(www.vknews. in) ; ಜೈ ಭಾರತ್ ಕಕ್ಯಪದವು ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಹಯೋಗದೊಂದಿಗೆ “ಮರ್ಹೂಂ ಹನೀಫ್ ಅಂತರ”ಹಾಗೂ ಕ್ರಿಕೆಟ್ ಪಟು ದಿ. ಮನೋಹರ್ ಹನ್ನಡ್ಕ ಇವರ ಸ್ಮರಣಾರ್ಥ ಬ್ರಹತ್ ರಕ್ತದಾನ ಶಿಬಿರ
ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗ್ಯೂ ಜ್ವರದ ಸಂಖ್ಯೆಯು ಹೆಚ್ಚಾಗುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಈ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಹೆಚ್ಚಾಗಿಯೆ ಇರುತ್ತದೆ. ಆದುದರಿಂದ ಸಮಾಜದ ಹಿತದೃಷ್ಟಿಯಿಂದ ಇದೇ ಬರುವ ಜೂನ್,23 ಆದಿತ್ಯವಾರ ಒಂದು ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಆಯೋಜನೆಯನ್ನು ನಾವು ಮಾಡಿಕೊಂಡಿದ್ದೇವೆ.
“ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ” ಎಂಬ ಮಾತನ್ನು ನೆನಪಿಸುತ್ತಾ ನಮ್ಮ ಸುತ್ತಮುತ್ತಲಿನ ಎಲ್ಲಾ ಗೆಳೆಯರಲ್ಲಿ ತಾವು ಬಂದು ರಕ್ತದಾನ ಮಾಡುವ ಮೂಲಕ ಯಾರಾದರೊಬ್ಬ ಬಡರೋಗಿಯ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿ ಜೀವರಕ್ಷಕರಾಗೋಣ ಎಂದು ಕೇಳಿಕೊಳ್ಳುತ್ತಿದ್ದೇವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.