(www.vknews. in) ; ಸ್ವತಂತ್ರ ಭಾರತದ ಇತಿಹಾಸವನ್ನು ಅವಲೋಕನ ಮಾಡುವಾಗ ಮೂರು ಘಟ್ಟಗಳನ್ನು ಕಾಣುತ್ತೇವೆ. ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯನಂತರ ಮತ್ತು ಆಧುನಿಕ ಭಾರತ. ಸ್ವಾತಂತ್ರ್ಯಪೂರ್ವದ ರಾಜಕಾರಣದ ಉದ್ದೇಶವೇ ಬ್ರಿಟೀಷರಿಂದ ಬಿಡುಗಡೆ ಪಡೆದು ಭಾರತ ಸ್ವತಂತ್ರ ದೇಶವನ್ನಾಗಿ ಮಾಡುವುದು..ನಂತರ ಹರಿದು ಹಂಚಿಹೋಗಿದ್ದ ಭಾರತವನ್ನು ಒಂದು ಗೂಡಿಸುವುದು ಮತ್ತು ಜರ್ಜರಿತವಾಗಿದ್ದ ದೇಶವನ್ನು ಕಟ್ಟುವ ಕೆಲಸ ಮಾಡುವುದಾಗಿತ್ತು. ದೇಶದಲ್ಲಿ ಕೈಗಾರಿಕ ಕ್ರಾಂತಿ, ಶಿಕ್ಷಣ, ಆಹಾರ ಸ್ವಾವಲಂಬನೆ ಬೆಳೆಸುವುದಾಗಿತ್ತು .ಈ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಬೇಕಾದ ಅತ್ಯುತ್ತಮ ಸಂವಿಧಾನವನ್ನು ಕೂಡ ರಚನೆ ಮಾಡುವುದು.. ಆದುನಿಕ ಭಾರತದಲ್ಲಿ ಸಂವಿಧಾನದ ಆಶಯಗಳನ್ನು ಜಾರಿಗೆ ತರುವ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಇರುವ ದೇಶವಾಗಿ ಭಾರತಇಂದು ಇದೆಯಾ?
ಪರ್ಯಾಯವೆಂಬುದರ ಅರ್ಥ ಇಂದಿಗೆ ಸಂವಿಧಾನದಲ್ಲಿರುವಂತೆ ಸಮಾಜವಾದಿ ಸ್ವಾಯತ್ತ ರಾಷ್ಟ್ರವನ್ನಾಗಿ ಈ ರಾಷ್ಟ್ರವನ್ನು ಬೆಳೆಸುವುದೇ ಹೊರತು , ಹಿಂದೂ ರಾಷ್ಟ್ರ ಎಂಬ ಭ್ರಮೆಯನ್ನು ಜನರಲ್ಲಿ ಹಾಕಿ ಮನುವಾದಿಗಳ ರಾಷ್ಟ್ರ ನಿರ್ಮಾಣವಲ್ಲ.
ಸಂವಿಧಾನದ ಆಶಯಗಳನ್ನು ಜಾರಿಗೆ ತರುವ ಭಾರತ ದೇಶದ ಪ್ರತಿಯಬ್ಬ ಪ್ರಜೆಗೂ ಸಮಾನ ಹಕ್ಕು ಸಮಾನ ನ್ಯಾಯ ಇರುವ ಭಾರತದ ನಿರ್ಮಾಣ ನಮ್ಮ ಗುರಿಯಾಗಬೇಕು ಅಭಿವೃದ್ಧಿವೆಂಬುವುದು ಕೇವಲ ಕೆಲವು ಬಂಡವಾಳಗಾರರ ಆಸ್ತಿಯ ದುಪ್ಪಟ್ಟು, ನೂರುಪಟ್ಟಾಗುವುದಲ್ಲ. ಬಂಡವಾಳದ ಬೆಳವಣಿಗೆ ದೇಶದ ಜನರ ಅಭಿವೃದ್ಧಿ ಎಂಬ ತಪ್ಪು ಕಲ್ಪನೆ ಹೋಗಲಾಡಿಸಿ ಪ್ರಾ ಕೃತಿಕವಾಗಿ ಹಾಗು ನೈಸರ್ಗಿಕವಾಗಿ ಸಿಗುವ ಸಂಪನ್ಮೂಲಗಳನ್ನು ಉಪಯೋಗಿಸಿ ಇಲ್ಲಿರುವ ಮಾನವ ಸಂಪನ್ಮೂಲಗಳನ್ನು ಬಳಸಿ ಈ ದೇಶವನ್ನು ವಿಶ್ವದಲ್ಲಿ ಬಲಿಷ್ಠ ರಾಷ್ಟ್ರ ಮಾಡುವ ಗುರಿಗಾಗಿ ಪರ್ಯಾಯ ರಾಜಕಾರಣದ ಅಗತ್ಯವಿದೆ.
