ಬೆಳ್ಳಾರೆ (www.vknews.in) : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ ಸಂಸ್ಥಾಪನಾ ದಿನಾಚರಣೆ ಯ ಅಂಗವಾಗಿ ಬೆಳ್ಳಾರೆ ವಲಯ ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಇಂದು ಜರುಗಿತು. ಪಾಪ್ಯುಲರ್ ಫ್ರಂಟ್ ಸುಳ್ಯ ವಿಭಾಗ ಅಧ್ಯಕ್ಷ ಫೈಝಲ್ ಬೆಳ್ಳಾರೆ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಭಾಷಣ ಮಾಡಿದ ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಪ್ರಸಕ್ತ ಭಾರತದಲ್ಲಿ ಗಣರಾಜ್ಯ ವ್ಯವಸ್ಥೆ ಅಪಾಯದಲ್ಲಿದೆ. ದೇಶದ ರೈತರ,ದಲಿತರ,ಅಲ್ಪಸಂಖ್ಯಾತರ ನೈಜ ಸಮಸ್ಯೆಯ ಬಗ್ಗೆ ಚಾಕಾರವೆತ್ತದೆ ಬಿಜೆಪಿ, ಸಂಘಪರಿವಾರ ದೇಶವನ್ನು ಧರ್ಮಾಧಾರಿತವಾಗಿ ವಿಭಜನೆಗೊಳಿಸಿ ಪರಸ್ಪರ ಧ್ವೇಷ ಹರಡಿಸಿ ರಾಜಕೀಯ ಲಾಭ ಪಡೆದು ಸಂವಿಧಾನದ ಆಶಯ ಆದರ್ಶವನ್ನು ನಾಶಪಡಿಸುತ್ತಿದ್ದಾರೆ.
ಇಂತಹ ಅಪಾಯಕಾರಿ ಸನ್ನಿವೇಶದಲ್ಲಿ ದೇಶದ ಗಣರಾಜ್ಯವನ್ನು ರಕ್ಷಿಸುವ ಕೆಲಸವನ್ನು ಪಾಪ್ಯುಲರ್ ಫ್ರಂಟ್ ನಡೆಸುತ್ತಿದ್ದು ಎಲ್ಲರೂ ಈ ಹೋರಾಟದಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯಿತಿ ಸದಸ್ಯರಾದ ಇಕ್ಬಾಲ್ ಬೆಳ್ಳಾರೆ, ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಸಮಿತಿ ಕೋಶಾಧಿಕಾರಿ ಮಮ್ಮಾಲಿ ಹಾಜಿ, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಗೌರವಾಧ್ಯಕ್ಷ ನಾಸಿರ್ ಆರಂಡ, ಕೋಶಾಧಿಕಾರಿ ಹಸೈನಾರ್ ಹಾಜಿ, ಎಸ್.ಡಿ.ಪಿ.ಐ ವಲಯ ಅಧ್ಯಕ್ಷ ಸಿದ್ದೀಕ್ ಬೆಳ್ಳಾರೆ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಜಾಬಿರ್ ಸಿ.ಎಂ ಸ್ವಾಗತಿಸಿ ಫೈಝಲ್ ಎಂ.ಆರ್ ವಂದಿಸಿದರು. ಬಶೀರ್ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.