ಬಂಟ್ವಾಳ (www.vknews.in) ; ಬಂಟ್ವಾಳ ಪ್ರಾಥಮಿಕ ಭೂ ಅಭಿವೃದ್ಧಿ (ಪಿಎಲ್ಡಿ) ಬ್ಯಾಂಕ್ ಕಳೆದ ಹಲವು ವರ್ಷಗಳ ಹಿಂದೆ ಇದ್ದ 1.5 ಕೋಟಿ ರೂ. ನಷ್ಟವನ್ನು ಸರಿದೂಗಿಸಿಕೊಂಡು 2023 – 24 ನೇ ಸಾಲಿನಲ್ಲಿ 1.05 ಕೋಟಿ ರೂ. ಲಾಭ ಗಳಿಸಿದ್ದು, ಬ್ಯಾಂಕಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 11 ಶೇಕಡಾ ಡಿವಿಡೆಂಡ್ ಕೂಡ ನೀಡಲಾಗುತ್ತದೆ ಎಂದು ಬ್ಯಾಂಕಿನ ಅಧ್ಯಕ್ಷ ಅರುಣ್ ರೋಶನ್ ಡಿಸೋಜ ಹೇಳಿದರು.
ಬ್ಯಾಂಕ್ ನ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ಯಾಂಕಿನಲ್ಲಿ ಸಮರ್ಪಕ ಸಾಲ ಮರುಪಾವತಿಯಾಗದ 40 ಕ್ಕೂ ಅಧಿಕ ಬಲಾಢ್ಯ ಸುಸ್ಥಿದಾರರಿದ್ದರು. ಅವರ ವಿರುದ್ಧ ನಾವು ಕಾನೂನು ಹೋರಾಟ ಮಾಡಿ ಪ್ರಸ್ತುತ ಒಂದಷ್ಟು ವಸೂಲಾತಿ ಕಾರ್ಯ ನಡೆದಿದೆ. ಹೀಗಾಗಿ ಈ ಬಾರಿ ದಾಖಲೆಯ 94 ಶೇಕಡಾ ವಸೂಲಿ ಪ್ರಕ್ರಿಯೆ ನಡೆದಿದೆ. ವಿವಿಧ ಯೋಜನೆಗಳಲ್ಲಿ 1192.52 ಲಕ್ಷ ರೂ. ಸಾಲ ವಿತರಿಸಿದ್ದೇವೆ. ಸಾಲ ವಸೂಲಿ ತಗಾದೆ 509.99 ಲಕ್ಷ ರೂಪಾಯಿಯಲ್ಲಿ 479.29 ಲಕ್ಷ ರೂಪಾಯಿ ವಸೂಲಾತಿ ಮಾಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಚಂದ್ರಶೇಖರ ಬಂಗೇರ, ನಿರ್ದೇಶಕರಾದ ಲಿಂಗಪ್ಪ ಪೂಜಾರಿ, ಲೋಲಾಕ್ಷಿ, ವಿಜಯಾನಂದ, ಲತಾ, ಸುಂದರ ಪೂಜಾರಿ, ಬ್ಯಾಂಕಿನ ವ್ಯವಸ್ಥಾಪಕ ಪದ್ಮನಾಭ ಜಿ. ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.