ಉಳ್ಳಾಲ (www.vknews. in) : ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ಸಮಿತಿ ವ್ಯಾಪ್ತಿಯ ಪಕ್ಷ ಸಮಾವೇಶವು ಕ್ಷೇತ್ರ ಉಪಾಧ್ಯಕ್ಷರಾದ ಫಾರೂಕ್ ಝಲ್ ಝಲ್ ಇವರ ಅದ್ಯಕ್ಷತೆಯಲ್ಲಿ ಕಲ್ಲಾಪು ಯುನಿಟಿ ಹಾಲ್ ನಲ್ಲಿ ನಡೆಯಿತು.
ಪ್ರಾಸ್ತವಿಕವಾಗಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಅಧಿಕಾರ ವರ್ಗವು ಎಸ್ ಡಿ ಪಿ ಐ ಪಕ್ಷವನ್ನು ಇಲ್ಲವಾಗಿಸುವ ಪ್ರಯತ್ನ ಮಾಡುತ್ತಿದ್ದರೂ ಜನರು ಗುಂಪು ಗುಂಪಾಗಿ ಪಕ್ಷ ಸೇರುತ್ತಿರುವುದು ಇವರುಗಳ ನಿದ್ದೆಗೆದಿಸುತ್ತಿದೆ ಎಂದರು
ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರು ಮಾತನಾಡುತ್ತಾ ಸಂಘ ಪರಿವಾರ ಪ್ರೇರಿತ ಬಿಜೆಪಿ ಸರಕಾರವು ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವಾಗ, ಮಸೀದಿಗಳ ಒಳಗೆ ಮಂದಿರವನ್ನು ಹುಡುಕುತ್ತಿರುವಾಗ, ಧರ್ಮಗಳ ನಡುವೆ ದ್ವೇಷ ಹರಡುತ್ತಿರುವಾಗ,ನ್ಯಾಯಾಂಗ ವ್ಯವಸ್ಥೆಯ ಮೇಲೆ ಭರವಸೆ ಕಳೆದು ಕೊಳ್ಳುತ್ತಿರುವಾಗ,ಮಾಧ್ಯಮಗಳು ಕೇಂದ್ರದ ಗುಲಾಮಗಿರಿಯನ್ನು ಮಾಡುತ್ತಿರುವಾಗ, ವಿರೋಧ ಪಕ್ಷಗಳು ನಪುಂಸಕತ್ವ ತೋರುತ್ತಿರುವಾಗ ಉಳಿದಿರುವ ನಂಬಿಕೆ ಹಾಗೂ ಭರವಸೆ ಕೇವಲ ಎಸ್ ಡಿ ಪಿ ಐ ಪಕ್ಷ ಮಾತ್ರ ಎಂದು ಹೇಳಿದರು
ಮಂಜನಾಡಿ ಬ್ಲಾಕ್ ಅಧ್ಯಕ್ಷರಾದ ನೌಶದ್ ಕಲ್ಕಟ್ಟ ಮಾತನಾಡುತ್ತ ಕೋಮುವಾದಿ ಗಳೊಂದಿಗೆ ಸೇರಿ ಬಡವರ ಆಶಾಕಿರಣ ವಾಗಿದ್ದ ಮಾಹಿತಿ ಸೇವಾ ಕೇಂದ್ರಗಳನ್ನು ಮುಚ್ಚಿಸಿ ವಿಕೃತಿ ಮೆರೆದದ್ದು ಎಸ್ ಡಿ ಪಿ ಐ ಪಕ್ಷದ ಮೇಲಿರುವ ದ್ವೇಷದಿಂದ ಆದರೂ ರೇಶನ್ ಕಾರ್ಡ್ ಹಾಗೂ ಇನ್ನಿತರ ಸರಕಾರಿ ದಾಖಲೆಗಳಿಗಾಗಿ ಅಲೆದಾಡಿಸಿದ್ದು ಈ ಕ್ಷೇತ್ರದ ಜನತೆಯನ್ನು ಎಂಬುವುದು ಎಲ್ಲರಿಗೂ ನೆನಪಿರಲಿ ಎಂದು ಜನತೆಯನ್ನು ಎಚ್ಚರಿಸಿದರು.
