(www.vknews. in) ; ಕಾರ್ಕಳ ಉಪ ವಿಭಾಗದಲ್ಲಿ ಎರಡು ವರ್ಷ DY.SP ಯಾಗಿ ಸೇವೆ ಸಲ್ಲಿಸಿ ಜನತೆಯಿಂದಲೂ, ಸರಕಾರದಿಂದಲೂ ವ್ಯಾಪಕ ಪ್ರಶಂಸೆ ಗಳಿಸಿದ DY.SP ಶ್ರೀ ವಿಜಯ ಪ್ರಸಾದ್ ರವರು ಇದೀಗ ಕಳೆದ ಕೆಲ ಸಮಯ ಗಳಿಂದ ಸರಕಾರವು ಬಂಟ್ವಾಳ ಉಪ ವಿಭಾಗದ DY.SP ಯನ್ನಾಗಿ ನೇಮಿಸಿದೆ. ಆಶಾಂತಿ- ಅಶಿಸ್ತಿನ ಅಗರವಾಗಿದ್ದ ಬಂಟ್ವಾಳ ಉಪ ವಿಭಾಗವನ್ನು ತಹಬದಿಗೆ ತಂದು ಬಂಟ್ವಾಳ ದಾದ್ಯಂತ ಶಾಂತಿ- ಸುವ್ಯವಸ್ಥೆ ನೆಲೆ ಗೊಳಿಸಿದ ದಕ್ಷ DY.SP ಶ್ರೀ ವಿಜಯ ಪ್ರಸಾದ್ ತನ್ನ ಪ್ರಾಮಾಣಿಕ ಸೇವೆಗಾಗಿ ಮುಖ್ಯ ಮಂತ್ರಿಗಳ ಪದಕವನ್ನು ಪಡೆದಿದ್ದಾರೆ. ಜನತೆಯ ಅಪತ್ ಬಾಂದವರಾಗಿ, ನೊಂದವರ ಸಂಕಷ್ಟಕ್ಕೀಡಾದವರ ಸಹಾಯಕ್ಕೆ ಧಾವಿಸುವ ಧೀಮಂತಿಕೆಯ ದಿಟ್ಟ ಪೋಲಿಸ್ ಅಧಿಕಾರಿಯಾಗಿದ್ದಾರೆ.
ಯಾವುದೇ ಹೊತ್ತಿನಲ್ಲಿ ಜನ ಸಾಮಾನ್ಯರು ನೇರವಾಗಿ ಸಂಪಕಿ೯ಸಿ ತಮ್ಮ ಅಹವಾಲು ಗಳನ್ನು ತೋಡಿಕೊಂಡರೆ ಜನರ ಕಷ್ಟ ಕಾರ್ಪಣ್ಯಗಳೊಂದಿಗೆ ಸ್ಪಂದಿಸುವ ವಿಶಾಲ ಹೃದಯಿಯಾಗಿರುವ DY.SP ಶ್ರೀ ವಿಜಯ ಪ್ರಸಾದ್ ಪೋಲಿಸ್ ಇಲಾಖೆಗೊಂದು ವರದಾನವಾಗಿದ್ದಾರೆ. ಮಂಗಳೂರು ಲೋಕಾಯುಕ್ತದಲ್ಲಿ ಇನ್ಸ್ಪೆಕ್ಟರ ರಾಗಿಯೂ, DY.SP ಯಾಗಿಯೂ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಅಕ್ರಮ ಸಂಪತ್ತು ಗಳಿಸಿ ಭ್ರಷ್ಟಾಚಾರದ ಕಾಯಿಲೆಗೆ ಒಳಗಾಗಿದ್ದ ಹಲವು ಭ್ರಷ್ಟ ಅಧಿಕಾರಿಗಳನ್ನು ಬಂಧಿಸಿ ಕೋಟ್ಯಾಂತರ ರೂಪಾಯಿ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಿ ದ DY.SP ಶ್ರೀ ವಿಜಯ ಪ್ರಸಾದ್ ಇಲಾಖೆಯಿಂದಲೂ ಸರಕಾರದಿಂದಲೂ ಶಹಬಾಸ್ ಗಿರಿ ಗಿಟ್ಟಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ರಾಜ್ಯದ ವಿವಿದೆಡೆಗಳಲ್ಲಿ ಸೇವೆ ಸಲ್ಲಿಸಿ ಅತ್ಯಂತ ಜನಪ್ರಿಯ ದಕ್ಷ – ಶಿಸ್ತು ಬದ್ಧ, ಪ್ರಾಮಾಣಿಕತೆ ಅಧಿಕಾರಿ ಎಂಬ ಕೀರ್ತಿಗೆ ಪಾತ್ರ ವಾಗಿದ್ದಾರೆ. ವಿವಿದೆಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕೊಲೆ – ದರೋಡೆ – ಲೂಟಿ, ವಂಚನೆ ಮುಂತಾದ ನೂರಾರು ಪ್ರಕರಣಗಳನ್ನು ಪತ್ತೆ ಹಚ್ಚಿ ಅಪರಾಧಿಗಳನ್ನು ಕಾನೂನಿನ ಕಂಬಿಯೊಳಗೆ ತುರುಕಿಸುವಂತೆ ಮಾಡಿ ಮುಖ್ಯಮಂತ್ರಿಗಳ ಪದಕವನ್ನು ಪಡೆದ ಶ್ರೀ ವಿಜಯ ಪ್ರಸಾದ್ ಅಪ್ರತಿಮ ಸಾಹಸಿಗರು.
ತನ್ನ ದಕ್ಷತೆ – ಪ್ರಾಮಾಣಿಕತೆ ಹಾಗೂ ಅಪ್ರತಿಮ ಸೇವಾ ವೈಖರಿಯಿಂದ ರಾಜ್ಯದ ಶ್ರೇಷ್ಠ DY.SP ಯಾಗಿ ಮೆರೆದು ಇದೀಗ ಬಂಟ್ವಾಳ ಉಪ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಜನತೆಯ ಸೌಭಾಗ್ಯವೆನ್ನಬೇಕು.
DY.SP ವಿಜಯ ಪ್ರಸಾದ್ ರವರು ಪೋಲಿಸ್ ಇಲಾಖೆಯ ಇನ್ನಷ್ಟು, ಉನ್ನತ ಹುದ್ದೆಗಳನ್ನಲಂಕರಿಸಿ ವಿಜೃಂಭಿಸಲಿ ಎಂದು ನಾವು ಹಾರೈಸುತ್ತೇವೆ.
ಶೇಖ್ – ಪುತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.