(www.vknews.in)
ಅಲ್ ಮದೀನ ವಿದ್ಯಾಸಂಸ್ಥೆ ಮಂಜನಾಡಿಯಲ್ಲಿ ಕಳೆದ 29 ವರ್ಷಗಳಿಂದ ಮರ್ಹೂಂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರು ಸ್ಥಾಪಿಸಿ ಮುನ್ನಡೆಸಿದ ಸಂಸ್ಥೆ. ಇಲ್ಲಿ 5 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ವಿದ್ಯಾಭ್ಯಾಸ ಪಡೆದಿರುತ್ತಾರೆ ಇವರೆಲ್ಲರನ್ನು ಒಟ್ಟುಗೂಡಿಸಿ ಡಿಸೆಂಬರ್ 25 ರಂದು ಸ್ನೇಹ ಮಿಲನ ಕಾರ್ಯಕ್ರಮ ಅಲ್ ಮದೀನ ಕ್ಯಾಂಪಸ್ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಅಬ್ದುಲ್ ಖಾದಿರ್ ಸಖಾಫಿ ಅಲ್ ಮದೀನ (ಜನರಲ್ ಮ್ಯಾನೇಜರ್ ಅಲ್ ಮದೀನ) ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಜಿ.ಎಂ. ಮುಹಮ್ಮದ್ ಖಾಮಿಲ್ ಸಖಾಫಿ ಹಾಗೂ ಮುಹಮ್ಮದ್ ಕುಂಞಿ ಅಮ್ಜದಿ, ಅಬ್ದುಲ್ಲ ಅಹ್ಸನಿ, ರಝಾಕ್ ಮಾಸ್ಟರ್ ನಾವೂರು ಮುನೀರ್ ಸಖಾಫಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಎಲ್ಲಾ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಅಧ್ಯಕ್ಷ ಶರೀಫ್ ಸಹದಿ ಹಾಗೂ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮರ್ಝೂಕಿ ಅಸ್ಸಖಾಫ್, ಉಪಾಧ್ಯಾಕ್ಷ, ನ್ಯಾಯವಾದಿ ಮಹಮ್ಮದ್ ಅಸ್ಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.