(www. vknews.in) ; ಪ್ರಸ್ತುತ ಸಮಾಜದಲ್ಲಿ ಆತ್ಮಹತ್ಯೆಯ ಮೂಲಕ ಯುವಜನತೆ ಪ್ರಾಣ ಕಳೆದುಕೊಳ್ಳುತ್ತಿರುವ ಗಂಭೀರ ವಿಚಾರವನ್ನು ವಿಷಯವಾಗಿ ಭಾಷಣ ಆರಂಭಿಸಿದ ಉಸ್ತಾದರು ಜೀವನದಲ್ಲಿ ಎದುರಾಗುವ ಸಮಸ್ಯೆ,ಪ್ರಯಾಸ ಅಥವಾ ಕಷ್ಟಗಳಿಗೆ ಆತ್ಮಹತ್ಯೆ ಪರಿಹಾರ ಅಲ್ಲವೆಂದು ಜುಮಾಅ ಭಾಷಣದಲ್ಲಿ ತಿಳಿಸಿದರು.ಸಮಸ್ಯೆಗಳು ಎಂದ ಮೇಲೆ ಪರಿಹಾರ ಇದ್ದೇ ಇರುತ್ತದೆ,ಸಮಸ್ಯೆಗಳು ಎಂಬುವುದು ಒಬ್ಬ ವ್ಯಕ್ತಿಯ ಬದುಕಿನಲ್ಲಿ ಬರುವ ಸರ್ವೇಸಾಮಾನ್ಯ ಸಂಗತಿಯಾಗಿದ್ದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡದೇ ಆತ್ಮ ಘಾತುಕ ಕ್ರೀಯೆಗೆ ಕೊರಳೊಡ್ಡುತ್ತಿರುವುದು ದುರದೃಷ್ಟಕರ ಸಂಗತಿ ಎಂದರು.ಬದುಕು ಎಂಬುವುದು ಅಲ್ಲಾಹು ಮನುಷ್ಯರಾದ ನಮಗೆ ನೀಡಿದ ದೊಡ್ಡ ಅನುಗ್ರಹವಾಗಿದ್ದು ಆತ್ಮಹತ್ಯೆ ಮೂಲಕ ತನ್ನನ್ನು ತಾನು ಶಿಕ್ಷಿಸಿಕೊಂಡು ಬದುಕನ್ನು ಅಂತ್ಯಗೊಳಿಸುವುದು ಘೋರ ಅಪರಾಧವೆಂದು ಎಚ್ಚರಿಸಿದರು.ಇಹಲೋಕದಲ್ಲಿ ನೆಮ್ಮದಿ ಕಾಣದವರಿಗೆ ಪರಲೋಕದಲ್ಲೂ ವಿಜಯವಿಲ್ಲ ಎಂಬುವುದನ್ನು ಭಾಷಣದಲ್ಲಿ ಸ್ಪಷ್ಟಪಡಿಸಿದರು.ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಳ್ಳುವವರು ಪರಲೋಕದಲ್ಲಿ ಕೊರಳೊಡ್ಡುತ್ತಲೇ ನೋವು ಅನುಭವಿಸುವ ಶಿಕ್ಷೆಗೆ ಒಳಗಾದರೆ,ವಿಷ ಕುಡಿದು ಬದುಕು ಮುಗಿಸುವವರು ಪರಲೋಕದಲ್ಲಿ ವಿಷಕುಡಿಯುವ ಘೋರ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂಬುವುದಾಗಿ ಪುನರುಚ್ಚಿಸಿದರು.
ಆತ್ಮಹತ್ಯೆ ಮೂಲಕ ಬದುಕು ಮುಗಿಸುವ ವ್ಯಕ್ತಿಯ ಮೇಲಿನ ಮಹ್ಯತ್ತ್ ನಮಾಝ್ ಮಾಡಲು ಹಿಂಜರಿಯುವುದು ಇಸ್ಲಾಮಿನ ತತ್ವಗಳಿಗೆ ವಿರುದ್ದವೆಂಬ ಕಿವಿಮಾತನ್ನು ಕೊನೆಯಲ್ಲಿ ನೀಡಿದರು.ಕಿಬ್ಲಾಗೆ ನೇರವಾಗಿ ಪ್ರಾರ್ಥಿಸುವ ಪ್ರತಿಯೊಬ್ಬ ವ್ಯಕ್ತಿಯು ಯಾವುದೇ ರೀತಿಯಲ್ಲಿ ಮರಣಹೊಂದಿದರೂ ಮಹ್ಯತ್ತ್ ನಮಾಝಿಗೆ ಅರ್ಹನೆಂದು ತಮ್ಮ ಜುಮಾಅ ಭಾಷಣದ ತಿಳಿಸಿದರು.
ಅನಾವಶ್ಯಕ ಕಷ್ಟಗಳನ್ನು ತಂದೊಡ್ಡಿಕೊಳ್ಳದೆ ಇರುವುದರಲ್ಲಿ ತೃಪ್ತಿಪಟ್ಟು ಬದುಕಲು ಸರ್ವಶಕ್ತನಾದ ಅಲ್ಲಾಹು ನಮಗೆಲ್ಲರಿಗೂ ವಿವೇಚನೆಯನ್ನು ನೀಡಲಿ ಎಂಬ ಪ್ರಾರ್ಥನೆಯೊಂದಿಗೆ ಜುಮಾಅ ಭಾಷಣವನ್ನು ಕೊನೆಗೊಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.