ಯಾವುದೇ ರಾಷ್ಟ್ರ ಸಮದಾಯವೊಂದನ್ನು ಗುರಿ ಮಾಡಿ ದ್ವೇಷ ಹುಟ್ಟು ಹಾಕಿ ಆ ದೇಶದಲ್ಲಿರುವ ಅಲ್ಪ ಸಂಖ್ಯಾತ ವರ್ಗವನ್ನು ಗುರಿ ಮಾಡುತ್ತದೋ ಅದು ಒಟ್ಟು ಸಮಾಜದ ಗಂಡಾಂತರಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಅರಿವು ನಮಗಿರಬೇಕು. ಒಂದು ಧರ್ಮದ ಧಾರ್ಮಿಕ ನಂಬಿಕೆಗಳನ್ನು ಬಲಪಡಿಸಲು ಇನ್ನೊಂದು ಧರ್ಮದ ನಂಬಿಕೆಯ ಮೇಲೆ ದಾಳಿ ನಡೆಸುವ ರಾಜಕಾರಣ ಭವಿಷ್ಯದ ಭಾರತಕ್ಕೆ ಮಾರಕ ಎಂಬ ಅರಿವು ನಮಗಿರಲಿ.
ಹಿಂದು ನಾವೆಲ್ಲ ಒಂದು ಎಂಬ ಮಾನಸಿಕತೆಯನ್ನು ಮುಗ್ದ ಹಿಂದುಗಳ ಮನದಲ್ಲಿ ತುಂಬಿ ಮನುವಾದಿ ರಾಷ್ಟ್ರ ಕಟ್ಟಲು ತಯಾರಿನಡೆಯುತ್ತಿರುವದನ್ನು ನಾವಿಂದು ಕಾಣುತ್ತಿದ್ದೇವೆ.ಯಾವುದೇ ರಾಜಕೀಯ ಪಕ್ಷ ಧಾರ್ಮಿಕ ಅಥವಾ ಇನ್ನಾವುದೇ ಮೂಲಭೂತವಾದಿ ಉದ್ದೇಶ ಇಟ್ಟು ರಾಜಕೀಯ ಮಾಡಿ ಮುಗ್ದ ಪ್ರಜೆಗಳ ಬಳಿ ಸುಳ್ಳಿನ ಕಂತೆಯನ್ನು ಸತ್ಯವೆಂದು ಬಿಂಬಿಸಿ ಅಧಿಕಾರಕ್ಕೆ ಬಂದರೆ ಕ್ಷಣದ ಅಗತ್ಯಗಳನ್ನು ಪೂರೈಸಬಹುದಸ್ಟೇ…. ದೂರದೃಷ್ಟಿಯನ್ನಿಟ್ಟು ಭವಿಷ್ಯದಲ್ಲಿ ಬರುವ , ತಲೆಮಾರುಗಳ ನೆಮ್ಮದಿಯ ನಾಳೆಗಾಗಿ ಬಲಿಷ್ಠ ದೇಶ ಕಟ್ಟುವುದೆಂದರೆ ಕೋಮುವಾದ, ಭ್ರಷ್ಟಾಚಾರ, ಜಾತಿರಾಜಕಾರಣ, ಮತಗಳ, ಖರೀದಿ, ಬೆದರಿಕ ಇಂತಹ ನೀಚ ರಾಜಕಾರಣದಿಂದ ದೂರ ಸರಿದು ಪ್ರಜಾಸತ್ತಾತ್ಮಕ ಸಮಾಜವಾದಿ ಆಶಯಗಳ ದೇಶ ಕಟ್ಟುವುದು ನಮ್ಮ ಗುರಿಯಾಗಬೇಕು.
ಪರ್ಯಾಯ ರಾಜಕಾರಣದ ಬಹುಮುಖ್ಯ ಅಜೆಂಡಾ ನಮ್ಮ ಆರ್ಥಿಕತೆ ಕೈಗಾರಿಕೆಗಳ ಮೂಲಕ ಜನರಿಗೆ ಉದ್ಯೋಗ ಕಲ್ಪಿಸಬೇಕು.ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಅತಿ ಹೆಚ್ಚು ಉದ್ಯೋಗ ಕೊಟ್ಟಿರುವ ಕ್ಷೇತ್ರ. ಅದು ಅವನತಿಯ ಕಡೆಗೆ ಹೆಜ್ಚೆ ಹಾಕುತ್ತಿದೆ. ಅಧ್ಯಯನವೊಂದರ ಪ್ರಕಾರ ನಿಯಮಿತ ಸಂಬಳದ ವಲಯ ಎರಡು ಕೋಟಿ ಉದ್ಯೋಗಗಳನ್ನು ಕಳೆದುಕೊಂಡಿದೆ. ನಿರುದ್ಯೋಗ ಹೆಚ್ಚಾಗಿದೆ.