲಿ ಈ ವ್ಯಕ್ತಿಯ ಜಲದಾಹಕ್ಕೆ ಸಾರ್ವಜನಿಕರು ಕಣ್ಣೀರಿಡಬೇಕಾದಂತಹ ಪರಿಸ್ಥಿತಿ ತುಂಬಾ ದೂರ ಇಲ್ಲ.
ತಮ್ಮ ತಮ್ಮ ಒಳಗಿರುವಂತಹ ಎಲ್ಲಾ ವೈಮನಸ್ಸನ್ನ ಬದಿಗಿಟ್ಟು ತಾವು ಬದುಕುತ್ತಿರುವಂತಹ ಭೂಮಿಯಲ್ಲಿ ಇರುವಂತಹ ಅಂತರ್ಜಾಲವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ತಮ್ಮ ಮುಂದಿನ ಪೀಳಿಗೆಯ ಬದುಕನ್ನು ರಕ್ಷಿಸುವ ಜವಾಬ್ದಾರಿಯಿಂದ ಇಂತಹ ಅಕ್ರಮ ಕಾರ್ಪೊರೇಟ್ ಕಂಪನಿಗಳ ವಿರುದ್ಧ ಸರಿಯಾದ ರೀತಿಯಲ್ಲಿ ಪ್ರತಿಭಟನೆ ಮಾಡಿ ಸರಕಾರಕ್ಕೆ ಈ ವಿಷಯವನ್ನು ವ್ಯ್ ಮನದಟ್ಟು ಮಾಡಿ ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕಾದಂತಹ ಪರಿಸ್ಥಿತಿ ಬಂದು ಒದಗಿದೆ. ನರಿಮೊಗರು ರೈತರು ಮತ್ತು ನಾಗರೀಕರು ಪುರುಷರ ಕಟ್ಟೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.