ಕಾರ್ಯಕ್ರಮದ ಕೇಂದ್ರ ಬಿಂದು ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ದೇಶದ ಆಡಳಿತ ವ್ಯವಸ್ಥೆಯು ಸರ್ವಾಧಿಕಾರಿ ಮನೋಭಾವದಿಂದ ಕೂಡಿದ್ದು ಎಲ್ಲವನ್ನು ಇಲ್ಲದಾಗಿಸುವ ಪ್ರಯತ್ನ ಸಂಘ ಪರಿವಾರದಿಂದ ನಡೆಯುತ್ತಿದ್ದು ಅದನ್ನು ಹಿಮ್ಮೆಟ್ಟಿಸಲು ಒಗ್ಗಟ್ಟಿನಿಂದ ಮಾತ್ರ ಸಾಧ್ಯ ಎಂದರು. ಯಾವುದೇ ಪಕ್ಷದಲ್ಲಿರುವವರು ಆಗಲಿ ಎಸ್ ಡಿ ಪಿ ಐ ಪಕ್ಷದೊಂದಿಗೆ ಬರುವುದಾದರೆ ಅವರಿಗೆ ಪಕ್ಷದ ಬಾಗಿಲು ಯಾವತ್ತೂ ತೆರೆದಿದ್ದು ಯಾವುದೇ ಅಂಜಿಕೆಯಿಲ್ಲದೇ ನಮ್ಮ ಪಕ್ಷವನ್ನು ಸೇರಬಹುದು ಎಂಬ ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಕೊಂಡು ನೂರಾರು ಯುವಕರು ಎಸ್ ಡಿ ಪಿ ಐ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರಿದರು.
ಈ ಸಮಯದಲ್ಲಿ SDPI ರಾಜ್ಯ ಸಮಿತಿ ಸದಸ್ಯರಾದ ನವಾಝ್ ಉಳ್ಳಾಲ್ , ಜಿಲ್ಲಾ ಸಮಿತಿ ಸದಸ್ಯರಾದ ನಝೀರ್ ಪುದು , ಅಬೂಬಕ್ಕರ್ ಮದ್ದ, ಮಂಗಳೂರು ವಿಧಾನಸಭಾ ಕ್ಷೇತ್ರ ಕೋಶಾಧಿಕಾರಿ ರೌಪ್ ಉಳ್ಳಾಲ್ ಅದೇ ರೀತಿ ಕ್ಷೇತ್ರ ಸಮಿತಿಯ ಪದಾಕಾರಿಗಳು, ಸದಸ್ಯರು ಬ್ಲಾಕ್ ಅಧ್ಯಕ್ಷರುಗಳು, ಮತ್ತು ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ. SN ಇಕ್ಬಾಲ್ , ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಟಿ ಇಸ್ಮಾಯಿಲ್, ಸಜೀಪನಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಬಿತ ಡಿ ಸೋಜಾ , ಸದಸ್ಯರಾದ ಬಿ ಪಾತಿಮಾ , ಉಳ್ಳಾಲ ನಗರಸಭಾ ಸದಸ್ಯರುಗಳಾದ ಝರಿನಾ ರೌಪ್ ,ಕಮರುನ್ನಿಶಾ ನಿಝಾಮ್, ಶಹನಾಝ್ ಅಕ್ರಂ, ರುಕಿಯ ಇಕ್ಬಾಲ್, ರಮೀಝ್ ಉಳ್ಳಾಲ್, ಅಸ್ಗರ್ ಅಲಿ, ಮತ್ತು ಪಕ್ಷದ ಸ್ಥಳೀಯ ಮಟ್ಟದ ನಾಯಕರು,ಹಿತೈಷಿಗಳು ಭಾಗವಹಿಸಿದ್ದರು
ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ರವರು ಸ್ವಾಗತಿಸಿ ಅಬ್ದುಲ್ ರಹ್ಮಾನ್ ಬೊಳಿಯಾರ್ ಕಾರ್ಯಕ್ರಮವನ್ನು ನಿರೂಪಿಸಿ SM ಬಶೀರ್ ರವರು ಧನ್ಯವಾದ ಗೈದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.