ಎಲ್ಲರಿಗೆ ಉದ್ಯೋಗ ನೀಡಬೇಕಾದರೆ ಪರ್ಯಾಯ ಆರ್ಥಿಕ ನೀತಿಯ ಕಡೆಗೆ ಗಮನ ಹರಿಸಬೇಕು. ಕೃಷಿ ಕ್ಷೇತ್ರದಲ್ಲಿ ತೊಡಗುವವರ ಸಂಖ್ಯೆ ಕಡಿಮೆಯಾಗುತ್ತಿದೆ . ಆ ವಲಯಕ್ಕೆ ಸಾಕಷ್ಟು ಅನುದಾನ ಬಿಡುಗಡೆಗೆ ಆಧ್ಯತೆ ನೀಡಬೇಕು. ಸಾಮಾನ್ಯ ರೈತ ಸುಖವಾಗಿದ್ದರೆ ನಮ್ಮ ಆರ್ಥಿಕ ಬೆಳವಣಿಗೆ ದರ ಕಡಿಮೆ ಇದ್ದರೂ ನೆಮ್ಮದಿಯ ಸಮಾಜ ನಮ್ಮದಾಗುತ್ತದೆ. ನಮ್ಮ ರೈತ, ಕಾರ್ಮಿಕ ನಿರುದ್ಯೋಗಿಯಾದರೆ ಆರ್ಥಿಕ ಬೆಳವಣಿಗೆ ಕುಂಟಿತವಾಗಿ ಅದರ ಪರಿಣಾಮ ಸಾಮಾನ್ಯ ಪ್ರಜೆಯ ಮೇಲು ಬೀಳುತ್ತದೆ. ಉದ್ಯೋಗವನ್ನೇ ನಂಬಿ ಜೀವನ ಕಟ್ಟಿಕೊಳ್ಳುತ್ತಿರುವ ಕೋಟಿ ಕೋಟಿ ಕುಟುಂಬಗಳಿಗೆ ಅವಕಾಶವಿರುವ ಆರ್ಥಿಕತೆ ನಿರ್ಮಿಸಬೇಕಾಗಿದೆ. ಅದು ಬಂಡವಾಳದ ಬೆಳವಣಿಗೆ ಮಾಡುವದಲ್ಲ. ಬಂಡವಾಳದ ನಿರಾಕರಣೆಯೂ ಅಲ್ಲ. ಬಡತನ, ಉದ್ಯೋಗ ಕೇಂದ್ರಿತ ಆರ್ಥಿಕತೆ ಆ ಕಡೆಗೆ ಗಮನ ಕೊಟ್ಟು ನಿರ್ಮಿಸುವ ಆರ್ಥಿಕ ಚಿಂತನೆಗಳೇ ಪರ್ಯಾಯ ರಾಜಕಾರಣದ ಮೂಲಮಂತ್ರವಾಗಬೇಕು.
ಗುಂಪು ಹಲ್ಲೆಗಳು, ಅಸುರಕ್ಷಿತ ವಾತಾವರಣ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಅವರಲ್ಲಿ ದಿನದಂದ ದಿನಕ್ಕೆ ಹೆಚ್ಚಾಗುತ್ತಿರುವ ಅಪನಂಬಿಕೆಗಳು ಬೆಳೆಯುವ ದೇಶದ ಲಕ್ಷಣಗಳಲ್ಲ. ಇಂದು ದಲಿತ ಸಮೂದಾಯದ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹಲ್ಲೆ ಹೆಚ್ಚುತ್ತಿರುವುದಕ್ಕೆ ಸರಕಾರದ ಧೋರಣೆಯೇ ಕಾರಣ. ಅಸಹಾಯಕರಿಗೆ ಗರಿಷ್ಠ ರಕ್ಷಣೆ ಮತ್ತು ನೆಲದ ಕಾನೂನು ಪಾಲನೆಯೇ ಪರ್ಯಾಯ ರಾಜಕಾರಣದ ಮೆಟ್ಟಿಲುಗಳಾ ಗಬೇಕು.ಜನರನ್ನು ಕಾಡುವ ಹಾಗು ನೆಮ್ಮದಿಯನ್ನು ಹಾಳು ಮಾಡುವ ದೊಡ್ಡ ಸಮಸ್ಯೆ ಹಸಿವು ಮತ್ತು ಭಯ.ಪರ್ಯಾಯ ರಾಜಕಾರಣ ಯಶಸ್ವಿಯಾಗಬೇಕಾದ್ರೆ ಈ ದೇಶದ ಪ್ರತಿಯೊಬ್ಬ ಪ್ರಜೆ ಹಸಿವಿನಿಂದ ಹಾಗೂ ಭಯದಿಂದ ಮುಕ್ತಿ ಗೊಂಡ ಜೀವನ ನೆಡೆಸುವ ಒಂದು ವಾತಾವರಣವನ್ನು ಭಾರತದಲ್ಲಿ ನಿರ್ಮಾಣ ಮಾಡಬೇಕಾಗಿದೆ ಆ ಮೂಲಕ ಈ ದೇಶದ ಪ್ರತಿ ಗ್ರಾಮದ ಪ ಜನಸಾಮಾನ್ಯರಲ್ಲಿ ಪರ್ಯಾಯ ರಾಜಕಾರಣದ ಅಗತ್ಯತೆಯ ಅರಿವು ಮೂಡಿಸಬೇಕಾಗಿದೆ.
✍️ ಅಕ್ಬರ್ ಅಲಿ ಪೊನ್ನೋಡಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.